Advertisement
ನವಜಾತ ಶಿಶುವಿಗೆ ಸಂಕೀರ್ಣ ಹೃದ್ರೋಗ ಹಸ್ತಕ್ಷೇಪ ಎನಿಸಿದ ಎಡ ಶೀರ್ಷಧಮನಿ ಅಪಧಮನಿ ಕತ್ತರಿಸುವಿಕೆ (ಲೆಫ್ಟ್ಕರೋಟಿಡ್ ಆರ್ಟರಿ) ಮತ್ತು ಬಲೂನ್ ಮೂಲಕ ಹಿಗ್ಗಿಸುವಿಕೆ (ಬಲೂನ್ ಡೈಲೇಷನ್ ಆಫ್ ಕೋಆರ್ಕಟೇಶನ್ ಸೆಗ್‌ಮೆಂಟ್) ಮಾಡಿ ಆ ಭಾಗವನ್ನು ಒಂದುಗೂಡಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
Related Articles
Advertisement
ನಂತರ ಮಾತನಾಡಿದ ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಮಕ್ಕಳ ಹೃದಯ ರೋಗ ತಜ್ಞರಾದ ಡಾ. ಅರುಣ್ ಕೆ. ಬಬಲೇಶ್ವರ, “ಮಹಾಪಧಮನಿ ಒಗ್ಗೂಡುವಿಕೆ ಎನ್ನುವುದು ಜನ್ಮಜಾತ ದೋಷವಾಗಿದ್ದು, ಇದರಲ್ಲಿ ಮಹಾಪಧಮನಿಯ ಗಾತ್ರವು ಸಾಮಾನ್ಯಕ್ಕಿಂತ ಕಿರಿದಾಗಿರುತ್ತದೆ. ಈ ಇಕ್ಕಟ್ಟಿನ ಸ್ಥಿತಿಯು ತೀವ್ರವಾಗಿದ್ದು, ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ, ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು ಹಾಗೂ ಇದಕ್ಕೆ ಹುಟ್ಟಿದ ತಕ್ಷಣ ಶಸ್ತ್ರಚಿಕಿತ್ಸೆ ಅಥವಾ ಇತರ ವೈದ್ಯಕೀಯ ನೆರವು ಅಗತ್ಯವಿತ್ತು ಎಂದು ವಿವರಿಸಿದರು.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ
ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರವಿವರ್ಮ ಪಾಟೀಲ್ ಮಾತನಾಡಿ, “ಈ ಪ್ರಕರಣದಲ್ಲಿ ವೈದ್ಯಕೀಯ ತಂಡಕ್ಕೆ ಇದ್ದ ದೊಡ್ಡ ಸವಾಲು ಎಂದರೆ ಮಗುವಿನ ವಯಸ್ಸು. ಈ ಮಗು ಕೇವಲ 20 ದಿನದ ಮಗುವಾಗಿದ್ದು, ಅಷ್ಟೊಂದು ಎಳೆಯ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯ. ಮಗು ತೀರಾ ಕಡಿಮೆ ತೂಕ ಅಂದರೆ ಕೇವಲ 2.3 ಕೆ.ಜಿ. ಇದ್ದ ಹಿನ್ನೆಲೆಯಲ್ಲಿ ಕತ್ತಿನ ಭಾಗದ ಅಪಧಮನಿಯು 3 ರಿಂದ 4 ಮಿಲಿ ಮೀಟರ್ ಮಾತ್ರ ವ್ಯಾಸವನ್ನು ಹೊಂದಿದ್ದು, ಇದನ್ನು ಪ್ರವೇಶಿಸುವುದು ತೀರಾ ಕಷ್ಟಕರವಾಗಿತ್ತು. ಆದರೆ ಇದನ್ನು ಕತ್ತರಿಸಿ, ವೈದ್ಯಕೀಯ ಪ್ರಕ್ರಿಯೆ ಮುಗಿಸಿದ ಬಳಿಕ ಹೊಲಿಗೆ ಹಾಕುವುದು ತೀರಾ ಸವಾಲುದಾಯಕವಾಗಿತ್ತು. ಈ ಸಂಕೀರ್ಣತೆಯ ಪರಿಣಾಮವಾಗಿ ಮಗುವಿಗೆ ಮೆದುಳಿನ ಸ್ರಾವದ ಸಾಧ್ಯತೆಯೂ ಇತ್ತು. ಇಂಥ ಸಂಕೀರ್ಣ ಪ್ರಕ್ರಿಯೆ ನಡೆಸಲು ತೀರಾ ಸಮರ್ಪಣಾ ಮನೋಭಾವದ ಮತ್ತು ಅನುಭವಿ ವೈದ್ಯರ ತಂಡ ಅಗತ್ಯವಾಗಿತ್ತು. ಇವೆಲ್ಲದರ ನಡುವೆಯೂ ಮಗುವಿನ ಜೀವರಕ್ಷಣೆ ಮಾಡಿದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ವಿವರಿಸಿದರು.
ಇದನ್ನೂ ಓದಿ: ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು
ಈ ಕುರಿರು ಪ್ರತಿಕ್ರಿಯೆ ನೀಡಿದ ಮಗುವಿನ ತಂದೆ ಮೊಹ್ಮದ್ ಫಾರೂಕ್, ನಾವು ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರನ್ನು ಭೇಟಿ ಮಾಡಿ ಚರ್ಚಿಸುವವರೆಗೂ ಬಹುತೇಕ ಎಲ್ಲ ಆಸೆ ಕೈಬಿಟ್ಟಿದ್ದೆವು. ಮಗುವಿನ ಜೀವರಕ್ಷಣೆ ಮಾಡಿದ್ದಕ್ಕಾಗಿ ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯಕೀಯ ತಂಡಕ್ಕೆ ನಾವು ಆಭಾರಿಗಳಾಗಿದ್ದೇವೆ. ವೈದ್ಯರು ಪುಟ್ಟ ಮಗುವಿಗೆ ಅತ್ಯುತ್ತಮ ದರ್ಜೆಯ ಚಿಕಿತ್ಸೆಯನ್ನು ಖಾತರಿಪಡಿಸಿದರು ಹಾಗೂ ಈ ಕಾರಣದಿಂದ ಮಗು ಅಷ್ಟು ಬೇಗನೇ ಗುಣಮುಖವಾಗುವುದು ಸಾಧ್ಯವಾಯಿತು ಎಂದರು.