Advertisement
ಅವರು ಸೋಮವಾರ ಕಲ್ಯಾಣಪುರ ಸಂತೆಕಟ್ಟೆಗೆ ಆಗಮಿಸಿದ ರಾಮನ ದಿಗ್ವಿಜಯ ರಥಯಾತ್ರೆಯ ಸಂದರ್ಭದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀರಾಮ ಧರ್ಮದ ಸಾಕಾರ ಮೂರ್ತಿ. ಯಾರನ್ನು ಶ್ರೀರಾಮ ಬದುಕಿನಲ್ಲಿ ಒಂದು ಬಾರಿಯೂ ನೋಡಿಲ್ಲವೋ ಯಾವ ವ್ಯಕ್ತಿ ಬದುಕಿನಲ್ಲಿ ರಾಮನನ್ನು ಒಂದು ಬಾರಿಯೂ ಕಂಡಿಲ್ಲವೋ ಅವರಿಬ್ಬರೂ ಕೂಡ ಲೋಕದಲ್ಲಿ ನಿಂದಿತರಾಗಿರುತ್ತಾರೆ. ಅವರ ಅಂತರಾತ್ಮವೇ ಅವರನ್ನು ನಿಂದಿಸುತ್ತದೆ. ವ್ಯಕ್ತಿ ಪ್ರಪಂಚದಲ್ಲಿ ತಾನೊಬ್ಬ ಮಾತ್ರ ಬದುಕದೆ ಎಲ್ಲರೂ ಸುಖದಿಂದ ಬದುಕಬೇಕು ಎಂದು ಬಯಸುತ್ತಾನೋ ಅದು ಧರ್ಮ. ರಾಮರಾಜ್ಯದ ಕನಸು ನನಸಾಗಬೇಕಾದರೆ ನಾವೆಲ್ಲರೂ ರಾಮನ ಆದರ್ಶವನ್ನು ಪಾಲಿಸಬೇಕು ಎಂದು ನುಡಿದರು.
Related Articles
Advertisement
ದಿಗ್ವಿಜಯ ರಥಯಾತ್ರ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಲಕ್ಷ್ಮೀ ನಗರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ಪ್ರಸ್ತಾವನೆಗೈದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಮೆಂಡನ್ ವಂದಿಸಿದರು.
ಮೂಡುಬಿದಿರೆಯಲ್ಲಿ ಸ್ವಾಗತರಥಯಾತ್ರೆಯು ಸೋಮವಾರ ಸಂಜೆ ಮೂಡುಬಿದಿರೆಗೆ ಆಗಮಿಸಿದ್ದು ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸೋಲೂರು ಆರ್ಯ ಈಡಿಗ ಮಠದ ಶ್ರೀ ವಿದ್ಯಾನಂದ ಸ್ವಾಮೀಜಿ ಮತ್ತು ಸ್ಥಳೀಯ ಗಣ್ಯರು ಸ್ವಾಗತಿಸಿದರು. ವಾಹನ ಜಾಥಾ
ವಾಹನ ಜಾಥಾದಲ್ಲಿ ಸಾವಿರಾರು ಬೈಕ್, ಕಾರುಗಳು ಪಾಲ್ಗೊಂಡಿದ್ದು ವಿವಿಧ ವೇಷ ಭೂಷಣಗಳು, ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗನ್ನು ನೀಡಿದವು. ರಸ್ತೆಯ ಪಕ್ಕದ ಕೆಲವು ಅಂಗಡಿ, ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸುಮಂಗಲಿಯರು ಶ್ರೀರಾಮನ ರಥಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ರಥಯಾತ್ರೆಯು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ವರೆಗೆ ಸಾಗಿ ಅಲ್ಲಿ ವಿಶೇಷ ಪೂಜೆ ನಡೆಯಿತು. ಡಾ| ಜಿ. ಶಂಕರ್ ನೇತೃತ್ವದಲ್ಲಿ ಸುಮಾರು 4,500 ಮಂದಿಗೆ ಅನ್ನ ಪ್ರಸಾದ ಸೇವೆ ಜರಗಿತು.