Advertisement
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ., ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಉದಯ ರಾವ್, ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ದ.ಕ. ಜಿಲ್ಲಾ ಇಂಟಕ್‌ನ ಮನೋಹರ್ ಶೆಟ್ಟಿ ನಂದಬೆಟ್ಟು, ವಿನೋಧರ ಪೂಜಾರಿ, ಉದ್ಯಮಿ ರೂಪೇಶ್ ಕುಮಾರ್ ಅದ್ಯಪಾಡಿ, ಅಮೃತ್ ಲಾಲ್ ಜೋಯ್ಸ ಫೆರ್ನಾಂಡಿಸ್, ಶೋಧನ್ ಅದ್ಯಪಾಡಿ, ಭುಜಂಗ ಕುಲಾಲ್ ಅದ್ಯಪಾಡಿ, ಸುಕೇಶ್ ಮಾಣೈ ತಲಕಳ, ತಾ.ಪಂ. ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ ಶೆಟ್ಟಿಪಾಲು, ಕರಂಬಾರು ಶಾಲಾ ಅಧ್ಯಕ್ಷ ಸತೀಶ್ ದೇವಾಡಿಗ, ಕೇಸರಿ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಸುಧಾಕರ್ ಕುಲಾಲ್ ಕೊಳಂಬೆ, ಅಧ್ಯಕ್ಷ ಕಾರ್ತಿಕ್ ಪೂಜಾರಿ, ಗ್ರಾಪಂ. ಸದಸ್ಯರಾದ ಅನಿಲ್ ಕುಮಾರ್, ವಿಜಯ ದೇವು, ಸಂಪತ್ ಪೂಜಾರಿ, ಸವಿತಾ ಸಾಲಿಯಾನ್ ಉಪಸ್ಥಿತರಿದ್ದರು.ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ವಿವಿಧ ಆಟೋಟ ಸ್ಪರ್ಧೆ, ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಜರಗಿತು.
ಗಾಳದ ಪಂಥದಲ್ಲಿ ಕಂದಾವರ ಗ್ರಾಮದವರು ಮಾತ್ರವಲ್ಲದೆ, ಉಡುಪಿ, ಮಂಗಳೂರಿನವರೂ ಭಾಗಿಯಾಗಿದ್ದರು. ಹಿರಿಯರು, ಪುರುಷರು, ಮಹಿಳೆಯರಲ್ಲದೆ ಮಕ್ಕಳೂ ಉತ್ಸಾಹದಲ್ಲಿ ಸ್ಪರ್ಧಿಸಿದ್ದರು. ಕೆರೆಯಲ್ಲಿ ಮೀನು ಹಿಡಿಯಲು 93 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಅತಿ ದೊಡ್ಡ ಗಾತ್ರದ ಮೀನು ಹಿಡಿದವರಿಗೆ 5555 ರೂ. ನಗದು ಸಹಿತ ಪ್ರಥಮ ಬಹುಮಾನ, ಅತಿ ಹೆಚ್ಚು ಮೀನು ಹಿಡಿದವರಿಗೆ 3333 ರೂ. ನಗದು ಸಹಿತ ದ್ವಿತೀಯ ಬಹುಮಾನ ನಿಗದಿಯಾಗಿತ್ತು. ಗಾಳದ ಪಂಥ -2024 ಸ್ಪರ್ಧೆಯಲ್ಲಿ ಸಚಿನ್ ಕಂಕನಾಡಿ ಪ್ರಥಮ ಬಹುಮಾನ ಪಡೆದರೆ, ಸಂಜನ್ ಉಡುಪಿ ದ್ವಿತೀಯ ಸ್ಥಾನಿಯಾದರು. ಸುಕೇಶ್ ಮೂಡುಕರೆ, ಶಿವರಾಮ್ ವಿಟ್ಲಬೆಟ್ಟು, ಹರೀಶ್ ವಾಮಂಜೂರು, ಚೇತನ್ ಮೊಗರು, ರಿಯಾಝ್ ಕಂದಾವರ ಇತರ ವಿಜೇತರಾಗಿದ್ದಾರೆ.
Related Articles
ಕೊಳಂಬೆಯ ಕುಕ್ಕಿಮಾರು ಕೆರೆಗೆ ದೊಡ್ಡ ಇತಿಹಾಸವಿದೆ. ಇಲ್ಲಿ ಹಿಂದೆ ಮಾಯಿಲು ಎನ್ನುವ ದೈವಶಕ್ತಿಗಳು ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು ಎನ್ನುವ ನಂಬಿಕೆ ಇದೆ. ಈಗಲೂ ಕೊಳಂಬೆಯಲ್ಲಿ ಬಬ್ಬು ಸ್ವಾಮಿ ನೇಮದ ಸಮಯದಲ್ಲಿ ಮಾಯಿಲು ಶಕ್ತಿಗಳಿಗೂ ನೇಮ ನಡೆಯುತ್ತದೆ.
Advertisement