Advertisement

ಸುದೀಪ್‌ ಈಗ ಬಾದ್‌ಷಾ

11:29 AM Nov 18, 2018 | |

ಅಭಿಮಾನಿಗಳ ಒತ್ತಾಯದ ಮೇರೆಗೆ “ಪೈಲ್ವಾನ್‌’ ಚಿತ್ರದ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಕೃಷ್ಣ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಸಹಜವಾಗಿಯೇ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗುವಂತಹ ಪೋಸ್ಟರ್‌ ಜೊತೆಗೆ ಸುದ್ದಿಯೊಂದನ್ನು ನೀಡಿದ್ದಾರೆ.

Advertisement

ಹೌದು, ಸುದೀಪ್‌ ಕುಸ್ತಿ ಅಖಾಡದಲ್ಲಿರುವ ಪೋಸ್ಟರ್‌ವೊಂದನ್ನು ಬಿಟ್ಟಿರುವ “ಪೈಲ್ವಾನ್‌’ ತಂಡ ಅದರ ಜೊತೆಗೆ ಸುದೀಪ್‌ ಅವರಿಗೆ ಹೊಸ ಬಿರುದನ್ನು ನೀಡಿದೆ. ಅದು “ಬಾದ್‌ಷಾ’. ಹಾಗಾಗಿ, ಇನ್ನು ಮುಂದೆ ಅಭಿಮಾನಿಗಳು “ಬಾದ್‌ಷಾ ಕಿಚ್ಚ ಸುದೀಪ’ ಎಂದು ಪ್ರೀತಿಯಿಂದ ಕರೆಯಬಹುದು.

“ಪೈಲ್ವಾನ್‌’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಕುಸ್ತಿಗಾಗಿ ಅಖಾಡಕ್ಕಾಗಿ ವಿಶೇಷವಾದ ಸೆಟ್‌ ಹಾಕಿಸಲಾಗಿದೆ. ಸುದೀಪ್‌ ಕೂಡಾ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದು, ಕುಸ್ತಿ ಅಖಾಡದಲ್ಲಿ ಫಿಟ್‌ ಆಗಿ ಕಾಣಿಸಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸಬೇಕೋ ಅವೆಲ್ಲವನ್ನು ಮಾಡುತ್ತಿದ್ದಾರೆ. ಅಂದಹಾಗೆ, ಚಿತ್ರವನ್ನು ಕೇವಲ ಕನ್ನಡವಷ್ಟೇ ಅಲ್ಲದೇ, ಇತರ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next