Advertisement

ಶೀಘ್ರದಲ್ಲೇ ವಿಶ್ವದರ್ಜೆಯ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ: ಕುಂಞಿ

03:45 AM Feb 13, 2017 | Team Udayavani |

ಮಂಗಳೂರು: ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಯೇನಪೊಯ ಸಂಸ್ಥೆಯಿಂದ ಶೀಘ್ರದಲ್ಲೇ ವಿಶ್ವದರ್ಜೆಯ ಕ್ಯಾನ್ಸರ್‌ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಯೇನಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೇನಪೊಯ ಅಬ್ದುಲ್‌ ಕುಂಞಿ ಹೇಳಿದರು.

Advertisement

ಯೇನಪೊಯ ದಂತ ವೈದ್ಯಕೀಯ ಕಾಲೇಜಿಗೆ 25 ವರ್ಷವಾದ ಹಿನ್ನೆಲೆಯಲ್ಲಿ ಯೇನಪೊಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಕ್ಯಾನ್ಸರ್‌ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಫಾರಂ ಫಿಜಾ ಮಾಲ್‌ ಆವರಣದಲ್ಲಿ ಆಯೋಜಿಸಲಾದ ಮ್ಯಾರಥಾನ್‌ ಕ್ಯಾನ್ಸರ್‌ಥೋನ್‌ – 2017 ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ಯಾನ್ಸರ್‌ ಭಯ ಅನಗತ್ಯ 60 ವಿದ್ಯಾರ್ಥಿಗಳನ್ನೊಳಗೊಂಡು ಒಂದು ಚಿಕ್ಕ ಕಟ್ಟಡದಲ್ಲಿ ಆರಂಭಿಸಲಾದ ಸಂಸ್ಥೆ ಇಂದು ಜಗತ್ತಿ
ನಾದ್ಯಂತ ಹೆಸರುವಾಸಿಯಾಗಿದೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ಯಾನ್ಸರ್‌ ಎಂದಾಕ್ಷಣ ಭಯಭೀತರಾಗುವ ಅಗತ್ಯವಿಲ್ಲ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶೇ. 70ರಷ್ಟು ಜನ ಗುಣಮುಖರಾಗಿ ಸಂತಸದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಜನರದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಚೇರ್‌ಮನ್‌ ಡಾ| ಮೋಹನ ಆಳ್ವ, ಅಂತಾರಾಷ್ಟ್ರೀಯ ಕ್ರೀಡಾ ಪಟುಗಳಾದ ಸಹನಾ ಕುಮಾರಿ, ವಂದನಾ ಶಾನುಭೋಗ್‌, ಫಿಜಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ಫಾರೂಕ್‌, ಯೇನಪೊಯ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ| ಎಂ. ವಿಜಯ್‌ಕುಮಾರ್‌, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ಬಿ.ಎಚ್‌. ಶ್ರೀಪತಿ ರಾವ್‌, ಇಸ್ಲಾಮಿಕ್‌ ಅಕಾಡೆಮಿ ಆಫ್‌ ಎಜುಕೇಶನ್‌ ನಿರ್ದೇಶಕ ಡಾ| ಅಖ್ತರ್‌ ಹುಸೈನ್‌, ಡಾ| ಇಫ್ತಿಕರ್‌ ಅಲಿ, ಡಾ| ಶ್ಯಾಮ್‌ ಭಟ್‌ , ಡಾ| ಗಣೇಶ್‌ ಮೊದಲಾದವರು ಉಪಸ್ಥಿತರಿದ್ದರು.

ಮ್ಯಾರಥನ್‌ನಲ್ಲಿ ಸುಮಾರು 7,000 ಮಂದಿ ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ಯಾನ್ಸರ್‌ಥೋನ್‌ 2017ರ ಅಧ್ಯಕ್ಷ ಡಾ| ಹಸನ್‌ ಸಫìರಾಜ್‌ ಸ್ವಾಗತಿಸಿದರು. ಕಾರ್ಯದರ್ಶಿ ಡಾ| ಸಂದೀಪ್‌ ಶೆಟ್ಟಿ ವಂದಿಸಿದರು. ಅನುರಾಗ್‌ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next