Advertisement
ಕೊಡಿಯಾಲ್ ಬೈಲ್: ಪ್ರೇರಣಾ ತಂಡದಿಂದ ಪಿವಿಎಸ್ ವೃತ್ತದ ಆಸುಪಾಸಿ ನಲ್ಲಿ ಸ್ವತ್ಛತಾ ಕಾರ್ಯ ಜರಗಿತು. ಸ್ವಾಮಿ ಜಿತಕಾಮಾನಂದಜಿ ಸಮ್ಮುಖದಲ್ಲಿ ಆರ್.ಕೆ. ರಾವ್ ಹಾಗೂ ಗಿರೀಶ್ ರಾವ್ ಚಾಲನೆ ನೀಡಿದರು. ಪ್ರೇರಣಾ ತಂಡದ ಸಂಯೋಜಕ ಸದಾನಂದ ಉಪಾ ಧ್ಯಾಯ ಮಾರ್ಗದರ್ಶನದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮದಾನ ನಡೆಸಲಾಯಿತು. ಪಿವಿಎಸ್ ವೃತ್ತದಿಂದ ವಿಆರ್‌ಎಲ್ ಕಚೇರಿವರೆಗಿನ ಮಾರ್ಗವನ್ನು ಸ್ವತ್ಛಗೊಳಿಸಲಾಯಿತು. ನಿತೀನ್‌ಚಂದ್ರ, ಸ್ವರೂಪ ಶೆಟ್ಟಿ ಹಾಗೂ ಜಿ.ಕೆ.ಉಡುಪ ಸಹಿತ ಸುಮಾರು 75 ಜನ ಕಾರ್ಯಕರ್ತರು ಭಾಗವಹಿಸಿದರು.
Related Articles
Advertisement
ಬಲ್ಮಠ: ದೇಶಾಭಿಮಾನಿ ತಂಡದಿಂದ ಕೆಎಂಸಿ ಆಸ್ಪತ್ರೆ ಮುಂಭಾಗ ಹಾಗೂ ಜ್ಯೋತಿ ವೃತ್ತದ ಸುತ್ತಮುತ್ತ ಸ್ವತ್ಛತೆ ನಡೆಯಿತು. ಶ್ರೀಕರ ಪ್ರಭು ಹಾಗೂ ಪ್ರಭಾಕರ್ ಹಸಿರು ನಿಶಾನೆ ತೋರಿದರು. ಮೊದಲಿಗೆ ಕೆ.ಎಂ.ಸಿ. ಆಸ್ಪತ್ರೆಯ ಮುಂಭಾಗದ ಕಾಲು ದಾರಿ ಹಾಗೂ ರಸ್ತೆಗಳನ್ನು ಸ್ವತ್ಛಗೊಳಿಸಲಾಯಿತು. ಅನಂತರ ಪಕ್ಕದ ರಸ್ತೆಯ ಬದಿ ಹಾಗೂ ತೋಡುಗಳನ್ನು ಕಸಮುಕ್ತ ವನ್ನಾಗಿಸಲಾಯಿತು. ಸುಮಾರು 70 ಜನ ಕಾರ್ಯಕರ್ತರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡಿದರು. ಕಾರ್ಯಕ್ರಮ ವನ್ನು ನಾಗೇಶ್ ಹಾಗೂ ಅಶ್ವಿನ್ ಸಂಯೋಜಿಸಿದರು.
ಮಣ್ಣಗುಡ್ಡ: ಗಾಂಧಿ ಪಾರ್ಕ್‌ನಲ್ಲಿ ಸ್ಥಳೀಯ ನಾಗರಿಕರು ಸ್ವತ್ಛತಾ ಕಾರ್ಯ ಆಯೋಜಿಸಿದ್ದರು. ಮನಪಾ ಸದಸ್ಯೆ ಜಯಂತಿ ಆಚಾರ್ ಹಾಗೂ ವಂದನಾ ನಾಯಕ್ ಚಾಲನೆ ನೀಡಿದರು. ಪಾರ್ಕಿನ ಒಳಗಡೆಯಿರುವ ಕಾಲುದಾರಿಯನ್ನು ಗುಡಿಸಿ ಸ್ವತ್ಛಗೊಳಿಸಲಾಯಿತು. ಪ್ರಾಧ್ಯಾ ಪಕಿ ಸ್ಮಿತಾ ಶೆಣೈ ಭಾಗವಹಿಸಿದರು.
ಕೆಪಿಟಿ: ಕರ್ನಾಟಕ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪಾಲಿಟೆಕ್ನಿಕ್ ಮುಂಭಾಗದಲ್ಲಿ ಎರಡು ತಂಡಗಳಾಗಿ ಸ್ವತ್ಛತೆಯನ್ನು ನೆರವೇ ರಿಸಿದರು. ಮೊದಲ ತಂಡ ಹೆದ್ದಾರಿ ಹಾಗೂ ಪಕ್ಕದಲ್ಲಿರುವ ಆವರಣ ಗೋಡೆಯ ಬದಿಯ ಹುಲ್ಲು ಹಾಗೂ ಕಸವನ್ನು ತೆಗೆದು ಸ್ವತ್ಛಗೊಳಿಸಿದರು. ಮತ್ತೂಂದು ತಂಡ ಪಾಲಿಟೆಕ್ನಿಕ್ ಮುಂಭಾಗದ ಗೋಡೆಗೆ ಅಂಟಿಸಿದ್ದ ಭಿತ್ತಿಚಿತ್ರಗಳನ್ನು ಕಿತ್ತು ಶುಚಿಗೊಳಿಸಿದರು. ಅನಂತರ ರಸ್ತೆ ಹಾಗೂ ಫುಟ್‌ಪಾತ್ ಸ್ವತ್ಛಗೊಳಿಸಿದರು.
ಪಡೀಲ್: ಸ್ವತ್ಛ ಪಡೀಲ್ ತಂಡ ದಿಂದ ಸ್ವತ್ಛತಾ ಕಾರ್ಯಕ್ರಮ ನಡೆಯಿತು. ರತ್ನಾಕರ್ ಅಮೀನ್ ಹಾಗೂ ಹರೀಶ್ ಆಚಾರ್ ಕಾರ್ಯಕ್ರಮವನ್ನು ಆರಂಭಗೊಳಿ ಸಿದರು. ರೈಲ್ವೆ ಅಂಡರ್ ಪಾಸ್‌ನಿಂದ ಪೆರ್ಲ ವೀರನಗರ ವರೆಗೆ ರಸ್ತೆಯ ಎರಡು ಬದಿಗಳನ್ನು ಸ್ವತ್ಛಗೊಳಿಸಲಾಯಿತು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ತೆಗೆಯಲಾಯಿತು. ಸಂಯೋಜಕ ಉದಯ ಕೆ. ಪಿ., ಪಿ. ಟಿ. ಕೋಟ್ಯಾನ್ ಮತ್ತಿತರರು ಶ್ರಮದಾನಗೆ„ದರು.
ದೇರಳಕಟ್ಟೆ: ಕ್ಷೇಮ ವೈದ್ಯಕೀಯ ವಿದ್ಯಾರ್ಥಿಗಳಿಂದ ಸ್ವತ್ಛತಾ ಅಭಿಯಾನ ದೇರಳಕಟ್ಟೆಯಲ್ಲಿ ನಡೆಯಿತು. ಡಾ| ಅನಿರ್ವಾನ್ ಚಕ್ರವರ್ತಿ ಹಾಗೂ ಡಾ| ಸಚಿನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಸ್ಟಿಸ್ ಕೆ. ಎಸ್. ಹೆಗ್ಡೆ ಮೆಡಿಕಲ್‌ಅಕಾಡೆಮಿಯ ಮುಂಭಾಗದ ರಸ್ತೆಯಿಂದ ಫಾದರ್ ಮುಲ್ಲರ್ ಕಾಲೇಜಿ ನವರೆಗೆ ಸ್ವತ್ಛತೆಯನ್ನು ಕೈಗೊಳ್ಳಲಾಯಿತು. ಡಾ| ದೀಕ್ಷಿತ್, ಡಾ| ಅನುರಾಗ, ಡಾ| ಶಶಿಕುಮಾರ ಶೆಟ್ಟಿ ಸೇರಿ ದಂತೆ ಅನೇಕ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸ್ವತ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ಕಾಟಿಪಳ್ಳ: ಜೆಸಿಐ ಗಣೇಶಪುರ ಸದಸ್ಯರಿಂದ ಸ್ವತ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಿಯಾ ದೇವಾಡಿಗ ಹಾಗೂ ವಿದ್ಯಾರಾಜ್ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕರ್ತರು ಗಣೇಶಪುರ ವೃತ್ತದಿಂದ ಎಂಆರ್‌ಪಿಎಲ್ ಕಾರ್ಗೊಗೇಟ್ ವರೆಗಿನ ಪರಿಸರವನ್ನು ಸ್ವತ್ಛಗೊಳಿಸಿದರು. ನವೋದಯ ಯುವಕ ವೃಂದ, ಟೀಂ ಆಸರೆ, ಕೇಸರಿ ಫ್ರೆಂಡ್ಸ್, ಹಾಗೂ ಕಾಟಿಪಳ್ಳ ಪೋಸ್ಟ್ ಆಫೀಸ್ ಸಿಬ್ಬಂದಿ ಅಭಿಯಾನದಲ್ಲಿ ಭಾಗವಹಿ ಸಿದರು. ಚೇತನ್‌ಅಮೀನ್, ರಘುರಾಮ್ ತಂತ್ರಿ, ಪ್ರಶಾಂತ ನಾಯಕ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಡಾ| ಸಂಪತ್ ಕುಮಾರ ಅಭಿಯಾನವನ್ನು ಸಂಯೋಜಿಸಿದರು.
ಕರಂಗಲಪಾಡಿ: ಸಂತ ಅಲೊಶಿ ಯಸ್ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿ ಗಳಿಂದ ಕರಂಗಲಪಾಡಿಯಲ್ಲಿ ಸ್ವತ್ಛತಾ ಕಾರ್ಯ ಜರಗಿತು. ಪ್ರಶೋಭ ಹಾಗೂ ಸನಲ್ ಕಾರ್ಯಕ್ರಮವನ್ನು ಆರಂಭಿಸಿ ದರು. ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಕರಂಗಲಪಾಡಿ ಬಿಜೈ ಸೋನಿ ಟವರ್ಸ್ ಎದುರಿನ ರಸ್ತೆಯಲ್ಲಿ ಸ್ವತ್ಛತೆಯನ್ನು ಕೈಗೊಳ್ಳಲಾಯಿತು.