Advertisement
26 ವರ್ಷದ ಸಬಲೆಂಕಾ ವರ್ಷಾ ರಂಭದ ಆಸ್ಟ್ರೇಲಿಯನ್ ಓಪನ್ ಹಾಗೂ ವರ್ಷಾಂತ್ಯದ ಯುಎಸ್ ಓಪನ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು. ಜತೆಗೆ ಇತರ ಎರಡು ಪ್ರಶಸ್ತಿಗಳೂ ಒಲಿದಿದ್ದವು. 2024ರಲ್ಲಿ 56-14 ಅಂತರದ ಗೆಲುವಿನ ದಾಖಲೆ ಸಬಲೆಂಕಾ ಅವರದ್ದಾಗಿದೆ. ಅಕ್ಟೋಬರ್ನಲ್ಲಿ ಇಗಾ ಸ್ವಿಯಾಟೆಕ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಆಟಗಾರ್ತಿ ಎನಿಸಿದ್ದರು.
ಉಳಿದಂತೆ ಎಮ್ಮಾ ನವಾರೊ “ಮೋಸ್ಟ್ ಇಂಪ್ರೂವ್x ಪ್ಲೇಯರ್’, ಪೌಲಾ ಬಡೋಸಾ “ಕಮ್ಬ್ಯಾಕ್ ಪ್ಲೇಯರ್’, ಲುಲು ಸನ್ “ನ್ಯೂ ಕಮರ್ ಆಫ್ ದ ಇಯರ್’ ಮತ್ತು ಸಾರಾ ಎರಾನಿ-ಜಾಸ್ಮಿನ್ ಪೌಲ್ “ಡಬಲ್ಸ್ ಟೀಮ್ ಆಫ್ ದ ಇಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಲ್ಲಿ ಇಟಲಿಯ ಎರಾನಿ-ಜಾಸ್ಮಿನ್ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ.