Advertisement
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕದ್ರಿ ಗೋಪಾಲನಾಥರು ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಸಂಗೀತ ಕ್ಷೇತ್ರದ ಅವರ ಸಾಧನೆಗೆ ಇಡೀ ಜಗತ್ತೇ ಶಿರ ಬಾಗುತ್ತದೆ. ಅಸಾಧಾರಣ ಸಂಗೀತ ಜ್ಞಾನ ಹೊಂದಿದ್ದ ಅವರು ಕಠಿನ ಎಂದು ಪರಿಗಣಿಸಲಾದ ಕರ್ನಾಟಕ ಸಂಗೀತವನ್ನು ಸ್ಯಾಕ್ಸೋಫೋನ್ ಮೂಲಕ ಸುಲಲಿತಗೊಳಿಸಿದವರು.
Related Articles
Advertisement
ತಂತ್ರಿ ಸಾಮ್ರಾಟ್ ಸಲೀಲ್ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಣಿ ಕೃಷ್ಣಸ್ವಾಮಿ ಅಕಾಡೆಮಿ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ಗೋಮತಿದಾಸ್, ಡಾ| ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ ಉಪಸ್ಥಿತರಿದ್ದರು. ಗೋಪಾಲನಾಥ್ ಅವರ ಪುತ್ರ, ಟ್ರಸ್ಟ್‌ನ ಕಾರ್ಯದರ್ಶಿ ಮಣಿಕಾಂತ್ ಕದ್ರಿ ಸ್ವಾಗತಿಸಿದರು. ಭವಾನಿ ಲೋಕೇಶ್ ನಿರೂಪಿಸಿದರು.
ಬಳಿಕ ಪಂಡಿತ್ ವಿಶ್ವಮೋಹನ್ ಭಟ್ ಹಾಗೂ ಸಲೀಲ್ ಭಟ್ ಅವರಿಂದ ಮೋಹನ ವೀಣಾ ಮತ್ತು ಸಾತ್ವಿಕ ವೀಣಾ ಜುಗಲ್ ಬಂದಿ ಜರಗಿತು. ಪಂಡಿತ್ ಹಿಮಾಂಶು ಮಹಾಂತ್ ತಬಲಾದಲ್ಲಿ ಸಾಥ್ ನೀಡಿದರು.