Advertisement

“ಚೆಕ್‌ ದೇ ಇಂಡಿಯಾ’ಸಿನಿಮಾಗೆ ಸ್ಫೂರ್ತಿಯಾಗಿದ್ದ ಮಾಜಿ ಹಾಕಿ ನಾಯಕಿ ಮೇಲೆ ಪತಿಯಿಂದ ಹಲ್ಲೆ

04:27 PM Feb 21, 2020 | keerthan |

ಗುವಾಹಟಿ: ಕಾಮನ್‌ವೆಲ್ತ್‌ ಗೆದ್ದು “ಚೆಕ್‌ ದೇ ಇಂಡಿಯಾ’ ಬಾಲಿವುಡ್‌ ಸಿನಿಮಾಗೆ ಸ್ಫೂರ್ತಿಯಾಗಿದ್ದ ಅರ್ಜುನ ಪ್ರಶಸ್ತಿ ವಿಜೇತೆ, ಭಾರತ ಹಾಕಿ ಮಾಜಿ ನಾಯಕಿ ಸೂರಜ್‌ ಲತಾ ದೇವಿ ಮೇಲೆ ಅವರ ಪತಿಯೇ ವರದಕ್ಷಿಣೆಗಾಗಿ ತೀವ್ರ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.

Advertisement

ಜಮೀನೊಂದಕ್ಕೆ ಸಂಬಂಧಿಸಿದ ವಿಷಯದಲ್ಲಿ 3 ಗಂಟೆಗೂ ಹೆಚ್ಚು ಕಾಲ ಪತಿ ಹಲ್ಲೆ ನಡೆಸಿದ್ದಾರೆ ಎಂದು ಮಣಿಪುರದ ಸೂರಜ್‌ ಲತಾ ದೇವಿ ಆರೋಪಿಸಿದ್ದಾರೆ.

“ಶಾಂತ ಸಿಂಗ್‌ ಜತೆ 2005ರಲ್ಲಿ ಮದುವೆಯಾಗಿತ್ತು. ಆ ದಿನಗಳಿಂದಲೇ ವರದಕ್ಷಿಣೆಗಾಗಿ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ದಿನವೂ ಕಿರಿಕಿರಿ, ಜಗಳ ನಡೆಯುತ್ತಿತ್ತು. ನಾನು ಗೆದ್ದು ತಂದ ಪದಕಗಳನ್ನು ನೋಡಿಕೊಂಡು ಅಪಹಾಸ್ಯ ಮಾಡುತ್ತಿದ್ದರು. ನನಗೆ ಅರ್ಜುನ ಪ್ರಶಸ್ತಿ ಬಂದ ಸಮಯದಲ್ಲಿ ತಲೆ ಮರೆಸಿಕೊಂಡಿದ್ದರು. ಮರ್ಯಾದೆಗೆ ಅಂಜಿ ಪತಿಯ ವರ್ತನೆ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಆದರೆ ತಾಳ್ಮೆಗೊಂದು ಮಿತಿಯಿದೆ. ಅದನ್ನು ಮೀರಿದ್ದರಿಂದ ಹೇಳುವ ಅನಿವಾರ್ಯ ಈಗ ನನಗೊದಗಿ ಬಂದಿದೆ’ ಎಂದು ತಿಳಿಸಿದರು.

ದೇವಿ ನೇತೃತ್ವದಲ್ಲಿ ಭಾರತ ಮಹಿಳಾ ಹಾಕಿ ತಂಡ ಕಾಮನ್ವೆಲ್ತ್‌ ಸೇರಿದಂತೆ ಸತತ 3 ಅಂತಾರಾಷ್ಟ್ರೀಯ ಕೂಟದಲ್ಲಿ ಸತತ ಚಿನ್ನದ ಪದಕ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next