Advertisement
ರಾಜ್ಯಪಾಲರಸೂಚನೆಅಥವಾಮತ್ತೂಮ್ಮೆವಿಧಾನಪರಿಷತ್ ಅಧಿವೇಶನ ನಿಗದಿಗೆ ಮುನ್ನವೇ ಪ್ರತಾಪಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಪದಚ್ಯುತಿ ವಿದ್ಯಮಾನಗಳಿಂದ ಬೇಸರಗೊಂಡು
Related Articles
Advertisement
ರಾಜ್ಯಪಾಲರಿಗೆ ವರದಿ ನೀಡಲು ಸಿದ್ಧತೆ
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆದ ಘಟನಾವಳಿಗಳ ವಿವರವನ್ನು ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರಶೆಟ್ಟಿ ರಾಜ್ಯಪಾಲರಿಗೆ ವರದಿ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರೆ ಸಂಪೂರ್ಣ ವರದಿ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪರಿಷತ್ತಿನಲ್ಲಿ ಕಲಾಪ ಆರಂಭಕ್ಕೂ ಮುನ್ನ ಬೆಳಗ್ಗೆ 11.15ಕ್ಕೆ ಕಾರ್ಯಕಲಾಪ ಪ್ರಾರಂಭಿಸಲು ಬೆಲ್ ಹಾಕಲು ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ನಾನು ನನ್ನ ಕಚೇರಿಯಲ್ಲಿಕುಳಿತಿರುವಾಗ ಪರಿಷತ್‌ಕಾರ್ಯದರ್ಶಿ ಕೋರಂ ಬೆಲ್ ಹಾಕಿದರು. ಬೆಲ್ ಕೊನೆಗೊಳ್ಳುವ ಮೊದಲೇ ಉಪಸಭಾಪತಿ ಏಕಾಏಕಿ ಯಾವುದೇ ಸೂಚನೆ ನೀಡದೆ ಸಭಾಪತಿ ಪೀಠ ಅಲಂಕರಿಸಿದರು. ತಕ್ಷಣ ಸದನದಲ್ಲಿದ್ದ ಬಹುತೇಕ ಸದಸ್ಯರು ಸಭಾಪತಿ ಪೀಠವನ್ನು ಸುತ್ತುವರೆದು, ತಳ್ಳಾಟ, ನೂಕಾಟದಿಂದ ಗೊಂದಲದವಾತಾವರಣ ನಿರ್ಮಾಣ ಮಾಡಿದರು.
ಕೆಲವರು ಸಭಾಪತಿ ಪ್ರವೇಶಿಸುವ ಕಚೇರಿಯ ಬಾಗಿಲನ್ನು ಒಳಗಡೆಯಿಂದ ಚಿಲಕಹಾಕಿಕೊಂಡು,ಸಭಾಪತಿಗಳು ಸದನದಒಳಗಡೆಬರದಂತೆ ತಡೆಯುವಪ್ರಯತ್ನಗಳು ನಡೆದವು. ಈ ಎಲ್ಲ ಅಂಶಗಳನ್ನುಕಚೇರಿಯಲ್ಲಿಕುಳಿತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದೇನೆ. ಈ ನಡುವೆ ಸಭಾಪತಿ ಪೀಠದ ಮೇಲೆ ಕುಳಿತುಕೊಂಡಿದ್ದ ಉಪಸಭಾಪತಿಯನ್ನುಕೆಲವು ಸದಸ್ಯರು ಬಲವಂತವಾಗಿ ಆ ಸ್ಥಾನದಿಂದ ತೆರವುಗೊಳಿಸುವುದನ್ನು ಗಮನಿಸಿದ್ದು, ತದ ನಂತರವೂ ಗದ್ದಲ ಮುಂದುವರೆದಿತ್ತು.
ಈ ಹಂತದಲ್ಲಿ ವಿಧಾನ ಪರಿಷತ್ ಸಚಿವಾಲಯದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿ ನನ್ನಕಚೇರಿಗೆ ಬಂದು ಸದನದೊಳಗೆ ಇರುವ ಪರಿಸ್ಥಿತಿಯನ್ನು ನನಗೆ ಮನವರಿಕೆ ಮಾಡಿಕೊಟ್ಟು, ಸದನದ ಅಧಿಕಾರಿಗಳಿಗೂ ಭಯದ ವಾತಾವರಣ ಇದೆ ಎಂದು ತಿಳಿಸಿದರು.
ಆ ಕೂಡಲೇ ಬೆಲ್ ಆಫ್ ಮಾಡುವಂತೆ ಕಾರ್ಯದರ್ಶಿಗೆ ಸೂಚಿಸಿ, ದಂಡ ನಾಯಕರ ರಕ್ಷಣೆಯೊಂದಿಗೆ ನಾನು ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ, ಜಗ್ಗಾಟ ಮುಂದುವರೆದಿತ್ತು. ಅನಿವಾರ್ಯವಾಗಿ ಸದನವನ್ನು ಅನಿರ್ಧಿಷ್ಠಾ ವಧಿಗೆ ಮುಂದೂಡಲು ಪೀಠದಿಂದ ತೀರ್ಮಾನಿಸಿರುತ್ತೇನೆ. ಈ ಎಲ್ಲ ಅಂಶಗಳನ್ನು ಸದನದ ದೃಶ್ಯಾವಳಿಗಳಿಂದ ಖಾತರಿಪಡಿಸಿ ಕೊಳ್ಳಬಹುದು. ಅದರಂತೆ ಸದನವನ್ನು ಅನಿರ್ದಿಷ್ಠಾವಧಿಗೆ ಮುಂದೂಡುವ ಅಧಿಸೂಚನೆಯನ್ನು ಅನುಮೊದಿಸಿ ರುವುದಾಗಿ ವರದಿಯಲ್ಲಿ ತಿಳಿಸಿಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಕಾನೂನು ಬಾಹಿರ ತೀರ್ಮಾನ ತೆಗೆದುಕೊಂಡಿಲ್ಲ. ಆದರೂ, ನನ್ನದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತಿದೆ. ನೋಟಿಸ್‌ಕೊಟ್ಟಾಗ ಬಿಜೆಪಿಗೆ ಬಹುಮತ ಇರಲಿಲ್ಲ. ಈಗಲೂ ನಾನು ನಡೆದುಕೊಂಡಿರುವ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಎಲ್ಲದಕ್ಕೂ ಸ್ಪಷ್ಟ ಉತ್ತರ ನೀಡುತ್ತೇನೆ.
ಕೆ. ಪ್ರತಾಪಚಂದ್ರ ಶೆಟ್ಟಿ, ಸಭಾಪತಿ