Advertisement

ಮೀನು ಕೃಷಿ ಪ್ರೋತ್ಸಾಹಕ್ಕೆ ವಿಶೇಷ ಒತ್ತು: ಅಂಗಾರ

03:37 PM Dec 19, 2021 | Team Udayavani |

ನಾರಾಯಣಪುರ: ಬಸವ ಸಾಗರ ಡ್ಯಾಮ್‌ ಬಳಿ ಇರುವ (ಸಿದ್ದಾಪುರ) ಪ್ರಾದೇಶಿಕ ಮೀನು ಮರಿ ಪಾಲನಾ ಕೇಂದ್ರಕ್ಕೆ ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವ ಎಸ್‌.ಅಂಗಾರ ಅವರು ಶನಿವಾರ ಭೇಟಿ ನೀಡಿ, ಇಲಾಖೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮೀನು ಕೃಷಿ ಅಭಿವೃದ್ಧಿಗಾಗಿ ಇಲಾಖೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಹಿಂದೆ ಅನ್ಯ ರಾಜ್ಯಗಳಿಂದ ಮೀನು ಮರಿಗಳನ್ನು ತಂದು ಮೀನು ಕೃಷಿಗೆ ರೈತರಿಗೆ ನೀಡಲಾಗುತ್ತಿತ್ತು. ಅದನ್ನು ತಪ್ಪಿಸಲು ರಾಜ್ಯದಲ್ಲೆ ಸ್ವಂತವಾಗಿ ಮೀನು ಮರಿ ಉತ್ಪಾದನೆ ಜೊತೆಗೆ ಮೀನು ಮರಿ ಪಾಲನೆಗೆ ವಿಶೇಷ ಒತ್ತು ನೀಡಿ ಮೀನು ಕೃಷಿಗೆ ಪ್ರೋತ್ಸಾಹಿಸಲಾಗುವುದು ಎಂದರು.

ಈಗಾಗಲೇ ಇಲಾಖೆ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ, ಭದ್ರಾವತಿ ಮೀನು ಮರಿ ಪಾಲನೆ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಸದ್ಯ ನಾರಾಯಣಪುರದ ಪ್ರಾದೇಶಿಕ ಮೀನು ಪಾಲನೆ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಇಲಾಖೆ ನೀಡುವ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಈಗೀನ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೀನಿನ ಪೌಂಡ್‌ಗಳಲ್ಲಿರುವ ಮೀನು ಮರಿಗಳನ್ನು ವೀಕ್ಷಿಸಿದ ಸಚಿವರು, ಈ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುದ್ದೇಬಿಹಾಳ ಶಾಸಕ ಎ.ಎಸ್‌ ಪಾಟೀಲ ನಡಹಳ್ಳಿ ಮಾತನಾಡಿ, ಜಲಾಶಯದಿಂದಲೇ ಮೀನು ಮರಿ ಪಾಲನೆ ಕೇಂದ್ರದ ಪೌಂಡ್‌ಗಳಿಗೆ ಶಾಶ್ವತವಾಗಿ ನೀರು ಪೂರೈಕೆಗಾಗಿ ರೂಪಿಸಲಾದ ಕಾಮಗಾರಿಗೆ ಇಲಾಖೆ ವತಿಯಿಂದ ಮಂಜೂರಾತಿ ನೀಡಲು ಕ್ರಮವಹಿಸಲು ಮನವಿ ಮಾಡಿದರು. ಈ ವೇಳೆ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next