Advertisement

Udayavani ರೇಷ್ಮೆ ಜತೆ ದೀಪಾವಳಿ ಸ್ಪರ್ಧೆ: ನೀವೂ ಪಾಲ್ಗೊಳ್ಳಿ

09:58 AM Oct 31, 2024 | Team Udayavani |

ಮಣಿಪಾಲ: ಉದಯವಾಣಿ ಪತ್ರಿಕೆ ಹಬ್ಬದ ಸಂಭ್ರಮ ಹೆಚ್ಚಿಸಲೆಂದೇ ಪ್ರತೀ ವರ್ಷದಂತೆ ಈ ವರ್ಷವೂ ಪ್ರತಿಷ್ಠಿತ “ರೇಷ್ಮೆ ಜತೆ ದೀಪಾವಳಿ’ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರತೀ ವರ್ಷ ದೀಪಾವಳಿ ವೇಳೆ ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ.

Advertisement

ಮಹಿಳೆಯರಿಗಂತೂ ರೇಷ್ಮೆ ಸೀರೆ ಅಚ್ಚುಮೆಚ್ಚಿನ ಉಡುಗೆ. ರೇಷ್ಮೆ ಸೀರೆ- ಉಡುಪುಗಳನ್ನು ದೀಪಾ ವಳಿ ಸಂದರ್ಭ ತೊಟ್ಟು ಸಂಭ್ರಮಿಸುವು ದಷ್ಟೇ ಅಲ್ಲ; ಅವುಗಳ ಉತ್ತಮ ಫೋಟೋಗಳನ್ನು ಕಳುಹಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ.

ಉದಯವಾಣಿ ಪತ್ರಿಕೆಯು ತನ್ನ ಮಹಿಳಾ ಓದುಗರಿಗೆ ಉಡುಪಿ ಬನ್ನಂಜೆಯ ಜವುಳಿ ಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ಅವರ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ.‌ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದು.

ಈ ವರ್ಷದ ಥೀಮ್‌ “ರೇಷ್ಮೆ ಜತೆಗೆ ದೀಪದ ನಾರಿಯರು’ ಆಗಿದ್ದು, ಇದನ್ನು ಬಿಂಬಿಸುವಂತೆ ಚಿತ್ರ ತೆಗೆಯಿರಿ. ಸಾಂಪ್ರದಾಯಿಕ ರೇಷ್ಮೆಯ ಪ್ರತಿಷ್ಠಿತ ಸ್ಥಾನವನ್ನು ಮತ್ತಷ್ಟು ಔನ್ನತ್ಯಕ್ಕೇರಿಸಲು ಹಾಗೂ ಆ ಮೂಲಕ ಮತ್ತೆ ಸಾಂಪ್ರದಾಯಿಕತೆಗೆ ಒತ್ತು ನೀಡುವುದು ಈ ಸ್ಪರ್ಧೆಯ ಉದ್ದೇಶ. ಕುಟುಂಬ ಸದಸ್ಯೆಯರು, ಗೆಳತಿಯರು ಹೀಗೆ ಗುಂಪಾಗಿ ಎಲ್ಲರೂ ಸಾಂಪ್ರದಾಯಿಕವಾಗಿ ರೇಷ್ಮೆ ಸೀರೆ ಉಟ್ಟು ದೀಪಾವಳಿ ಆಚರಿಸುವ ಫೋಟೋಗಳನ್ನು ಕಳುಹಿಸಿ.

ಗುಂಪಿನಲ್ಲಿ ಕನಿಷ್ಠ ಮೂರು ಮಂದಿ ಇರಬೇಕು. ಉತ್ತಮ ರೆಸೊಲ್ಯೂಶನ್‌ ಹೊಂದಿ ರುವ, ಕಲಾತ್ಮಕವಾಗಿರುವ, ನೈಜತೆಯಿಂದ ಕೂಡಿರುವ ವಿಶಿಷ್ಟ ಪರಿಕಲ್ಪನೆಯ ಫೋಟೋಗಳಿಗೆ ಹೆಚ್ಚಿನ ಪ್ರಾಶಸ್ತ್ಯ . ಹಳೆಯ ಫೋಟೋ ಗಳನ್ನು ಪರಿಗಣಿಸಲಾಗುವುದಿಲ್ಲ. ಫೋಟೋದ ಮೇಲೆ ಹೆಸರು, ಲೋಗೋ, ಸ್ಟುಡಿಯೋ ಹೆಸರು ಇದ್ದರೆ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

Advertisement

ಫೋಟೋಗಳನ್ನು ಕಳುಹಿಸಲು ಕೊನೆಯ ದಿನಾಂಕ ನವೆಂಬರ್‌ 4. ಉತ್ತಮ ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ 25 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ದ್ವಿತೀಯ ಬಹುಮಾನ 15 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ತೃತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಹಾಗೂ 10 ಮಂದಿಗೆ ಪ್ರೋತ್ಸಾಹಕ ಬಹುಮಾನಗಳಿವೆ.

ತಾಲೂಕುವಾರು ತಲಾ ಮೂರು ಮೆಚ್ಚುಗೆ ಗಳಿಸಿದ ಚಿತ್ರಗಳನ್ನು ಆಯ್ಕೆ ಮಾಡಿ ವಿಶೇಷ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು.

ಫೋಟೋ ಕಳುಹಿಸುವ ರೀತಿ
ವಾಟ್ಸ್‌ ಆ್ಯಪ್‌ ಸಂಖ್ಯೆ 6364888901ಗೆ ಚಿತ್ರವನ್ನು ಕಳುಹಿಸಿಕೊಡಿ. ಈ ಸಂಖ್ಯೆಯನ್ನು ನಿಮ್ಮ ಮೊಬೈಲ್‌ನಲ್ಲಿ ಉಳಿಸಿಕೊಳ್ಳಿ. ಅನಂತರ ಈ ಸಂಖ್ಯೆಗೆ ನಮಸ್ತೆ ಅಥವಾ ಜಜಿ ಎಂಬ ಸಂದೇಶ ಕಳುಹಿಸಿ. ಬಳಿಕ ಅದರಲ್ಲಿ ಬರುವ ಸಂದೇಶದ ಸೂಚನೆಯಂತೆ ಮುಂದುವರಿಯಿರಿ. ಕೊನೆಯಲ್ಲಿ ಚಿತ್ರ ಕಳುಹಿಸಿರುವುದಕ್ಕೆ ಧನ್ಯವಾದ ಸಂದೇಶ ನಿಮ್ಮನ್ನು ತಲುಪುತ್ತದೆ. ಫೋಟೋಗಳನ್ನು ಇ-ಮೇಲ್‌ ಮೂಲಕವೂ ಕಳುಹಿಸಬಹುದು. ಆದರೆ ಇ-ಮೇಲ್‌ ವಿಳಾಸ ri@udayavani.com

Advertisement

Udayavani is now on Telegram. Click here to join our channel and stay updated with the latest news.

Next