Advertisement

Belgavi;ಕೆಎಲ್ ಇ ನೂತನ ಕ್ಯಾನ್ಸರ್ ಆಸ್ಪತ್ರೆಗೆ ಶರದ್ ಪವಾರ್ ಭೇಟಿ

07:04 PM Sep 02, 2024 | Team Udayavani |

ಬೆಳಗಾವಿ: ಮಹಾರಾಷ್ಟ್ರ ಮಾಜಿ ಸಿಎಂ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋಮವಾರ(ಸೆ.2) ಕೆಎಲ್ ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳ ವೀಕ್ಷಣೆ ಮಾಡಿದರು.

Advertisement

”2011ರಲ್ಲಿ ನಾನೇ ಈ ಆಸ್ಪತ್ರೆಗೆ ಭೂಮಿ ನೆರವೇರಿಸಿದ್ದೆ.ಈಗ ಅತ್ಯಾಧುನಿಕತೆಯಿಂದ ಕೂಡಿರುವ ಆಸ್ಪತ್ರೆ ಮೈದಳೆದು ನಿಂತಿದೆ. ಈ ರೀತಿಯ ಕಟ್ಟಡ ರೋಗಿ ಸ್ನೇಹಿಯಾಗಲಿದೆ. ಗುಣಮಟ್ಟದ ಚಿಕಿತ್ಸೆಗೆ ಸಾಕ್ಷಿಯಾಗಲಿದೆ” ಎಂದರು.

”ಆಸ್ಪತ್ರೆಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಈಗಾಗಲೇ ಒಂದು ವಿಭಾಗವನ್ನು ಪ್ರಾರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಆಸ್ಪತ್ರೆಯು ಜನಸೇವೆಗೆ ತೆರೆದುಕೊಳ್ಳಲಿದೆ. ಈ ಭಾಗದಲ್ಲಿ ಕ್ಯಾನ್ಸರ್ ಗೆ ಸಮಗ್ರ ಚಿಕಿತ್ಸೆ ನೀಡುವ ಅತ್ಯಾಧುನಿಕ ಕೇಂದ್ರಗಳ ಅವಶ್ಯಕತೆಯಿತ್ತು. ಅದನ್ನು ಅರಿತು ಒಂದೇ ಸೂರಿನಡಿ ಎಲ್ಲ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶದಿಂದ ಸುಮಾರು 300 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ” ಎಂದು ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹೇಳಿದರು. ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಎಂ.ವಿ.ಜಾಲಿ ಅವರು ಆಸ್ಪತ್ರೆಯ ಕುರಿತು ಸಮಗ್ರ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.