Advertisement
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇರಳ ಹೈಕೋರ್ಟ್ ನ್ಯಾಯಾಧೀಶ ನ್ಯಾ| ಮುರಳೀಕೃಷ್ಣ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಚೌಕಟ್ಟಿನಿಂದ ನಿಯಂತ್ರಿಸಲ್ಪಟ್ಟಿದೆ. ಸಂವಿಧಾನದಿಂದಾಗಿ ನ್ಯಾಯಾಂಗ ವ್ಯವಸ್ಥೆ ಮೇಲಿನ ಜನರ ವಿಶ್ವಾಸವೂ ದೃಢವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು, ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಆಧುನಿಕ ಸವಾಲುಗಳು ಕಾನೂನಿನ ವ್ಯಾಖ್ಯಾನದಲ್ಲೂ ಹಲವು ಬದಲಾವಣೆಗಳಿಗೆ ಕಾರಣವಾಗಿವೆ ಎಂದರು.
ಸಂಸ್ಥಾಪನ ದಿನದ ಉಪನ್ಯಾಸ ನೀಡಿದ ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲ ಉದಯ ಹೊಳ್ಳ, ಶಿಕ್ಷಣದಿಂದ ಸುಭದ್ರ ದೇಶ ಕಟ್ಟಲು ಸಾಧ್ಯ. ಶಿಕ್ಷಣ ಸಂಸ್ಥೆಗಳ ಆರಂಭದಲ್ಲಿ ಬಲಿಷ್ಠ ಅಡಿಪಾಯ ಇದ್ದರೆ, ಗಮನಾರ್ಹ ಸಾಧನೆ ಮಾಡಬಹುದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆ ದೇಶಕ್ಕೆ ಸಾಧಿಸಿ ತೋರಿಸಿದೆ ಎಂದರು.
ಭ್ರಷ್ಟಾಚಾರದಿಂದ ಕೂಡಿರುವ ಸಮಾಜದ ಮೌಲ್ಯ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕೆಲಸವನ್ನು ಕಾನೂನು ಪದವೀಧರರು ನಿರ್ವಹಿಸಬೇಕು. ಕಾನೂನು ಸೇವೆಯನ್ನು ಆಧರಿಸಿದ ವೃತ್ತಿ ಎಂದು ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಕಾಲೇಜಿನ ಮ್ಯಾಗಝೀನ್ ಅನಾವರಣಗೊಳಿಸ ಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಅವರ “ಲೀಗಲ್ ಲಾಂಗ್ವೇಜ್ ಆ್ಯಂಡ್ ಜನರಲ್ ಇಂಗ್ಲಿಷ್’ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಸಂಸ್ಥಾಪಕ ಡಾ| ಡಿ. ವೀರೇಂದ್ರ ಹೆಗ್ಗಡೆ, ನ್ಯಾ| ಮುರಳಿ ಕೃಷ್ಣ, ನ್ಯಾಯವಾದಿ ಉದಯ ಹೊಳ್ಳ, ಪ್ರೊ| ಎ. ರಾಜೇಂದ್ರ ಶೆಟ್ಟಿ, ನ್ಯಾಯವಾದಿ ರೋಹಿತ್ ರಾವ್ ಅವರನ್ನು ಸಮ್ಮಾನಿಸಲಾಯಿತು.
Related Articles
ಪ್ರಾಂಶುಪಾಲ ಡಾ| ತಾರನಾಥ ಸ್ವಾಗತಿಸಿದರು. ಡಾ| ಸುಬ್ಬಲಕ್ಷ್ಮಿ ಪಿ. ಸಮ್ಮಾನಿತರ ಬಗ್ಗೆ ಮಾಹಿತಿ ನೀಡಿದರು. ಡಾ| ಬಾಲಿಕಾ ವಂದಿಸಿದರು.
Advertisement
ಕಾನೂನು ಶಿಕ್ಷಣ ಇನ್ನಷ್ಟು ಶಕ್ತಿಯುತವಾಗಲಿಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮಸ್ಥಳದಲ್ಲಿ ಚತುರ್ ದಾನಗಳಿಗೆ ಸುದೀರ್ಘ ಇತಿಹಾಸವಿದ್ದು, ಇದರಲ್ಲಿ ನ್ಯಾಯದಾನವೂ ಒಂದಾಗಿದೆ. ವೇದ ಹಾಗೂ ಉಪನಿಷತ್‌ಗಳು ಮಾನವತೆ, ಧರ್ಮ, ಕಾನೂನು ಪರಿಪಾಲನೆಯನ್ನು ಪ್ರತಿಪಾದಿಸುತ್ತವೆ. ಕಾನೂನು ಶಿಕ್ಷಣ ಇನ್ನಷ್ಟು ಶಕ್ತಿಯುತವಾಗಬೇಕು. ಈಗಿನ ಯುವ ಪೀಳಿಗೆ ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನವಂತರಾಗಬೇಕು. ಸಮಾಜದಲ್ಲಿ ಸ್ಥಾನ, ಅಂತಸ್ತು ಬದಲಾಗುತ್ತಾ ಇದ್ದರೂ ಕಾನೂನು ಬದಲಾಗದು ಎಂದರು.