Advertisement

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

07:06 AM Dec 22, 2024 | keerthan |

ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಜಾಗೃತಿ ಮತ್ತು ಶತಮಾನದ ಸಂತ ಶ್ರೀಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ಗುಮ್ಮಟ ನಗರಿಯಲ್ಲಿ  ಸ್ಪೀಕರ್ ಯು.ಟಿ.ಖಾದರ್ ಚಾಲನೆ ನೀಡಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ 5 ಕಿಮೀ, 10 ಕಿಮೀ ಹಾಗೂ 21 ಕಿಮೀ ಹೆರಿಟೇಜ್ ರನ್ ನಡೆಯುತ್ತಿದೆ. 21 ಕಿಮೀ ಓಟವು ಬೆಳಗ್ಗೆ 6 ಗಂಟೆ, 10 ಕಿಮೀ ಓಟಕ್ಕೆ ಬೆಳಗ್ಗೆ 6.45ಕ್ಕೆ ನಗರದ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಸಿರು ನಿಶಾನೆ ತೋರಿಸಿದರು.

5 ಕಿಮೀ ಓಟಕ್ಕೆ ಬೆಳಗ್ಗೆ 7.30ಕ್ಕೆ ಶುರುವಾಗಲಿದೆ. ಯು.ಟಿ.ಖಾದರ್ ಚಾಲನೆ ನೀಡಿ 5 ಕಿಮೀ ರನ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ, ಎಂಎಲ್ ಸಿ ಸುನೀಲಗೌಡ ಪಾಟೀಲ, ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್‌ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ, ವಿಜಯನಗರದ ಜೆ.ಎಸ್.ಡಬ್ಲ್ಯೂ ಅಧ್ಯಕ್ಷ ಪಿ.ಎಸ್.ಮುರುಗನ್ ಸೇರಿದಂತೆ ಹಲವರು ಭಾಗವಸಿದ್ದಾರೆ.

5 ಕಿಮೀ ಓಟಕ್ಕೆ 8,621, 10 ಕಿಮೀ ಓಟಕ್ಕೆ 441 ಮತ್ತು 21 ಕಿಮೀ ಓಟಕ್ಕೆ 304 ಜನ ನೋಂದಾಯಿಸಿಕೊಂಡಿದ್ದಾರೆ. ಮೂರು ವಿಭಾಗದಲ್ಲಿ ತಲಾ 38 ಪುರುಷ ಮತ್ತು ಮಹಿಳಾ ಓಟಗಾರರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಈ ಬಾರಿ ಒಟ್ಟಾರೆ 10 ಲಕ್ಷ ರೂ. ಬಹುಮಾನ ನಿಗದಿ ಪಡಿಸಲಾಗಿದೆ. ಓಟ ಮುಕ್ತಾಯದ ಬಳಿಕ ಬೆಳಗ್ಗೆ 9 ಗಂಟೆಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಪ್ರತಿಯೊಬ್ಬ ಓಟಗಾರರಿಗೆ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಪದಕ ವಿತರಣೆ ಮಾಡಲಾಗುತ್ತದೆ.

Advertisement

ಓಟಗಾರರಿಗೆ ಮಾರ್ಗಮಧ್ಯೆ ಬಾಯಾರಿಕೆ ನೀಗಿಸಲು 13 ಹೈಡ್ರೇಶನ್ ಪಾಯಿಂಟ್ ಗಳನ್ನು ಸ್ಥಾಪಿಸಲಾಗಿದ್ದು, ನೀರು, ಬಾಳೆಹಣ್ಣು, ಗ್ಲುಕೋಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ವಚನ ಗಾಯನ, ಜುಂಬಾ ಡ್ಯಾನ್ಸ್, ಕಹಳೆ ವಾದನ, ಗೊಂಬೆ ಕುಣಿತ, ಚಿಯರ್ ಅಪ್ ನೃತ್ಯ-ಸಾಂಗ್, ಕೇರಳ ಮಹಿಳಾ ತಂಡದಿಂದ ತಾಸೆ ವಾದನ, ಹುಲಿಕುಣಿತ, ಡೊಳ್ಳು ಕುಣಿತ, ಹಲಗೆ ವಾದನ, ಬ್ಯಾಂಡ್ ವಾದನ, ಡಿಜೆ ಸೌಂಡ್ ಸೇರಿ ತಂಡಗಳ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next