Advertisement
ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಗಲ್ಲಿ ಪ್ರದೇಶಗಳಿದ್ದು, ಅವುಗಳಿಗೆ ತ್ಯಾಜ್ಯ ಸಾಗಾಟದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದೇ ಕಾರಣದಿಂದಾಗಿ ಅಂತಹ ಪ್ರದೇಶಗಳಿಗೆ ತೆರಳಬಲ್ಲ ತ್ರಿಚಕ್ರ ವಾಹನಗಳನ್ನು ಬಳಸಿಕೊಂಡು ತ್ಯಾಜ್ಯ ಸಂಗ್ರಹ ಪ್ರಕ್ರಿಯೆಗೆ ಮುಂದಾಗಲಾಗಿತ್ತು. ಅದರಂತೆ ಪಾಲಿಕೆ 24 ಎಲೆಕ್ಟ್ರಿಕಲ್ ತ್ರಿಚಕ್ರ ವಾಹನಗಳನ್ನು ಮಂಗಳೂರಿಗೆ ಮೊದಲ ಬಾರಿ ಪರಿಚಯಿಸಿ 6 ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ನಗರದ ಸ್ಟೇಟ್ಬ್ಯಾಂಕ್, ಹಂಪನಕಟ್ಟೆ, ಪಚ್ಚನಾಡಿ ಸಹಿತ ಇನ್ನೂ ಕೆಲವು ಭಾಗಗಳಲ್ಲಿ ವಾಹನಗಳು ಸಂಚಾರಿಸುತ್ತಿವೆ.
ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಪೌರ ಕಾರ್ಮಿಕರಿದ್ದಾರೆ. ಈ ಕಾರಣದಿಂದ ತ್ರಿಚಕ್ರ ವಾಹನಗಳನ್ನು ಮಹಿಳಾ ಚಾಲಕಿಯರ ಮೂಲಕ ನಿರ್ವಹಿಸುವುದು ಪಾಲಿಕೆ ಯೋಜನೆ ಹಾಕಿಕೊಂಡಿತ್ತು. ಮಹಿಳಾ ಸಿಬಂದಿಯನ್ನು ಈ ರೀತಿ ಬಳಸಿಕೊಳ್ಳುವ ಮೂಲಕ ಪಾಲಿಕೆಗೆ ಎದುರಾಗುವ ಚಾಲಕರ ಹೆಚ್ಚುವರಿ ಹೊರೆಯನ್ನು ಕೂಡ ನಿಭಾಯಿಸುವ ಲೆಕ್ಕಾಚಾರವಿತ್ತು. ಆದರೆ ಇದು ನಿರೀಕ್ಷಿತ ಪ್ರಮಾಣದಲ್ಲಿ ಕೈಹಿಡಿದಿಲ್ಲ. ಹೆಚ್ಚಿನ ಮಹಿಳೆಯರಿಗೆ ವಾಹನ ಓಡಿಸಲು ಸೂಕ್ತ ತರಬೇತಿ ಸಿಗದ ಕಾರಣ ರಸ್ತೆಗೆ ಇಳಿಸಲು ಧೈರ್ಯವಿಲ್ಲ ಎಂಬುವುದು ಮಹಿಳಾ ಪೌರ ಕಾರ್ಮಿಕರ ಅಳಲು. ಸಿಬಂದಿ ಕೊರತೆ
ತ್ರಿಚಕ್ರ ವಾಹನದ ಮೂಲಕ ಕಸ ಸಂಗ್ರಹಿಸುವ ಸಮಯದಲ್ಲಿ ಮಹಿಳಾ ಚಾಲಕಿಯರನ್ನು ಬಳಸುವ ವೇಳೆ ಹೆಚ್ಚುವರಿ ಸಿಬಂದಿ ಬೇಕಾಗುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ವಿವಿಧ ಕಾರಣಗಳಿಂದಾಗಿ ಸಿಬಂದಿ ಕೊರತೆ ಎದುರಾಗುತ್ತದೆ. ಇದರಿಂದ ಸಮರ್ಪಕವಾಗಿ ಕಾರ್ಯಾಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಮಾತು.
Related Articles
ಎಲೆಕ್ಟ್ರಿಕ್ ವಾಹನವಾಗಿರುವ ಹಿನ್ನೆಲೆ ನಿರ್ವಹಣೆ ಸುಲಭ, ಇಂಧನ ಉಳಿತಾಯ. 250 ಕೆ.ಜಿ. ಸಂಗ್ರಹಣೆ ಸಾಮರ್ಥ್ಯ, ರಸ್ತೆ ಬದಿಯಿಂದಲೂ ತ್ಯಾಜ್ಯ ಸಂಗ್ರಹಕ್ಕೆ ಅವಕಾಶವಿದೆ. ಗಲ್ಲಿ, ಓಣಿಗಳಿಗೆ ತೆರಳಲು ಸಲೀಸು. ಪ್ರಸ್ತುತ ಆಯ್ದ ವಾರ್ಡ್ಗಳಿಗೆ ವಾಹನಗಳನ್ನು ನೀಡಲಾಗಿದ್ದು ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ತುಂಬಾ ಅನುಕೂಲವಾಗುತ್ತಿದೆ.
-ಆನಂದ್ ಸಿ.ಎಲ್. ಪಾಲಿಕೆ ಆಯುಕ್ತರು
Advertisement