Advertisement
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣ ಕೇಂದ್ರದಿಂದ ಗುರುವಾರ ಸಾಯಂಕಾಲ 4.04 ಗಂಟೆಗೆ ನಭದತ್ತ ಚಿಮ್ಮಿದ ರಾಕೆಟ್ 18 ನಿಮಿಷಗಳ ಬಳಿಕ ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸಿತು. ಪಿಎಸ್‌ಎಲ್‌ವಿ- ಸಿ 59 ರಾಕೆಟ್ ಮೂಲಕ ಉಡಾ ವಣೆ ಮಾಡಲಾಗಿದ್ದು, 600 x 60000 ಕಿ.ಮೀ. ಕಕ್ಷೆಯಲ್ಲಿ ಕೂರಿಸಲಾಯಿತು.
ಸೂರ್ಯನ ಕೊರೋನಾ ಭಾಗವನ್ನು ಅಧ್ಯ ಯನ ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಇದರಲ್ಲಿ 2 ಉಪ ಗ್ರಹ ಗಳಿದ್ದು, ಒಂದರ ಹಿಂದೊಂದು ನಿಲ್ಲುವ ಮೂಲಕ ತಾತ್ಕಾಲಿಕ ಗ್ರಹಣವನ್ನು ರೂಪಿಸಿಕೊಂಡು ಸೂರ್ಯನ ಕೊರೋನಾವನ್ನು ಅಧ್ಯಯನ ನಡೆಸಲಿದೆ. ಈ ಮೂಲಕ ಭೂಮಿಯ ಮೇಲೆ ಸೌರಕಿರಣದಿಂದಾಗುತ್ತಿರುವ ಪರಿಣಾಮಗಳನ್ನು ಅಧ್ಯ ಯನ ಮಾಡಲಾಗುತ್ತದೆ. 23 ವರ್ಷಗಳ ಹಿಂದೆ ಇಸ್ರೋ ಹಾಗೂ ಐರೋಪ್ಯ ಒಕ್ಕೂಟ ಸಹಭಾಗಿತ್ವದಲ್ಲಿ ಉಪಗ್ರಹ ಉಡಾವಣೆ ಮಾಡಿದ್ದವು.