ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ನಾಮಿನೇಷನ್ ಕಿಚ್ಚು ಹೆಚ್ಚಾಗಿದೆ. ಸ್ಪರ್ಧಿಗಳ ನಡುವೆ ನಾಮಿನೇಷನ್ ವಿಚಾರ ಕಿತ್ತಾಟಕ್ಕೆ ಕಾರಣವಾಗಿದೆ.
ಸೀಸನ್ -10ರಲ್ಲಿ ಗಮನ ಸೆಳೆದ ಪ್ರತಾಪ್, ತನಿಷಾ ಅವರು ದೊಡ್ಮನೆಗೆ ಬಂದು ನಾಮಿನೇಷನ್ ಟಾಸ್ಕ್ ನೆರವೇರಿಸಿದ್ದಾರೆ. ನಾಮಿನೇಷನ್‌ಗಾಗಿ ಬಂದ ತನಿಷಾ ಮಂಜು – ಮೋಕ್ಷಿತ ನಡುವಿನ ಶೀತಲ ಸಮರಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಇನ್ನೊಂದು ಕಡೆ ತುಕಾಲಿ ಸಂತು ಅವರ ಮುಂದಾಳತ್ವದಲ್ಲಿ ಮತ್ತೊಂದು ಸುತ್ತಿನ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ.
ಮಡಿಕೆಯನ್ನು ಹಿಡಿದುಕೊಂಡು ಅದರಲ್ಲಿ ನಾಮಿನೇಷನ್ ಮಾಡುವವರ ಭಾವಚಿತ್ರ ಅಂಟಿಸಿ ಮಡಿಕೆಯನ್ನು ಸಿಮ್ಮಿಂಗ್ ಪೂಲ್‌ಗೆ ಎಸೆಯಬೇಕು.
ಧನರಾಜ್ ಅವರು ರಜತ್ ಅವರ ಹೆಸರನ್ನು ನಾಮಿನೇಷನ್‌ಗೆ ಬಳಸಿದ್ದಾರೆ. ಗ್ರೋಸರಿ ಟಾಸ್ಕ್‌ನಲ್ಲಿ ಮಾಡುತ್ತೇವೆ ಅದರಲ್ಲಿ ತ್ರಿವಿಕ್ರಮ್ ಅವರು ಹೇಳುತ್ತಾರೆ. ವಿನ್ ಆಗೋದಕ್ಕೆ ರಜತ್ ಕಾರಣ ಅಂಥ ಎಂದು ಮಡಿಕೆಯನ್ನು ನೀರಿಗೆ ಎಸೆದಿದ್ದಾರೆ.
ಯಾವಾನೋ ಕೊಟ್ಟ ರೀಸನ್‌ಗೆ ನನಗೆ ಬಂದು ಕೊಡುತ್ತಾನೆ ಗುಗ್ಗು ನನ್ಮಗ ಎಂದಾಗ ಧನರಾಜ್ ನಿಮ್ಮ ಲೆವೆಲ್ ಏನಂಥ ನನಗೆ ಗೊತ್ತಾಗಿದೆ. ನಾನು ಆಟ ಆಡೋಕೆನೇ ಬಂದಿದ್ದೇನೆ ಎಂದು ಮಾತನಾಡುತ್ತಾ ರಜತ್ ಅವರ ಕೆನ್ನೆ ಮುಟ್ಟಿ ಅಂಕಲ್ ಅಂಕಲ್ ಎಂದು ಹೇಳಿದ್ದಾರೆ.
ಇದಕ್ಕೆ ಗರಂ ಆದ ರಜತ್ ನಾನು ಎಂಥವನು ಅಂಥ ನಿನಗೆ ಇನ್ನು ಗೊತ್ತಿಲ್ಲ. ನನ್ನ ಹತ್ರ ಈ ಆಟಗಳನ್ನೆಲ್ಲ ಆಡಬೇಡ. ಲೋ ಮಗು ಅಂಥ ಇದಕ್ಕೆ ಕಣೋ ನಿನಗೆ ಹೇಳೋದು. ಪಾಪು ಪಾಪು ಎಂದಾಗ ಕೆನ್ನೆ ಮುಟ್ಟಿದ ಧನರಾಜ್ ಅವರ ಕೈ ಮುಟ್ಟಿದ್ದಾರೆ.
ರಜತ್ – ಧನರಾಜ್ ಕೈಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ. ಇದನ್ನು ಗೌತಮಿ ಹಾಗೂ ಮಂಜು ಅವರು ಬಂದು ತಡೆದಿದ್ದಾರೆ.
ಇನ್ನೊಂದು ಕಡೆ ಕಳೆದ ಸೀಸನ್‌ನ ವಿನ್ನರ್ ಕಾರ್ತಿಕ್ ಹಾಗೂ ಸ್ಪರ್ಧಿಯಾಗಿದ್ದ ನಮೃತಾ ಅವರು ಗೆಸ್ಟ್ ಆಗಿ ಬಂದಿದ್ದಾರೆ. ತಲೆಗೆ ಮಸಿ ನೀರು ಹಾಗೂ ಮುಖಕ್ಕೆ ಶೇವಿಂಗ್ ಕ್ರೀಮ್ ಹಾಕುವ ಮೂಲಕ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ.
ಈ ಸಂಚಿಕೆ ಮಂಗಳವಾರ ರಾತ್ರಿ (ಡಿ.10 ರಂದು) ಪ್ರಸಾರವಾಗಲಿದೆ.