Advertisement

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

12:06 AM Jan 09, 2025 | Team Udayavani |

ಕುಂದಾಪುರ: ಹೆಮ್ಮಾಡಿ ಸೇವಂತಿಗೆ ತಳಿ ಸಂರಕ್ಷಣೆ ಹಾಗೂ ಬೆಳೆಗಾರರ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸೇವಂತಿಗೆ ಬೆಳೆಯ ಪ್ರದೇಶಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳು ಹಾಗೂ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ಭೇಟಿ ನೀಡಿದರು.

Advertisement

ತೋಟಗಾರಿಕೆ ಇಲಾ ಖೆಯ ಜಿಲ್ಲಾ ಉಪ ನಿರ್ದೇಶಕಿ ಭುವನೇಶ್ವರಿ, ಕುಂದಾಪುರದ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್‌ ಕೆ.ಜೆ., ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ್‌ ಬಂಟ್‌, ಕೃಷಿ ವಿಜ್ಞಾನಿ ಗಳಾದ ಡಾ| ಚೈತನ್ಯ ಎಚ್‌.ಎಸ್‌., ಡಾ| ಭೂಮಿಕಾ ಎಚ್‌.ಆರ್‌. ಹಾಗೂ ಡಾ| ಶ್ರೀದೇವಿ ಎ. ಅವರು ತಂಡದಲ್ಲಿದ್ದರು.

ಹವಾಮಾನ ವೈಪರೀತ್ಯದಿಂದ ಅಡ್ಡಿ
ಚಳಿ ಕೊರತೆಯಿಂದ ಹೂವು ಸರಿ ಯಾದ ಸಮಯದಲ್ಲಿ ಹೊರಮೈ ಅರಳಿದರೂ, ಒಳ ಮೈ ಅರಳುತ್ತಿಲ್ಲ. ಗುಣಮಟ್ಟವೂ ಇಲ್ಲ. ಹೆಮ್ಮಾಡಿಯಲ್ಲಿ ಬೇರೆ ಕಡೆಯ ಚಾಂದಿನಿ, ಸೆಂಟ್‌ ಎಲ್ಲೋ ತಳಿಗಳನ್ನು ಬೆಳೆದಿದ್ದರೂ ಅವು ಇಲ್ಲಿನಷ್ಟು ಸುಂದರವಾಗಿಲ್ಲ. ಬಿಳಿ ಹುಳ ಬಾಧೆ ಇದೆ. ಒಬ್ಬರು 1 ತಿಂಗಳು ತಡವಾಗಿ ಬೆಳೆದಿದ್ದು, ಅವರು ಬೆಳೆಗೆ ಮಲಿcಂಗ್‌ (ಟರ್ಪಾಲು) ಮಾಡಿದ್ದು, ದೂರ-ದೂರ ಬೆಳೆದಿದ್ದಾರೆ. ಇದರಿಂದ ಹುಳ ಬಾಧೆ ಕಡಿಮೆಯಾಗಬಹುದು. ಆದರೆಗಿಡಕ್ಕೆ ಬೆಂಬಲವಿಲ್ಲದೆ ಬಾಗಬಹುದು. ಮಲಿcಂ ಗ್‌ನಿಂದ ಪ್ರಯೋಜನ, ತೊಂ ದರೆ ಎರಡೂ ಇವೆ ಎಂದರು ಡಾ| ಚೈತನ್ಯ.

ಜಿಐ ಮಾನ್ಯತೆಗೆ ಮನವಿ
ಇದೇ ಸಂದರ್ಭದಲ್ಲಿ ಹೆಮ್ಮಾಡಿ ಸೇವಂತಿಗೆ ತಳಿಗೆ ಜಿಐ ಮಾನ್ಯತೆ ನೀಡಬೇಕು. ಸರಕಾರದ ಸಂಶೋಧನೆ, ಸಹಾಯಧನ, ತಳಿ ಸಂರಕ್ಷಣೆ ನಿಟ್ಟಿನಲ್ಲೂ ಆವಶ್ಯಕ ಎಂದು ಬೆಳೆಗಾರರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಜಿಐ ಮಾನ್ಯತೆ ಸಿಗಲು ಎಷ್ಟು ವರ್ಷದಿಂದ ಬೆಳೆಯಲಾಗುತ್ತಿದೆ? ಎಲ್ಲಿಂದ ಬಂತು ಮತ್ತಿತರ ಮಾಹಿತಿ ದಾಖಲೆ ಸಹಿತ ಬೇಕು ಎಂದರು.
ಬೆಳೆಗಾರರಲ್ಲಿ ಪ್ರಮುಖರಾದ ಪ್ರಶಾಂತ್‌ ಭಂಡಾರಿ, ನಾಗೇಶ್‌ ದೇವಾಡಿಗ, ಬಾಬು ದೇವಾಡಿಗ, ಕೃಷ್ಣ ದೇವಾಡಿಗ, ರತ್ನಾಕರ ಭಂಡಾರಿ ಮತ್ತಿ ತರರು ಉಪಸ್ಥಿತರಿದ್ದರು.

ಉದಯವಾಣಿ ವರದಿ
ಹೆಮ್ಮಾಡಿ ಸೇವಂತಿಗೆ ತಳಿಯ ಗಿಡಗಳು ಅಕಾಲಿಕ ಮಳೆಗೆ ನಾಶವಾಗಿ ರುವುದರಿಂದ ಬೇರೆ ತಳಿಯನ್ನು ಬೆಳೆದಿರುವ ಬಗ್ಗೆ ಹಾಗೂ ಹೆಮ್ಮಾಡಿ ಸೇವಂತಿಗೆ ತಳಿಯು ಆತಂಕದಲ್ಲಿರುವ ಬಗ್ಗೆ “ಉದಯವಾಣಿ’ಯು ಡಿ.23 ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೂಡ ತಳಿ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next