ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ವಾರದ ಕತೆಯಲ್ಲಿ ಕಿಚ್ಚ ಸುದೀಪ್ (Kiccha Sudeep) ಈ ವೀಕೆಂಡ್ ನಾನಾ ವಿಚಾರದ ಬಗ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ವಾರ ವಾರ ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿನ ಕೆಲವರ ವೈಯಕ್ತಿಕ ದ್ವೇಷಗಳ ಅಂತರ ಹೆಚ್ಚಾಗುತ್ತಿದೆ. ಗೌತಮಿ – ಮಂಜು ಒಂದು ಕಡೆ ಜತೆಯಾಗಿದ್ದರೆ ಇವರಬ್ಬರ ಜತೆಯೂ ಅಷ್ಟಕಷ್ಟಕ್ಕೆ ಎನ್ನುವಂತಿರುವ ಮೋಕ್ಷಿತಾ ಅವರ ಪರಿಸ್ಥಿತಿ ಮನೆಯಲ್ಲಿ ಬೇರೆಯೇ ರೀತಿಯಲ್ಲಿದೆ.
ಗೌತಮಿ ಅವರ ಜತೆ ಆಡೋದಾದ್ರೆ ತಾನು ಆಡೋದೆ ಇಲ್ಲ ಎಂದು ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್ ನಿಂದಲೇ ಆಚೆ ಉಳಿದಿದ್ದರು. ನನಗೆ ನನ್ನ ಸ್ವಾಭಿಮಾನನೇ ಮುಖ್ಯವೆಂದ ಮೋಕ್ಷಿತಾಗೆ ಪಂಚಾಯ್ತಿಯಲ್ಲಿ ಕಿಚ್ಚ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಅರ್ಥ ಆಯ್ತಾ, ಅರ್ಥ ಆಯ್ತಾ ಎಂದು ಊರಿಗೆಲ್ಲ ಹೇಳುವ ಒಬ್ಬರಿಗೆ ಇನ್ನು ಬಿಗ್ ಬಾಸ್ ರಿಯಲ್ ಗೇಮ್ ಏನು ಅಂಥ ಅರ್ಥನೇ ಆಗಿಲ್ಲವೆಂದು ಸುದೀಪ್ ಮೋಕ್ಷಿತಾ ಅವರ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.
ಇನ್ನು ಶೋಭಾ ಶೆಟ್ಟಿ ಆಚೆ ಹೋದ ವಿಚಾರದಲ್ಲಿ ಗೌತಮಿ ಜತೆ ಮಾತನಾಡಿದ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ನಿರ್ಧಾರಗಳ ಬಗ್ಗೆ ಗೌರವವಿಲ್ಲವೆಂದು ಸುದೀಪ್ ಹೇಳಿದ್ದಾರೆ.
ನೀವಿಬ್ಬರು ಬಿಗ್ ಬಾಸ್‌ನ ಜಡ್ಜ್ ಗಳು.. ಶೋಭಾ ಅವರು ಮಾಡಿದ್ದು, ಶೋಭಾ ಅವರು ಯಾಕೆ ಹೋದ್ರು.. ಎಂದು ಕೇಳಿದಾಗ ತ್ರಿವಿಕ್ರಮ್ ನಾನು ಕನ್ ಫ್ಯೂಷನ್‌ನಲ್ಲಿದ್ದೆ ಎಂದಿದ್ದಾರೆ. ಇದಕ್ಕೆ ಸುದೀಪ್ ಯಾಕೆ ಕನ್ ಫ್ಯೂಷನ್ ನಿಮ್ಮ ಎದುರಲ್ಲೇ ತಾನೇ ಆದದ್ದು ಎಂದಿದ್ದಾರೆ.
ನೀವು ಕೋಪ ಮಾಡಿಕೊಳ್ಳಲ್ಲ ಅಂದ್ರೆ ಎರಡು ನಿಮಿಷ ಮಾತನಾಡುತ್ತೇನೆ ಅಣ್ಣಾ. ನಿಮ್ಮ ಮುಂದೆ ತಲೆತಗ್ಗಿಸೋದರಲ್ಲಿ ನನ್ನಗೇನು ಇಲ್ಲ ಅಣ್ಣಾ. ನಾನು ಬಿಗ್ ಬಾಸ್ ಅಗೌರವ ಕೊಟ್ಟಿದ್ದೇನೆ ಅಂದ್ರೆ ಈಗಲೂ ನಾನು ಆಚೆ ಹೋಗಲು ರೆಡಿಯಾಗಿದ್ದೇನೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ನಾನು ಏನು ಮಾಡಬೇಕು ಅದನ್ನು ನನಗೆ ಬಿಡಿ. ನಿಮ್ಮ ಕೇಳಿ ನಾನು ಮಾಡ್ಕೋಬೇಕಾ? ನನ್ನ ಮುಂದೆ ತಲೆತಗ್ಗಿಸುವ ನನ್ ಮಗದ್ ನನ್ನ ಜೀವನದಲ್ಲಿ ಇಲ್ಲ. ಆ ತರಾ ಆಗಿದ್ರೆ ಅಂಥ ಹೇಳಬೇಡಿ. ಆ ತರಾ ಆಗಿದೆ ಎಂದು ಕಿಚ್ಚ ವಾರ್ನ್ ಮಾಡಿದ್ದಾರೆ.