Advertisement
ಪಾಕಿಸ್ತಾನ ಮತ್ತು ಭಾರತ ನಡುವಿನ ಲೀಗ್ ಪಂದ್ಯ ಫೆಬ್ರವರಿ 23 ರಂದು ಭಾನುವಾರ ನಡೆಯಲಿದೆ. ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತದ ಗುಂಪಿನಲ್ಲಿರುವ ಇತರ ಎರಡು ತಂಡಗಳೆಂದರೆ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್. ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶವನ್ನು ಮತ್ತು ಮಾರ್ಚ್ 2 ರಂದು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆಯಿದೆ.
Related Articles
Advertisement
ಎರಡು ಸೆಮಿಫೈನಲ್ಗಳನ್ನು ಮಾರ್ಚ್ 4 ರಂದು (ಮೀಸಲು ದಿನವಿಲ್ಲದೆ) ಮತ್ತು ಮಾರ್ಚ್ 5 ರಂದು (ಮೀಸಲು ದಿನದೊಂದಿಗೆ) ನಿಗದಿಪಡಿಸಲಾಗಿದೆ. ಮಾರ್ಚ್ 9 ರಂದು ನಡೆಯುವ ಫೈನಲ್ ಗೆ ಮೀಸಲು ದಿನವೂ ಇದೆ. ಭಾರತ ಅರ್ಹತೆ ಪಡೆದರೆ ಮೊದಲ ಸೆಮಿಫೈನಲ್ ಯುಎಇಯಲ್ಲಿ ಆಡಲಾಗುತ್ತದೆ. ಭಾರತ ಅರ್ಹತೆ ಪಡೆಯದಿದ್ದರೆ ಪಾಕಿಸ್ತಾನದಲ್ಲಿ ಈ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯವನ್ನು ಲಾಹೋರ್ ನಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ ಒಂದು ವೇಳೆ ಭಾರತ ಫೈನಲ್ ಪ್ರವೇಶ ಮಾಡಿದರೆ ಆಗ ಪಂದ್ಯ ಯುಎಇ ನಲ್ಲಿ ನಡೆಯುತ್ತದೆ.