Advertisement

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

01:58 AM Nov 29, 2024 | Team Udayavani |

ಬೆಂಗಳೂರು: ಮದ್ಯದಂಗಡಿ ಮಂಜೂರಾತಿಗೆ ಲಂಚ ಕೇಳಿದ ಮಂಡ್ಯದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ, ಇಲಾಖಾ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ಗುರುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಸ್ತೆಯಲ್ಲಿ ಬರುವಾಗ ಮೊಬೈಲ್‌ನಲ್ಲಿ ಮಾಧ್ಯಮಗಳಲ್ಲಿ ನೋಡಿದ ಅನಂತರವೇ ನನಗೂ ಮಾಹಿತಿ ಗೊತ್ತಾದದ್ದು. ಬಳಿಕ ಕೆಲವರು ದೂರವಾಣಿ ಕರೆ ಮಾಡಿಯೂ ಗಮನಕ್ಕೆ ತಂದರು. ತತ್‌ಕ್ಷಣವೇ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.

ವೀಡಿಯೋ ತುಣುಕುಗಳನ್ನೂ ನೋಡಿದೆ. ಶಿವಶಂಕರ್‌ ಹಾಗೂ ರವಿಶಂಕರ್‌ ಅವರ ಆಡಿಯೋ ಕೇಳಿದ್ದೇನೆ. ಇಬ್ಬರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಅಂತಹ ಅಧಿಕಾರಿಗಳ ಮೇಲೆ ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲಾಖಾ ವಿಚಾರಣೆ ನಡೆಸಲೂ ಸೂಚಿಸಿದ್ದೇನೆ ಎಂದರು.

ನಮ್ಮ ಪೊಲೀಸರಿಗೆ ದೂರು ಹೋಗಿದ್ದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತಿದ್ದರು. ಲೋಕಾಯುಕ್ತಕ್ಕೆ ದೂರು ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರಿಗೆ ದೂರು ಕೊಟ್ಟಿದ್ದರೆ ಅವರೇ ನೋಡಿಕೊಳ್ಳುತ್ತಾರೆ.
– ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next