ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ವಾರವಿಡೀ ನಡೆದ ವಿಚಾರಗಳ ಕಿಚ್ಚ ಸುದೀಪ್ ಮಾತನಾಡಿ ಸ್ಪರ್ಧಿಗಳ ಸರಿ – ತಪ್ಪುಗಳಿಗೆ ಛಾಟಿ ಬೀಸಿದ್ದಾರೆ.
ಪಂಚಾಯ್ತಿ ಶುರುವಾಗಲೇ ಮೊದಲೇ ಆರಂಭದಲ್ಲೇ ತ್ರಿವಿಕ್ರಮ್ ಹಾಗೂ ಗೌತಮಿ ನಡುವೆ ಶೋಭಾ ಶೆಟ್ಟಿ ಅವರು ಆಚೆ ಹೋದ ಬಗ್ಗೆ ನಡೆದ ಮಾತುಕತೆಯ ವಿಡಿಯೋ ಪ್ಲೇ ಮಾಡಿ ಸುದೀಪ್ ಅವರು ಇಬ್ಬರನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ತ್ರಿವಿಕ್ರಮ್‌ಗೆ ಮಾತಿನ ಮೂಲಕ ಛಾಟಿ ಬೀಸಿದ ಕಿಚ್ಚ..
ಇನ್ನು ಶೋಭಾ ಶೆಟ್ಟಿ ಆಚೆ ಹೋದ ವಿಚಾರದಲ್ಲಿ ಗೌತಮಿ ಜತೆ ಮಾತನಾಡಿದ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ನಿರ್ಧಾರಗಳ ಬಗ್ಗೆ ಗೌರವವಿಲ್ಲವೆಂದು ಸುದೀಪ್ ಹೇಳಿದ್ದಾರೆ.
ಕಿಚ್ಚ ಅವರು ಇಬ್ಬರನ್ನು ಜಡ್ಜ್ ಗಳೆಂದು ಕರೆದಿದ್ದಾರೆ. ನಿಮಗೆ ಶಿಶಿರ್ ಹೋಗಬೇಕಾ ಡೈರೆಕ್ಟ್ ಆಗಿ ಕಳುಹಿಸಿ, ಶಿಶಿರನ್ನು ಸೇಫ್ ಮಾಡೋಕೆ ಶೋಭಾ ಅವರು ಆಚೆ ಹೋಗಿಲ್ಲ. ಅವರು (ಶೋಭಾ) ಆಚೆ ಹೋದದ್ದು ಬಿಗ್ ಬಾಸ್ ನಿರ್ಧಾರ ಅಲ್ಲ. ನನ್ನ ನಿರ್ಧಾರವೆಂದಿದ್ದಾರೆ. ಅವರು ಯಾಕೆ ಹೋಗಿದ್ದಾರೆ ಎನ್ನುವ ಸೂಕ್ಷ್ಮತೆ ನಿಮ್ಮಲ್ಲಿ ಈಗಲೂ ಇಲ್ಲ. ಈ ಬಗ್ಗೆ ನಾನೇ ಸ್ಪಷ್ಟನೆ ಕೊಡಬೇಕೆಂದು ಕಿಚ್ಚ ಹೇಳಿದ್ದಾರೆ.
ಶೋಭಾ ಅವರು ಮಾಡಿದ್ದು, ಶೋಭಾ ಅವರು ಯಾಕೆ ಹೋದ್ರು.. ಎಂದು ಕೇಳಿದಾಗ ತ್ರಿವಿಕ್ರಮ್ ನಾನು ಕನ್ ಫ್ಯೂಷನ್‌ನಲ್ಲಿದ್ದೆ ಎಂದಿದ್ದಾರೆ. ಇದಕ್ಕೆ ಸುದೀಪ್ ಯಾಕೆ ಕನ್ ಫ್ಯೂಷನ್ ನಿಮ್ಮ ಎದುರಲ್ಲೇ ತಾನೇ ಆದದ್ದು ಎಂದಿದ್ದಾರೆ.
ನೀವು ಕೋಪ ಮಾಡಿಕೊಳ್ಳಲ್ಲ ಅಂದ್ರೆ ಎರಡು ನಿಮಿಷ ಮಾತನಾಡುತ್ತೇನೆ ಅಣ್ಣಾ. ನಿಮ್ಮ ಮುಂದೆ ತಲೆತಗ್ಗಿಸೋದರಲ್ಲಿ ನನ್ನಗೇನು ಇಲ್ಲ ಅಣ್ಣಾ. ನಾನು ಬಿಗ್ ಬಾಸ್ ಅಗೌರವ ಕೊಟ್ಟಿದ್ದೇನೆ ಅಂದ್ರೆ ಈಗಲೂ ನಾನು ಆಚೆ ಹೋಗಲು ರೆಡಿಯಾಗಿದ್ದೇನೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ನಾನು ಏನು ಮಾಡಬೇಕು ಅದನ್ನು ನನಗೆ ಬಿಡಿ. ನನ್ನ ಕೆಲಸದ ಬಗ್ಗೆ ನನಗೆ ಹೇಳಬೇಡಿ. ನಿಮ್ಮ ಕೇಳಿ ನಾನು ಮಾಡ್ಕೋಬೇಕಾ? ನನ್ನ ಮುಂದೆ ತಲೆತಗ್ಗಿಸುವ ನನ್ ಮಗದ್ ನನ್ನ ಜೀವನದಲ್ಲಿ ಇಲ್ಲ. ಆ ತರಾ ಆಗಿದ್ರೆ ಅಂಥ ಹೇಳಬೇಡಿ. ಆ ತರಾ ಆಗಿದೆ ಎಂದು ಕಿಚ್ಚ ವಾರ್ನ್ ಮಾಡಿದ್ದಾರೆ.
ನೀವು ಕನ್ ಫ್ಯೂಷನ್‌ನಲ್ಲಿ ಮಾತನಾಡಿಲ್ಲ. ಕಂಪ್ಲೇಟ್ ರೀತಿ ಮಾತನಾಡಿದ್ದೀರಿ ಅಂತ ಚೆನ್ನಾಗಿ ಗೊತ್ತು ಎಂದು ಕಿಚ್ಚ ಹೇಳಿದ್ದಾರೆ. 10 ವರ್ಷ ನಿಂತುಕೊಂಡು ಶೋ ಮಾಡಿರುವ ನನಗೆ ಇನ್ನು 10 ನಿಮಿಷ ನಿಂತು ಮಾತನಾಡುವುವುದು ನನಗೆ ದೊಡ್ಡ ವಿಷಯವಲ್ಲ. ಶೋಭಾ ಅವರನ್ನು ಕಳಿಸೋದು ನನ್ನ ಬೋಲ್ಡ್ ನಿರ್ಧಾರವಾಗಿತ್ತು. ಬಿಗ್ ಬಾಸ್ ನಿರ್ಧಾರವಲ್ಲವೆಂದು ಸುದೀಪ್ ಹೇಳಿದ್ದಾರೆ.
ನಿಮಗೆ ಅವರು ಯಾಕೆ ಹೋದ್ರು ಅಂಥ ಕೇಳ್ಬೇಕು ಅಂಥ ಅನ್ನಿಸಿದ್ರೆ ಆಚೆ ಹೋಗಿ ಕೇಳಿ. ಅಕ್ಕಿ ಕಾಳು ಇದೆಯಾ ಎಂದು ತ್ರಿವಿಕ್ರಮ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಲ್ಲದೆ ತ್ರಿವಿಕ್ರಮ್ ಅವರು ಆಟದ ವಿಚಾರವಾಗಿ ಮಾತನಾಡಿದ ಮತ್ತೊಂದು ವಿಡಿಯೋ ಪ್ಲೇ ಮಾಡಿ ಪ್ರಶ್ನೆ ಮಾಡಿದ್ದಾರೆ. ಒಬ್ಬರು ಹೋದ್ರು ಇನ್ನು ನಿಮಗೆ ಬುದ್ಧಿ ಬಂದಿಲ್ವಾ ಎಂದು ತ್ರಿವಿಕ್ರಮ್ ಅವರು ಆಚೆ ಹೋಗಲು ರೆಡಿಯಾಗಿದ್ದೇನೆ ಎನ್ನುವ ಮಾತಿಗೆ ಕಿಚ್ಚ ಅವರು ಉತ್ತರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಏನೆಲ್ಲ ಮಾತನಾಡುತ್ತಾರೆ. ಏನೆಲ್ಲ ಗುಟ್ಟು ಮಾತನಾಡುತ್ತಾರೆ. ಯಾವ ರೀತಿ ಮಾತನಾಡುತ್ತಾರೆ ಎಲ್ಲವನ್ನು ಪ್ರೇಕ್ಷಕರಿಗೆ ಇಂಚಿಂಚು ತೋರಿಸಿ ಎಂದು ಸುದೀಪ್ ಬಿಗ್ ಬಾಸ್ ಟೀಮ್‌ಗೆ ಹೇಳಿದ್ದಾರೆ.
ಕಿಚ್ಚನಿಂದ ನಿಲ್ಲುವ ಸ್ಪರ್ಧಿಗಳಿಗೆ ನಿಲ್ಲುವ ಶಿಕ್ಷೆ:
ಶೋ ಮುಕ್ತಾಯವಾಗುವರೆಗೂ ನಿಂತುಕೊಂಡು ಮಾತನಾಡಿ. ಇಲ್ಲಿ ನಿಂತು ಮಾತನಾಡುವ ನೋವು ನಿಮಗೂ ಅರ್ಥ ಆಗಬೇಕು. ಎಪಿಸೋಡ್ ಮುಗಿಯವರೆಗೆ ಎಲ್ಲರೂ ನಿಂತು ಮಾತನಾಡಿ ಎಂದು ಕಿಚ್ಚ ಹೇಳಿದ್ದಾರೆ. ಹಾಗಾಗಿ ಎಲ್ಲರೂ ನಿಂತುಕೊಂಡೇ ಮಾತನಾಡಿದ್ದಾರೆ.
ಚೈತ್ರಾ ಅವರಿಗೆ ಈ ವಾರ ನೀವು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ. ಆದರೆ ಕಿರುಚಿ ಮಾತನಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ.
ಮೋಕ್ಷಿತಾ ಅವರು ಗೌತಮಿ ಅವರ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಹಿಂದೇಟು ಹಾಕಿ, ತನ್ನ ಸ್ವಾಭಿಮಾನಕ್ಕಿಂತ ಯಾವುದು ದೊಡ್ಡದಲ್ಲ ಎನ್ನುವ ಮಾತಿಗೆ ಕಿಚ್ಚ ಮೋಕ್ಷಿತಾಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಕೆಟ್ ಅನ್ನೋ ಮಾತು ಬಂದಿತ್ತು. ನಾನು ಅವರ ಬಳಿ ಹೋಗಿ ಕೇಳಿ ಇದಿದ್ರೆ ಆ ಮಾತು ವಾಪಾಸ್ ಬರುತ್ತಿತ್ತು ಎಂದು ಮೋಕ್ಷಿತಾ ಹೇಳಿದಾಗ ಸುದೀಪ್ ಅವರು ಪ್ರತಿಕ್ರಿಯೆ ನೀಡಿ, ಬಿಗ್ ಬಾಸ್‌ಗೆ ನಿಯಮಕ್ಕೆ ಗೌರವ ನೀವು ಕೊಡಬೇಕು. ನಿಮ್ಮ ನಿರ್ಧಾರ ತಪ್ಪು ಅಂಥ ಹೇಳಲ್ಲ. ಆದರೆ ಅದು ತುಂಬಾ ದುಬಾರಿ. ಇದು ನಿಯಮದ ಉಲ್ಲಂಘನೆ ಆಗಿದೆ. ಇದಕ್ಕೆ ಶಿಕ್ಷೆ ಅಂತೂ ಖಂಡಿತ ಬರುತ್ತದೆ. ಅವಕಾಶಕ್ಕಾಗಿ ನೀವು ಒಳಗಡೆ ಹೋಗಿದ್ದೀರಿ ಅನ್ನೋದು ನೆನಪು ಇರಲಿ. ಬಿಗ್ ಬಾಸ್ ಗೆಲ್ಲೋಕೆ ಬಂದಿದ್ದೀರೋ ಮಂಜು, ಗೌತಮಿಯನ್ನು ಮೆಚ್ಚಿಸೋಕೆ ಬಂದಿದ್ದೀರೋ? ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ಯಾವುದು ಶಾಶ್ವತ ಅಲ್ಲ. ಇದು ಬಿಗ್ ಬಾಸ್. ಗೆಲ್ಲೋದು ನೋಡಿ ಎಂದು ಬುದ್ದಿಮಾತು ಹೇಳಿದ್ದಾರೆ.
ಪ್ರೇಕ್ಷಕರೊಬ್ಬರು ಮೋಕ್ಷಿತಾ ಅವರಿಗೆ ವಿಡಿಯೋ ಮೂಲಕ ಪ್ರಶ್ನೆ ಕೇಳಿದ್ದಾರೆ. ಗೌತಮಿ, ಮಂಜು ಅವರ ಜತೆಯಾಗಿ ಆಡುತ್ತೀರಾ ಎಂದು ಕೇಳಿದ್ದಾರೆ. ಮಂಜು ಅವರು ತುಂಬಾ ಮಾತನಾಡಿ ಬಿಟ್ಟಿದ್ದಾರೆ. ಇದರಿಂದ ತುಂಬಾ ನೋವು ಆಗಿದೆ. ಆ ಕಾರಣದಿಂದ ಮತ್ತೆ ಅವರೊಂದಿಗೆ ಸೇರಲ್ಲವೆಂದು ಮೋಕ್ಷಿತಾ ಹೇಳಿದ್ದಾರೆ.
ಹನುಮಂತು ಅವರಿಗೆ ಪ್ರೇಕ್ಷಕರೊಬ್ಬರು ಸುರೇಶ್ ಅವರು ಮಾವ ಮಾವ ಎನ್ನುತ್ತೀರಿ ಅವರನ್ನೇ ನಾಮಿನೇಟ್ ಮಾಡುತ್ತಾರೆ ಯಾಕೆ? ಎಂದಿದ್ದಾರೆ. ಅವರು ಮಾಡೋದೆ ಹಾಗೆ ಹಾಗಾಗಿ ಆ ರೀತಿ ಮಾಡುತ್ತೇನೆ ಎಂದಿದ್ದಾರೆ.
ಸೇಫ್ ಆದವರು ಯಾರೆಲ್ಲ.. ಈ ವಾರ ನಾಮಿನೇಟ್ ಆದವರಲ್ಲಿ ಮೊದಲಿಗೆ ರಜತ್, ಗೌತಮಿ ಅವರು ಎಲಿಮಿನೇಷನ್ ತೂಗುಗತ್ತಿಯಿಂದ ಬಚಾವ್ ಆಗಿದ್ದಾರೆ.