ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನಕ್ಕೆ ಆಗಮಿಸಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸೋಮವಾರ ರಾತ್ರಿ ನಗರದ ಬೀದಿಗಳಲ್ಲಿ ರನ್ನಿಂಗ್ ಮಾಡಿ ಗಮನಸೆಳೆದರು.
ಸೋಮವಾರ ಸಂಜೆ ಕಲಾಪ ಮುಗಿಸಿ ಹೋಟೆಲ್ ಗೆ ಬಂದ ಸಚಿವ ಸಂತೋಷ ಲಾಡ್ , ಟ್ರ್ಯಾಕ್ ಪ್ಯಾಂಟ್ ಟಿ ಶರ್ಟ್ ಹಾಗೂ ಜಾಕೆಟ್ ಧರಿಸಿ ರನ್ನಿಂಗ್ ಮಾಡಿದರು. ಸುಮಾರು ನಾಲ್ಕರಿಂದ ಐದು ಕಿಲೋಮೀಟರ್ ವರೆಗೆ ರನ್ನಿಂಗ್ ಟ್ರಾಕಿಂಗ್ ಮಾಡುವ ಮೂಲಕ ಗಮನ ಸೆಳೆದರು.
ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ ಉದ್ಯಾನವನ ಮಾರ್ಗದ ಮೂಲಕ ರಾಣಿ ಚನ್ನಮ್ಮ ವೃತ್ತ, ಕೋರ್ಟ್ ರಸ್ತೆ, ಆರ್ಟಿಒ ವೃತ್ತ, ಎಸ್ ಪಿ ಕಚೇರಿ ಮಾರ್ಗದಿಂದ ಶ್ರೀ ಕೃಷ್ಣದೇವರಾಯ ವೃತ್ತದ ಮೂಲಕ ರನ್ನಿಂಗ್ ಮಾಡಿದರು.
ಸಚಿವ ಸಂತೋಷ್ ಲಾಡ್ ಅವರು ರನ್ನಿಂಗ್ ಮಾಡುವಾಗ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನಿತ್ಯವೂ ಪೊಲೀಸ್ ಭದ್ರತೆಯಲ್ಲಿಯೇ ಕಾರಿನಲ್ಲಿ ಸುತ್ತಾಡುತ್ತಿರುವ ಸಚಿವ ಸಂತೋಷ್ ಲಾಡ್ ರಾತ್ರಿ ಹೊತ್ತಿನಲ್ಲಿ ಯಾವುದೇ ಭದ್ರತೆ ಇಲ್ಲದೆ ರನ್ನಿಂಗ್ ಮಾಡುತ್ತಿರುವುದು ವಿಶೇಷವಾಗಿತ್ತು.
ಇದನ್ನೂ ಓದಿ: Theft Case: ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ 50 ಲಕ್ಷ ಮೌಲ್ಯದ ಚಿನ್ನ ಕಳವು