Advertisement

Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್‌ ಜೋಶಿ

10:24 AM Dec 17, 2024 | Team Udayavani |

ಉಡುಪಿ: ಪರ್ಯಾಯ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ವತಿಯಿಂದ ರಾಜಾಂಗಣದಲ್ಲಿ ಬೃಹತ್‌ ಗೀತೋತ್ಸವದ ಅಂಗವಾಗಿ ಯಕ್ಷಗಾನದಲ್ಲಿ ಗೀತೆಯ ಮೆರಗು ಎಂಬ ವಿಷಯದ ಕುರಿತಂತೆ ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ್‌ ಜೋಶಿಯವರು ಶನಿವಾರ ಶಿಖರೋಪನ್ಯಾಸ ನೀಡಿ, ಯಕ್ಷಗಾನದಲ್ಲಿ ಭಗವದ್ಗೀತೆಯ ಸಾಧ್ಯತೆಗಳನ್ನು ಧರೆಗಿಳಿಸಿದ ಮಲ್ಪೆ ರಾಮದಾಸ್‌ ಸಾಮಗರು ಸೇರಿದಂತೆ ಮೂರು ಮಹನೀಯರ ಸಾಧನೆಗಳನ್ನು ಸ್ಮರಿಸಿಕೊಂಡರು.

Advertisement

ವಿಶ್ವ ಗೀತಾ ಪರ್ಯಾಯದಲ್ಲಿ ಭಗವದ್ಗೀತೆಯ ವಿವಿಧ ಆಯಾಮಗಳನ್ನು ತೆರೆದಿಡಲು ಸಂಕಲ್ಪಿಸಿದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾರ ಉಜ್ವಲ ವಿಚಾರ ಧಾರೆಯನ್ನು ಶ್ಲಾ ಸಿ, ಶ್ರೀಪಾದರ ಹಿಂದಿನ ಪರ್ಯಾಯದಲ್ಲಿ ಭವ್ಯ ಗೀತಮಂದಿರವನ್ನೇ ಕಲಾ ವೇದಿಕೆಯನ್ನು ಬಳಸಿ ಭಗವದ್ಗೀತಾ ವಿಶ್ವರೂಪ ದರ್ಶನವನ್ನು ತೋರಿಸಿದ ಅದ್ಭುತ ಪರಿಕಲ್ಪನೆ, ಸಾಕಾರಗೊಳಿಸಿದ ರಂಗಕರ್ಮಿ ಸಾಹಿತಿ ಡಿ| ಉದ್ಯಾವರ ಮಾಧವಾಚಾರ್ಯರ ಅಪೂರ್ವ ಸಾಧನೆಯನ್ನು ವಿವರಿಸಿದರು.

ಉಡುಪಿ ಮಠಗಳಲ್ಲಿ ಪ್ರಾಚೀನ ಕಾಲದಿಂದಲೂ ನಡೆಯುತ್ತಿದ್ದ ಮೇಳಗಳ ಬಗ್ಗೆ ಪ್ರಸ್ತಾವಿಸಿ, ಇದೀಗ ಅದರ ಪುನರುತ್ಥಾನವಾಗಿ ಯಕ್ಷಗಾನದ ಮೇಲೆ ಎಲ್ಲ ಶ್ರೀಪಾದರು ನೀಡುತ್ತಿರುವ ಪ್ರೋತ್ಸಾಹವನ್ನು ನೆನೆದರು.

ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಡಾ| ಪ್ರಭಾಕರ್‌ ಜೋಶಿಯವರನ್ನು ಸಮ್ಮಾನಿಸಿದರು.

Advertisement

ಉದ್ಯಮಿ ಕೋಲ್ಕತ್ತಾದ ಕಲ್ವಾನಿ ದಂಪತಿಯ ಸಾಧನೆಯನ್ನು ಗಮನಿಸಿ ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿ ನೀಡಿ ಶ್ರೀಪಾದರು ಹರಸಿದರು.

ಗೀತಾಮೃತಸಾರ ಗ್ರಂಥ ಬಿಡುಗಡೆ
ಬೃಹತ್‌ ಗೀತೋತ್ಸವ ಪ್ರಯುಕ್ತ ಡಿ.17ರಂದು ಸಂಜೆ 5.30ಕ್ಕೆ ರಾಜಾಂಗಣದಲ್ಲಿ ಶ್ರೀ ಸುಜ್ಞಾನೇಂದ್ರತೀರ್ಥ ವಿರಚಿತ ಗೀತಾಮೃತಸಾರ ಗ್ರಂಥ ಬಿಡುಗಡೆ ನಡೆಯಲಿದೆ. ಶ್ರೀ ಸುಜ್ಞಾನೇಂದ್ರತೀರ್ಥರ ಬದುಕು-ಬರಹದ ಬಗ್ಗೆ ವಿ| ಸುಧೀಂದ್ರ ಆಚಾರ್ಯ ಹೆಜಮಾಡಿ, ಗೀತಾಮೃತಸಾರ ಪರಿಚಯವನ್ನು ಓಂಪ್ರಕಾಶ್‌ ಭಟ್ಟ ಅವರು ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next