ಬೆಂಗಳೂರು: ಬಿಗ್ ಬಾಸ್ (Bigg Boss Kannada11) ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ (Elimination) ಆಗಿಲ್ಲ. ಈ ವಾರ ಒಬ್ಬರು ಅಥವಾ ಇಬ್ಬರು ಎಲಿಮಿನೇಷನ್ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಳೆದ ಸೀಸನ್‌ನ ಸ್ಪರ್ಧಿಗಳು ದೊಡ್ಮನೆಗೆ ಬಂದು ನಾಮಿನೇಷನ್ ಪ್ರಕ್ರಿಯೆಯನ್ನು ನೆರವೇರಿಸಿದ್ದಾರೆ. ಸ್ಪರ್ಧಿಗಳ ತಮ್ಮ ತಮ್ಮ ಅಭಿಪ್ರಾಯ ತಿಳಿಸಿ ನಾಮಿನೇಟ್ ಮಾಡಿದ್ದಾರೆ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ತಮ್ಮನ್ನು ನಾಮಿನೇಟ್ ಮಾಡಿರುವ ಕಾರಣವನ್ನು ಕೇಳಿ ಕೆಲ ಸ್ಪರ್ಧಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ರಜತ್ – ಧನರಾಜ್ ನಡುವೆ ಕೈಮಿಲಾಯಿಸುವ ಹಂತದವರೆಗೂ ವಾಗ್ವಾದ ನಡೆದಿದೆ. ಈ ನಡುವೆ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕ್ಯಾಪ್ಟನ್ ಗೌತಮಿ ಅವರು ನೇರವಾಗಿ ಮೋಕ್ಷಿತಾ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಡಬಲ್ ಎಲಿಮಿನೇಷನ್ ಜನಪ್ರಿಯ ಸ್ಪರ್ಧಿಗಳೇ ಔಟ್?: ಕಳೆದ ವಾರ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಗಿತ್ತು. ಐಶ್ವರ್ಯಾ ಹಾಗೂ ಚೈತ್ರಾ ಅವರನ್ನು ಟಾಪ್ 2 ನಲ್ಲಿಟ್ಟು ಎಲಿಮಿನೇಟ್ ಹಂತದವರೆಗೂ ಕರೆದುಕೊಂಡು ಹೋಗಲಾಗಿತ್ತು. ಆ ಬಳಿಕ ವಾಪಾಸ್ ಕರೆಸಿ ಮತ್ತೊಂದು ಅವಕಾಶವನ್ನು ನೀಡಲಾಗಿದೆ.
ಈ ವಾರ ತ್ರಿವಿಕ್ರಮ್, ಭವ್ಯ ಗೌಡ, ಧನರಾಜ್, ಶಿಶಿರ್, ರಜತ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ನಲ್ಲಿ ಇದ್ದಾರೆ. ಈ ಪೈಕಿ ಯಾರು ಆಚೆ ಹೋಗುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಆಟದ ವಿಚಾರದಲ್ಲಿ ಗಮನ ಹರಿಸಿದರೆ ನಾಮಿನೇಟ್ ಆದವರ ಪೈಕಿ ಚೈತ್ರಾ, ಧನರಾಜ್ ಹಾಗೂ ಶಿಶಿರ್ ಅವರಿಗೆ ಹೆಚ್ಚಿನ ಆತಂಕ ಇದೆ ಎನ್ನಬಹುದು. ಕಳೆದ ಕೆಲ ವಾರಗಳಿಂದ ಈ ಸ್ಪರ್ಧಿಗಳು ಆಟದ ವಿಚಾರದಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಧನರಾಜ್ ಕ್ಯಾಪ್ಟನ್ ಆಗಿ ಮನೆಮಂದಿಯ ಮನಗೆದ್ದಿದ್ದರು. ಚೈತ್ರಾ ಅವರು ಉಸ್ತುವಾರಿ ನಡೆಸಿ ತಮ್ಮ ತಂಡದ ಪರ ನಿಂತಿದ್ದರು. ಇನ್ನು ಶಿಶಿರ್ ಅವರು ಟಾಸ್ಕ್ ಆಡಿದ್ದಾರೆ. ಆದರೆ ಅಷ್ಟಾಗಿ ಗಮನ ಸೆಳೆಯಲಿಲ್ಲ.
ಈ ಸೀಸನ್‌ನಲ್ಲಿ ಈಗಾಗಲೇ ಮೂರು ಬಾರಿ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಿಲ್ಲ. ಹೀಗಾಗಿ ಈ ವಾರ ಡಬಲ್ ಎಲಿಮಿನೇಷನ್ ಇರುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮಂಜು – ಗೌತಮಿ ಸ್ನೇಹದಲ್ಲಿ ಬಿರುಕು: ಗೌತಮಿ ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ನಾನು ಕ್ಯಾಪ್ಟನ್ ಆದಾಗ ನನ್ನನ್ನು ನೀವು ಲೀಡ್ ಮಾಡಬೇಡಿ. ನಿಮ್ಮ ಧ್ವನಿಯಿಂದ ನನ್ನ ಧ್ವನಿ ಕೆಳಗೆ ಹೋಗುತ್ತಿದೆ. ಮಂಜು ಅವರೇ ನಿಮಗೆ ನಾನು ಇಪ್ಪತ್ತು ಸಲಿ ಹೇಳಿದ್ದೀನಿ. ನಾವಿಬ್ಬರು ಮಾತನಾಡುವಾಗಲೂ ನನಗೆ ನೀವೇ ಮಾತನಾಡುತ್ತಿದ್ದೀರಿ ಅಂಥ ಅನ್ನಿಸುತ್ತದೆ. ಹೇಳುತ್ತೀರಾ ಅಲ್ವಾ ಹಂಗೆ ಇಲ್ಲ ನೀವು ಎಂದು ಗೌತಮಿ ಮಂಜು ಅವರಿಗೆ ಹೇಳಿದ್ದಾರೆ.
ಇದಲ್ಲದೆ ಕ್ಯಾಪ್ಟನ್ಸಿ ಓಟದಿಂದ ಒಬ್ಬರನ್ನು ಆಚೆ ಇಡಬೇಕೆಂದು ಹೇಳಿದಾಗ ಗೌತಮಿ ಮಂಜು ಅವರ ಹೆಸರನ್ನು ಹೇಳಿದ್ದಾರೆ. ಗೆಳತ ಗೆಳತಿ ಗೆಳತನ ಇರಲ್ಲವೆಂದು ಗೌತಮಿ ಹೇಳಿದ್ದಾರೆ.