ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ. 13ರ ಕುಂಭ ಸಂಕ್ರಮಣದಂದು ರಾತ್ರಿ ಕೆಂಡಸೇವೆ, 14ರಂದು ಶ್ರೀ ಮನ್ಮಹಾರಥೋತ್ಸವ, 15ರಂದು ರಾತ್ರಿ ಕೆರೆ ದೀಪೋತ್ಸವ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದ್ದು, ಅನಂತರ ಐದೂ ಮೇಳಗಳಿಂದ ಸೇವೆ ಆಟ ಜರಗಲಿದೆ.
ಕೆಂಡಸೇವೆ ಬೇಗನೆ ಪ್ರಾರಂಭ
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಂಡಸೇವೆ ಈ ಬಾರಿ ಮಾಮೂಲಿಗಿಂತ ಬೇಗನೆ ಪ್ರಾರಂಭಗೊಳ್ಳಲಿದೆ.
ರಾತ್ರಿ 7ರಿಂದ ಸೇವಾ ಚೀಟಿ ನೀಡಲು ಪ್ರಾರಂಭವಾಗಲಿದ್ದು, ರಾತ್ರಿ 9ಕ್ಕೆ ದರ್ಶನ ಸೇವೆ ಮುಗಿದ ಅನಂತರ ಕೆಂಡ ಸೇವೆ ಜರಗಲಿದೆ.
ರಶೀದಿ ಮಾಡಿದವರಿಗೆ ಮಾತ್ರವೇ ಕೆಂಡ ಸೇವೆಯ ಅವಕಾಶ ಇರಲಿದೆ ಎಂದು ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.