Advertisement
ಗಿರೀಶ್ ಅವರ ಈ ಮಾತು ಅಲ್ಲೊಂದು ನಗುವಿಗೆ ವೇದಿಕೆ ಸೃಷ್ಟಿಸಿತು. ಮೈಕ್ ಎತ್ತಿಕೊಂಡ ಸುದೀಪ್, “ಆಗ ನಾನು ಯಾರಿಗೂ ಹೊಡೆದಿಲ್ಲ, ಈಗ ಹೊಡೆಯಬೇಕಾಗುತ್ತದೆ. ಮಾತನಾಡುವ ಖುಷಿಯಲ್ಲಿ ಗಿರೀಶ್ ಹೊಡೆದೆನೆಂದು ಹೇಳಿ ಒಳ್ಳೆಯ ಕಾಣಿಕೆ ಕೊಟ್ಟರು’ ಎಂದು ತಮಾಷೆಯಾಗಿಯೇ ಹೇಳಿದ ಸುದೀಪ್, ಚಿತ್ರದ ಹಾಡುಗಳ ಹಾಗೂ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಲಾಪ್ ಬೋರ್ಡ್ ಹಿಡಿದವನು ನಿರ್ದೇಶಕನಾಗುತ್ತಾನೆ, ಡ್ಯಾನ್ಸರ್‌ಗಳು ನಾಯಕ-ನಾಯಕಿಯಾಗುತ್ತಾರೆ ಎಂದ ಸುದೀಪ್, ಸಂಗೀತನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಅವರ ಬಗ್ಗೆ ಮಾತನಾಡಲು ಮರೆಯಲಿಲ್ಲ. “ಶ್ರೀಧರ್ ಈಗಾಗಲೇ ಮೆಲೋಡಿ ಕಿಂಗ್
ಎಂಬುದನ್ನು ಸಾಬೀತು ಮಾಡಿದ್ದಾರೆ. ನನ್ನ ಅಮ್ಮನ ಮೊಬೈಲ್‌ನಲ್ಲಿ ಇವತ್ತಿಗೂ “ಮುಸ್ಸಂಜೆ ಮಾತು’ ಚಿತ್ರದ “ಏನಾಗಲಿ …’ ಹಾಡಿನ
ಕಾಲರ್ ಟ್ಯೂನ್ ಇದೆ’ ಎನ್ನುತ್ತಾ ಶ್ರೀಧರ್ ಅವರ ಬೆನ್ನು ತಟ್ಟಿದರು.
ಬಿಡುಗಡೆಯಾಗುವವರೆಗೆ ಕಾಯಲೇಬೇಕು. ಏಕೆಂದರೆ,ನಿದೆ ನಿರ್ದೇಶಕ ಗಿರೀಶ್ ಆ ಬಗ್ಗೆ ಗುಟ್ಟು ಬಿಟ್ಟುಕೊಡಲು ರೆಡಿಯಿಲ್ಲ. ನಾಯಕ ನಿರಂಜನ್ ಶೆಟ್ಟಿಗೆ “ರಾಜರು’ ಮೂಲಕ ಬ್ರೇಕ್ ಸಿಗುವ ನಿರೀಕ್ಷೆ. ಜೊತೆಗೆ ಕ್ಲೈಮ್ಯಾಕ್ಸ್ ಚಿತ್ರದ ನಿಜವಾದ ಶಕ್ತಿ ಎಂಬುದು ಅವರ ಮಾತು. ನಾಯಕಿ ಶಾಲಿನಿ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಹಾಡುಗಳ ಬಗ್ಗೆ ಹೇಳಿಕೊಂಡರು.