ಕೋವಿಡ್ ಕಾರಣದಿಂದ ಬಹಳ ಕಾಲ ಕಾದು ಕಳೆದ ಶುಕ್ರವಾರವಷ್ಟೇ ಥಿಯೇಟರ್ ಗೆ ಲಗ್ಗೆಯಿಟ್ಟ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರ ಮೊದಲ ಎರಡು ದಿನಗಳಲ್ಲೇ 50.14 ಕೋಟಿ ರೂ. ಬಾಚಿಕೊಂಡಿದೆ.
ಕಳೆದ ವರ್ಷದ ಮಾರ್ಚ್ 27ಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕೋವಿಡ್ ಕಾರಣಕ್ಕೆ ಮುಂದೂಡಲಾಗಿತ್ತು. ಬಳಿಕ ಈ ವರ್ಷದ ಎಪ್ರಿಲ್ 30ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಅದೂ ಆಗಿರಲಿಲ್ಲ. ಕಳೆದ ಶುಕ್ರವಾರ (ನ.5) ಕೊನೆಗೂ ಚಿತ್ರತಂಡ ತೆರೆಕಂಡಿದೆ.
ಇದನ್ನೂ ಓದಿ:ಓರಿಯೊ ಬಿಸ್ಕೆಟ್ ನಲ್ಲಿ ಪಕೋಡಾ ಮಾಡಿದ ವ್ಯಾಪಾರಿ! ವೈರಲ್ ಆಗುತ್ತಿದೆ ವಿಡಿಯೋ
ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಚಿತ್ರದ ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲ ದಿನವೇ ಸೂರ್ಯವಂಶಿ ಮುನ್ನುಗ್ಗಿದೆ. ದೊಡ್ಡ ಮಾರುಕಟ್ಟೆಯಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶವಿದ್ದರೂ ಮೊದಲು ದಿನವೇ ಭಾರತದಲ್ಲಿ 26.29 ಕೋಟಿ ರೂ ಗಳಿಸಿದೆ. ಎರಡನೇ ದಿನ 23.85 ಕೊಟಿ ರೂ ಗಳಿಸಿದೆ ಎಂದು ಹೇಳಿದ್ದಾರೆ. ವಿದೇಶದಲ್ಲಿ ಇದುವರೆಗೆ 16.68 ಕೋಟಿ ರೂ ಗಳಿಕೆ ಮಾಡಿದೆ.
ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.