Advertisement

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

02:05 AM Nov 26, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಖಾತೆ ತೆರೆಯುವಲ್ಲಿ ವಿಫ‌ಲವಾಗಿದೆ. ಹೀಗಾಗಿ ಪಕ್ಷ ತನ್ನ ಮಾನ್ಯತೆ ಹಾಗೂ ಚಿಹ್ನೆ ಕಳೆದುಕೊಳ್ಳುವ ಭೀತಿಗೆ ತುತ್ತಾಗಿದೆ. ಎಂಎನ್‌ಎಸ್‌ ಕೇವಲ ಶೇ. 1.8 ಮತ ಪಡೆದುಕೊಂಡಿದೆ.

Advertisement

ಹೀಗಾಗಿ ಚುನಾವಣ ಆಯೋಗ ರಾಜ್‌ ಠಾಕ್ರೆಗೆ ನೋಟಿಸ್‌ ನೀಡಬಹುದು ಎಂದು ಮಹಾರಾಷ್ಟ್ರದ ಮಾಜಿ ಶಾಸಕಾಂಗ ಕಾರ್ಯದರ್ಶಿ ಅನಂತ್‌ ಕಲ್ಸೆ ಹೇಳಿದ್ದಾರೆ. ಮಾನ್ಯತೆ ಉಳಿಸಿಕೊಳ್ಳಲು ಯಾವುದೇ ಪಕ್ಷ ಶೇ.8ರಷ್ಟು ಮತದೊಂದಿಗೆ 1 ಸ್ಥಾನ, ಇಲ್ಲವೇ ಶೇ.6ರಷ್ಟು ಮತದೊಂದಿಗೆ 2 ಸ್ಥಾನ, ಶೇ.3ರಷ್ಟು ಮತದೊಂದಿಗೆ 3 ಸ್ಥಾನ ಗೆಲ್ಲಬೇಕು.

Advertisement

Udayavani is now on Telegram. Click here to join our channel and stay updated with the latest news.

Next