Advertisement

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

03:22 PM Nov 15, 2024 | Team Udayavani |

ಮುಂಬೈ: 2022 ರಲ್ಲಿ ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯಾಗಿದೆ.

Advertisement

ಇತ್ತೀಚಿಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಪ್ರಕರಣದ ತನಿಖೆ ನಡೆಸುತ್ತಿದ್ದ ಸಮಯದಲ್ಲಿ ಪೂನಾವಾಲಾ ಕೂಡ ಬಿಷ್ಣೋಯ್ ಶೂಟರ್‌ಗಳ ಹಿಟ್ ಲಿಸ್ಟ್ ನಲ್ಲಿದ್ದ ಎಂಬ ಅಂಶ ಬಹಿರಂಗವಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಪ್ರಸ್ತುತ ಪೂನಾವಾಲಾ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹೇಳಲಾಗಿದೆ ಈ ನಡುವೆ ಮುಂಬೈ ಪೊಲೀಸರಿಂದ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯ ಮಾಹಿತಿ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ತನ್ನ ಅಪರಾಧ ಚಟುವಟಿಕೆಗಳ ಭಾಗವಾಗಿ ಹಲವಾರು ವ್ಯಕ್ತಿಗಳನ್ನು ಹಿಟ್ ಲಿಸ್ಟ್ ನಲ್ಲಿ ಸೇರಿಸಿಕೊಂಡಿದೆ ಪ್ರಾಥಮಿಕ ವರದಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಅವರನ್ನು 1998 ರ ಕೃಷ್ಣಮೃಗ ಭೇಟೆಯಾಡಿದ ಪ್ರತೀಕಾರ ತೀರಿಸಿಕೊಳ್ಳಲು ಬಿಷ್ಣೋಯ್ ಗ್ಯಾಂಗ್ ನಿರಂತರ ಜೀವ ಬೆದರಿಕೆ ಹಾಕುತ್ತಿದೆ ಎನ್ನಲಾಗಿದೆ. ಹಿಟ್ ಲಿಸ್ಟ್‌ನಲ್ಲಿರುವ ಇತರರಲ್ಲಿ ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಮ್ಯಾನೇಜರ್ ಶಗನ್‌ಪ್ರೀತ್ ಸಿಂಗ್ ಕೂಡ ಸೇರಿದ್ದಾರೆ.

ಮೇ 2022 ರಲ್ಲಿ, ಅಫ್ತಾಬ್ ಪೂನಾವಾಲಾ ಲಿವ್-ಇನ್ ಸಂಗಾತಿಯಾಗಿದ್ದ ಶ್ರದ್ಧಾ ವಾಕರ್ (27) ಳನ್ನು ಕತ್ತು ಹಿಸುಕಿ ಹತ್ಯೆಗೈದು ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ತುಂಡರಿಸಿ ಇಪ್ಪತ್ತು ದಿನಗಳ ಕಾಲ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟು ಬಳಿಕ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದ ಬೇರೆ ಬೇರೆ ಕಡೆಗಳಲ್ಲಿ ವಿಲೇವಾರಿ ಮಾಡಿದ್ದ ಎನ್ನಲಾಗಿದೆ. ಈ ಘಟನೆ ದೇಶದಲ್ಲಿ ಸಂಚಲನ ಹುಟ್ಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next