Advertisement

ಉಜಿರೆ ಎಸ್‌ಡಿಎಂಗೆ ಸ್ಟಾರ್‌ ಕಾಲೇಜು ಮನ್ನಣೆ

10:50 PM Dec 14, 2019 | Lakshmi GovindaRaj |

ಬೆಳ್ತಂಗಡಿ: ವಿಜ್ಞಾನ ವಿಭಾಗಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜನ್ನು ಸ್ಟಾರ್‌ ಕಾಲೇಜು ಯೋಜನೆಯಡಿ ಆಯ್ಕೆ ಮಾಡಿದೆ. ಕೇಂದ್ರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯದ ಬಯೋಟೆಕ್ನಾಲಜಿ ಘಟಕವು ಉಜಿರೆ ಕಾಲೇಜಿಗೆ ಈ ಯೋಜನೆಯಡಿ 82 ಲಕ್ಷ ರೂ.ಗಳ ಅನುದಾನದೊಂದಿಗೆ ವಿಜ್ಞಾನ ವಿಭಾಗಗಳನ್ನು ಮೇಲ್ದರ್ಜೆಗೆ ಏರಿಸಲು ಉತ್ತೇಜನ ದೊರಕಿದೆ.

Advertisement

ಕಾಲೇಜಿನ ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಬಯೋಟೆಕ್ನಾಲಜಿ ವಿಭಾಗಗಳು ಸ್ಟಾರ್‌ ಕಾಲೇಜು ಯೋಜನೆಯಡಿ ಗುರುತಿಸಲ್ಪಟ್ಟಿವೆ. ವಿಭಾಗಗಳ ಪ್ರಯೋಗಾಲಯದ ಉತ್ಕೃಷ್ಟತೆ, ಅಗತ್ಯ ಸೌಕರ್ಯಗಳ ಲಭ್ಯತೆ ಹಾಗೂ ವಿಚಾರ ಸಂಕಿರಣ, ಸಂಶೋಧನಾ ಯೋಜನೆ, ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳಿಗೆ ಅನುದಾನ ಬಳಕೆಯಾಗಲಿದೆ. ಕೇಂದ್ರ ಸರಕಾರವು ವಿಜ್ಞಾನ ವಿಭಾಗಗಳ ಗುಣಮಟ್ಟ ವೃದ್ಧಿಗೆ ರೂಪಿಸಿರುವ ವಿಶೇಷ ಯೋಜನೆಯಡಿ ಈ ಸ್ಟಾರ್‌ಕಾಲೇಜು ಪರಿಕಲ್ಪನೆಯೂ ಸೇರಿದೆ.

ಇತ್ತೀಚೆಗಷ್ಟೇ ಪರಾಮರ್ಶ್‌ ಯೋಜನೆಯಡಿ ಯುಜಿಸಿಯು ಉಜಿರೆ ಎಸ್‌.ಡಿ.ಎಂ. ಕಾಲೇಜನ್ನು ಮೆಂಟರ್‌ ಇನ್ಸ್‌ಸ್ಟಿಟ್ಯೂಟ್‌ ಎಂದು ನಿಯೋಜಿಸಿ ಸುತ್ತಮುತ್ತಲಿನ ಕಾಲೇಜುಗಳಿಗೆ ನ್ಯಾಕ್‌ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವ ಮಹತ್ವದ ಹೊಣೆಗಾರಿಕೆ ನಿಭಾಯಿಸುವ ಅವಕಾಶ ಒದಗಿಸಿದೆ. ಇದಲ್ಲದೆ ಯುಜಿಸಿಯು ಉದ್ಯೋಗಾಧಾರಿತ ಕೌಶಲ್ಯಾಧಾರಿತ ಮೂರು ಬಿ-ವೋಕೆಶನಲ್‌ ಕೋರ್ಸ್‌ಗಳನ್ನು ನಡೆಸಲು ಉಜಿರೆ ಕಾಲೇಜಿಗೆ ಮನ್ನಣೆ ನೀಡಿತ್ತು. ಇದರ ಜತೆಗೆ ಈಗ ಸ್ಟಾರ್‌ಕಾಲೇಜು ರೂಪದಲ್ಲಿ ಮತ್ತೂಂದು ಮನ್ನಣೆ ದೊರಕಿದಂತಾಗಿದೆ ಎಂದು ಪ್ರಾಂಶುಪಾಲ ಪ್ರೊ.ಎಸ್‌.ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next