ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada-11) ವಾರದ ಟಾಸ್ಕ್‌ಗಾಗಿ ಎರಡು ತಂಡಗಳು ರಚನೆಯಾಗಿದೆ. ಎರಡು ತಂಡಗಳ ನಡುವೆ ಕ್ಯಾಪ್ಟನ್ಸಿ ಟಾಸ್ಕ್ ಗಾಗಿ ಹಣಾಹಣಿ ನಡೆದಿದೆ.
ʼಡ್ರಮ್ ಮಾರೋ ಡ್ರಮ್ʼ ಟಾಸ್ಕ್‌ನಲ್ಲಿ ಹನುಮಂತು ಅವರ ತಂಡ ಮೊದಲ ಟಾಸ್ಕ್‌ನಲ್ಲಿ ಗೆದ್ದಿದೆ. ರಜತ್ ಅವರು ಉಸ್ತುವಾರಿ ಮಾಡಿದ ರೀತಿಗೆ ಎದುರಾಳಿ ತಂಡದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಭವ್ಯ ಅವರು ಕ್ಯಾಪ್ಟನ್ಸಿ ಓಟಕ್ಕೆ ಮೊದಲ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ.
ಮಂಜು ಅವರನ್ನು ಗೌತಮಿ ಕ್ಯಾಪ್ಟನ್ಸಿ ಓಟಿದಿಂದ ಹೊರಗಿಟ್ಟಿದ್ದಾರೆ. ತಾನು ಆಡುತ್ತೇನೆ ಉಸ್ತುವಾರಿ ಮಾಡಲ್ಲವೆಂದಿರುವ ಚೈತ್ರಾ (Chaithra Kundapura) ಅವರನ್ನೇ ಗೌತಮಿ ಹಾಗೂ ಹನುಮಂತು ಅವರು ಉಸ್ತುವಾರಿ ಮಾಡಬೇಕೆಂದು ಹೇಳಿದ್ದಾರೆ.
“ಆಡೋಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತೀನಿ ಹಟ ಕಟ್ಟಿ ಉಸ್ತುವಾರಿ ಕೊಡುತ್ತಾರೆ. ಎಲಿಮಿನೇಟ್ ಆಗಿ ವಾಪಾಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಕುಗ್ಗಿಸುತ್ತಾರೆ. ಆಡುತ್ತೀನಿ ಅಂದ್ರೆ ಆಡೋಕೆ ಕೊಡಲ್ಲ. ಆಮೇಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರೆ” ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಚೈತ್ರಾ ಸಹ ಸ್ಪರ್ಧಿಗಳ ಜತೆ ಹೇಳಿಕೊಂಡಿದ್ದಾರೆ.
ನೀವು ಆಡುತ್ತೀನಿ ಅಂಥ ಹೇಳಿದ್ರೆ ನಾನು ಕೂರಿಸಲ್ಲ ಚೈತ್ರಾ ಎಂದು ಗೌತಮಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾನು ಆಡುತ್ತೀನಿ ಉಸ್ತುವಾರಿ ಮಾಡಲ್ಲವೆಂದು ಚೈತ್ರಾ ಗೌತಮಿ ಅವರ ಬಳಿ ಹೇಳಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಗೌತಮಿ ಅವರು ಚೈತ್ರಾ ಅವರನ್ನು ಹೊರಗಿಟ್ಟಿದ್ದಾರೆ.
ಈ ಸಂಚಿಕೆ ಗುರುವಾರ ರಾತ್ರಿ (ಡಿ.12 ರಂದು) ಪ್ರಸಾರವಾಗಲಿದೆ.