Advertisement

ಸೊರಬ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ; ಆರು ಕಂಟೈನ್ಮೆಂಟ್ ಝೋನ್ ಘೋಷಣೆ

01:37 PM May 20, 2021 | Team Udayavani |

ಸೊರಬ: ಕೋವಿಡ್ ಪಾಸಿಟೀವ್ ಪ್ರಕರಣಗಳು ಹೆಚ್ಚು ಕಂಡು ಬಂದ ತಾಲ್ಲೂಕಿನ ಆನವಟ್ಟಿ ಪಟ್ಟಣವನ್ನು ಗುರುವಾರದಿಂದ ಮೇ.24 ರವರೆಗೆ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ,

Advertisement

ಪಟ್ಟಣದಲ್ಲಿ 151 ಸಕ್ರೀಯ ಕೋವಿಡ್ ಪಾಸಿಟೀವ್ ಪ್ರಕರಣಗಳು ಕಂಡುಬಂದಿದ್ದು,  15 ಜನ ಮೃತಪಟ್ಟಿದ್ದಾರೆ.  ಒಂದೇ ಬಡಾವಣೆ, ಒಂದೇ ಕುಟುಂಬ ಅಥವಾ ನೆರೆಹೊರೆಯದಲ್ಲಿ 5 ಕ್ಕಿಂತ ಹೆಚ್ಚು ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಬಡಾವಣೆಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ, ಸಾರ್ವಜನಿಕರ ಪ್ರವೇಶ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ.

ಹೆಚ್ಚು ಕೊರೋನಾ ಕೋವಿಡ್ ಕಾಣಿಸಿಕೊಂಡ ದೇವಸ್ಥಾನದ ಹಕ್ಕಲು, ಸಂತೆ ಮೈದಾನ, ನೆಹರೂ ನಗರ, ಜೆ.ಸಿ. ಬಡಾವಣೆ, ಬ್ರಾಹ್ಮಣ ಬೀದಿ, ತಿಮ್ಮಾಪುರ ಬಡಾವಣೆಗಳು ಮೈಕ್ರೋ ಕಂಟೈನ್ಮೆಂಟ್ ಝೋನ್ ಪ್ರದೇಶಗಳಾಗಿದ್ದು, ಈ ಪ್ರದೇಶಗಳಲ್ಲಿ ಮತ್ತು ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಸ್ಯಾನಿಟೈಸ್ ಮಾಡಿಸಲಾಗಿದೆ.

ಇದನ್ನೂ ಓದಿ:  ಭಾರತಕ್ಕೆ ಅಮೆರಿಕದಿಂದ 3,656 ಕೋಟಿ ರೂ. ಕೋವಿಡ್ ಪರಿಹಾರ ಸಾಮಗ್ರಿ ಪೂರೈಕೆ: ಅಮೆರಿಕ

ಗುರುವಾರದಿಂದ ಮುಂದಿನ ಐದು ದಿನಗಳವರೆಗೆ ಕಠಿಣ ನಿರ್ಬಂಧ ಜಾರಿಯಾಗಿದ್ದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕೃತವಾದ ಡೈರಿಗಳಲ್ಲಿ ಹಾಲು ಮಾರಲು ಸಂಜೆ 6 ರವರೆಗೆ ಅವಕಾಶವಿದೆ. ಬೆಳಗ್ಗೆ 10ರವರೆಗೆ ತರಕಾರಿಗಳನ್ನು ತಳ್ಳುವ ಗಾಡಿ ಅಥವಾ ಹೊತ್ತು ಮಾರಲು ಅವಕಾಶ ನೀಡಲಾಗಿದೆ. ತುರ್ತು ಅಗತ್ಯ ಸೇವೆಯಾದ ಔಷಧದ ಅಂಗಡಿಗಳಿಗೆ ರಾತ್ರಿ 10 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.  ಪೊಲೀಸ್ ಇಲಾಖೆಯಿಂದ ಅನಗತ್ಯ ತಿರುಗುವವರಿಗೂ ಸಹ ಕಡಿವಾಣ ಹಾಕಲಾಗಿದೆ.

Advertisement

ಕಂಟೈನ್ಮೆಂಟ್ ಝೋನ್ ನಲ್ಲಿರುವ ನಿವಾಸಿಗಳು ಅಗತ್ಯ ವಸ್ತುಗಳು ಬೇಕಿದ್ದರೆ, ದೂರವಾಣಿ ಸಂಖ್ಯೆ 08184-267799 ಗೆ ಕರೆಮಾಡಬಹುದಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ ಪಿ. ರಾಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆನವಟ್ಟಿ ಪಿಎಸ್ಐ ಪ್ರವೀಣ್ ಕುಮಾರ್ ವಾಲೀಕರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜಿ. ರವಿಕುಮಾರ್ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ:  ಸಿಎಂ ಭೇಟಿ ಮಾಡಿದ ದ.ಕ ಶಾಸಕರ ನಿಯೋಗ; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

Advertisement

Udayavani is now on Telegram. Click here to join our channel and stay updated with the latest news.

Next