Advertisement
ಕಾರ್ಯಕ್ರಮವೇರ್ಪಡಿಸಿದರೂ ಅದನ್ನು ಆಸ್ವಾದಿಸುವ ಪ್ರೇಕ್ಷಕ ವರ್ಗ ಬೇಕು. ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡುವ ಕಲಾಭಿಮಾನಿಗಳು ಅಗತ್ಯ. ಅದು ಇಲ್ಲವಾದರೆ ಕಲಾವಿದನ ಉತ್ಸಾಹ ಕ್ಷೀಣಿ ಸುತ್ತದೆ. ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕುರ್ಚಿಗಳು ಖಾಲಿಯಾಗಿರುತ್ತವೆ. ಯಾಕೆ ಈ ನಿರಾಸಕ್ತಿ?
ಎಲ್ಲ ಸಾಂಸ್ಕೃತಿಕ ಕಲೆಗಳ ಪ್ರೇರಣಾ ಸ್ಥಳ ಪಾಠ ಶಾಲೆ ಗಳು. ಆದರೆ ಇಂದಿನ ಶಾಲೆಗಳು ವಿವಿಧ ಸಾಂಸ್ಕೃತಿಕ ಕಲೆ ಗಳಿಗೆ ಎಷ್ಟು ಮಹತ್ವ ನೀಡುತ್ತಿವೆ?. ಇಂದು ಶಾಲೆಗಳು ಏಕತಾನತೆ ಇರುವ ಯಾಂತ್ರೀಕರಣವಾಗಿರುವ ಉದ್ಯೋ ಗ ಗಿಟ್ಟಿಸುವ ಬೋಧನೆಯನ್ನು ಮಾತ್ರ ನೀಡುತ್ತಿವೆ. ಇದ ಕ್ಕಾಗಿ ಸಿಲೆಬಸ್ ಎಂಬ ಹೊರೆಯನ್ನು ಶಿಕ್ಷಕರು ಮಕ್ಕಳ ತಲೆ ಮೇಲೆ ಹೊರಿಸಲೇ ಬೇಕಾಗಿದೆ. ಜೀವನೋತ್ಸಾಹ ನೀಡು ವ ಕಲೆಗಳಿಗೆ ಕನಿಷ್ಠ ಪ್ರೇರಣೆಯನ್ನು ನೀಡುವ ಕೆಲಸವೂ ಶಾಲೆಯ ಪಠ್ಯಕ್ರಮದಲ್ಲಿ ಇಲ್ಲ. ಆಸಕ್ತರು ಶಾಲೆಯ ಹೊರಗೆ ಪ್ರತ್ಯೇಕವಾಗಿ ಕಲಿಯಬೇಕಾಗುತ್ತದೆ. ಸಂಗೀತ, ಹೇಳುವ ಅಥವಾ ಕೇಳುವ ಮೂಲಕ ಅಬಾ ಲವೃದ್ಧರೂ ಸಂತಸ ಪಡುವ ಕಲೆ. ಪ್ರಾಣಿಗಳೂ ಸಂಗೀತಕ್ಕೆ ಒಲಿಯುತ್ತವೆ. ಅದರೆ ಇದನ್ನು ಎಳವೆಯಲ್ಲಿ ಕಲಿಸುವ ವ್ಯವಸ್ಥೆ ನಮ್ಮ ಪಠ್ಯದ ಸಿಲೆಬಸ್‌ನಲ್ಲಿ ಇದೆಯಾ? ಸಂಗೀತ ಕಲೆಯಲ್ಲಿ ಕೌಶಲ ಪಡೆದವರು ಎಲ್ಲೂ ಉದ್ಯೋಗ ಸಿಗದಿ ದ್ದರೂ ಸ್ವಾವಲಂಬೀ ಜೀವನ ನಡೆಸಬಲ್ಲರು. ವೃದ್ಧಾಪ್ಯದ ತನಕವೂ ಸಂಗೀತ ತರಗತಿಗಳನ್ನು ನಡೆಸುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳಬಹುದು.
Related Articles
Advertisement
ಮೂರು ವರ್ಷಗಳ ಹಿಂದೆ ಕೊರೊನಾ ನಮ್ಮೆಲ್ಲರನ್ನೂ ಪೀಡಿಸಿತ್ತು. ಜನ ಮನೆಯಿಂದ ಹೊರಹೋಗದಂತೆ ನಿರ್ಬಂಧಿಸಿತ್ತು. ಜನ ಮನೋರಂಜನೆಗಾಗಿ ಡಿಜಿಟಲ್ ಮೀಡಿಯಾದತ್ತ ಕಣ್ಣು ಹಾಯಿಸಿದರು. ಆಗ ಕಲಾವಿದನಿಗೂ ಆನ್‌ಲೈನ್ ಪ್ರಸಾರ ಖುಷಿ ನೀಡಿತು. ಆದರೆ ಈಗ?
ಕಲಾರಾಧಕರು ಮನೆಯಲ್ಲಿಯೇ ಕುಳಿತು ನೋಡುವ ಚಾಳಿ ಈಗಲೂ ಮುಂದುವರಿದಿದೆ. ಯಾವುದೇ ಸಾಂಸ್ಕೃ ತಿಕ ಕಾರ್ಯಕಮಗಳಿರಲಿ, ಅದಕ್ಕೆ ಬರುವ ಜನರ ಸಂಖ್ಯೆ ತೀರಾ ಕಡಿಮೆಯಾಗಿದೆ. ಯುಟ್ಯೂಬ್‌ನವರ ಕಾಟ ಎನ್ನಲೇ? ಪ್ರಶ್ನಿಸಿದರೆ ಅಂಗೈಯಲ್ಲೇ ಆಕರ್ಷಕ ರೀತಿಯಲ್ಲಿ ಕಾಣುವಾಗ ಬೇರೆಡೆ ಬಂದು ಕಷ್ಟ, ಹಣ ನಷ್ಟ ಮಾಡು ವುದ್ಯಾಕೆ ಎಂಬ ಮಾತು ಕೇಳಿ ಬರುತ್ತದೆ. ಶಾಸ್ತ್ರೀಯ ಕಲೆಗಳಲ್ಲಿ ಪ್ರೌಢಿಮೆ ಗಳಿಸಲು ಅನೇಕ ವರ್ಷಗಳ ಸತತ ಅಭ್ಯಾಸ ಬೇಕಾಗುತ್ತದೆ. 10 ವರ್ಷ ಕಲಿತು ಪ್ರದರ್ಶನ ನೀಡುವಾಗ 10 ಜನರೂ ವೀಕ್ಷಕರಿಲ್ಲ ಎನ್ನುವಾಗ ಯಾವ ಕಲಾವಿದನಿಗೆ ತಾನೆ ನಿರಾಸೆಯಾಗುವುದಿಲ್ಲ?
ಕಲಾ ಕ್ಷೇತ್ರದಲ್ಲಿ ಎಳೆಯ ಮತ್ತು ಬೆಳೆಯುವ ಕಲಾವಿ ದರಿಗೆ ವೇದಿಕೆಯ ಕೊರತೆ ಈಗ ಹಿಂದಿಗಿಂತ ಹೆಚ್ಚು ಕಾಡು ತ್ತಿದೆ. ಉದಾಹರಣೆಗೆ ಕಿಕ್ಕಿರಿದು ಪ್ರೇಕ್ಷಕರು ತುಂಬಿರುತ್ತಿದ್ದ ತಾಳಮದ್ದಳೆ ಕ್ಷೇತ್ರದಲ್ಲಿ ಮುಮ್ಮೇಳ ತೀರಾ ಬಡವಾಗುತ್ತಿದೆ. ಕಾರಣ ಸಪ್ತಾಹದಂತಹ ಕಾರ್ಯಕ್ರಮಗಳಲ್ಲಿ ಪ್ರತೀ ದಿನವೂ ಹಿರಿಯ ಕಲಾವಿದರಿಗೆ ಮತ್ತು ವೃತ್ತಿನಿರತರಿಗೆ ಮಾತ್ರ ಮಣೆ. ಅದೇ ಕಲಾವಿದ, ಅದೇ ಮಾತುಗಳು. ಬೆಳೆ ಯುವ ಕಲಾವಿದರಿಗೆ ಅವಕಾಶ ತೀರಾ ಕಡಿಮೆ. ಪೋಷಕ ಪಾತ್ರಗಳನ್ನೂ ವೃತ್ತಿನಿರತರೇ ಮಾಡಿ, ಒಂದೆರಡು ಪದ್ಯ ಗಳಿಗೂ ಗಂಟೆಗಟ್ಟಲೆಯ ಅರ್ಥಗಾರಿಕೆ. 3 ಗಂಟೆಯ ಪ್ರಸಂಗವನ್ನು 6 ಗಂಟೆಗೊಯ್ದಾಗ ಪ್ರೇಕ್ಷಕರ ಆಸಕ್ತಿ ಕಡಿಮೆ ಯಾಗುತ್ತದೆ. ಇದರಿಂದಾಗಿ ಕಲಿಯುವ ಕಲಾವಿದರೂ ಇಲ್ಲ. ಪ್ರೇಕ್ಷರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವನ್ನೂ ಸೇವಾ ರೂಪ ದಲ್ಲಿ ಬಯಸುವ ಟ್ರೆಂಡ್ ಈಗ ಹೆಚ್ಚುತ್ತಿದೆ. ಹಬ್ಬಗಳಿಗೆ, ಬ್ರಹ್ಮಕಲಶದಂತಹ ಕಾರ್ಯಕ್ರಮಗಳಲ್ಲಿ ಹಣದ ಕೊರತೆ ಎಲ್ಲೂ ಬರುವುದಿಲ್ಲ. ಕೊನೆಗೆ ಲಕ್ಷಗಟ್ಟಲೆ ಉಳಿತಾಯವಾ ಗಿರುತ್ತದೆ. ಸ್ಟಾರ್ ಕಲಾವಿದರಿಗೆ ಅತಿಯಾಗಿ ಖರ್ಚು ಮಾಡುತ್ತಾರೆ. ಅದರೆ ಪ್ರದರ್ಶನ ನೀಡಿದ ಊರ ಕಲಾವಿ ದರಿಗೆ ದೇವರ ಪ್ರಸಾದ ಮಾತ್ರ. ಹಿಮ್ಮೇಳದ ಮತ್ತು ಇತರ ಖರ್ಚು ವೆಚ್ಚಗಳನ್ನು ಕಲಾವಿದನೇ ಬರಿಸಿಕೊಳ್ಳಬೇಕು ಅಥವಾ ಪ್ರಾಯೋಜಕರ ಕಾಲು ಹಿಡಿಯಬೇಕು. ಯುವ, ಬೆಳೆಯುತ್ತಿರುವ ಕಲಾವಿದರಿಗಾದರೆ ಸರಿ. ಆದರೆ ಹಿರಿಯ, ನುರಿತ ಕಲಾವಿದರಿಗೂ ಇದೇ ಗತಿ. ನಿರಂತರ ಸೇವೆ ಕಲಾವಿದರಿಗೆ ನಿರಾಸೆ ತರುತ್ತದೆ. ಈ ವ್ಯವಸ್ಥೆಯಿಂದಾಗಿ ಕಲಾವಿದರು ಸದ್ದಿಲ್ಲದೆ ತೆರೆಮರೆಗೆ ಸರಿಯುವಂತೆ ಮಾಡುತ್ತಿದೆ. ಈ ಕಾರಣಗಳಿಂದ ಕಲೆಯ ಉಸಾಬರಿಯೇ ಬೇಡ ಎಂದು ಯುವಜನತೆಯಲ್ಲಿಂದು ಉದಾಸೀನತೆ ಮೂಡುತ್ತಿದೆ. ಕಲಾಪೋಷಕರ ಕೊರತೆ ಯಿಂದ ಕಲೆಗಳೂ ತೆರೆಯ ಮರೆಗೆ ಸರಿಯುತ್ತಿವೆ ಎಂದು ನಿಮಗೂ ಅನಿಸುತ್ತಿದೆಯಲ್ಲವೇ?
– ಶಂಕರ್ ಸಾರಡ್ಕ