Advertisement

Kalcharpe: ವಿಲೇ ಆಗದೆ ರಾಶಿ ಬಿದ್ದ ತ್ಯಾಜ್ಯ

11:48 AM Aug 03, 2024 | Team Udayavani |

ಅರಂತೋಡು: ಸುಳ್ಯ ನಗರದ ಘನ ತ್ಯಾಜ್ಯಗಳನ್ನು ಆಲೆಟ್ಟಿ ಗ್ರಾಮದ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು ಕಸ ವಿಲೇವಾರಿಯ ಯಂತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ತ್ಯಾಜ್ಯ ರಾಶಿ ಬೀಳಲಾರಂಭಿಸಿದೆ.

Advertisement

ಪರಿಸರದ ಕೆಲವು ಜನರಲ್ಲಿ ಜ್ವರ ಲಕ್ಷಣವೂ ಕಾಣಿಸಿದೆ. ಈ ಭಾಗದಲ್ಲಿ ಕೊಳಚೆ ನೀರೂ ಸಂಗ್ರಹವಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರಲ್ಲಿ ಹುಟ್ಟಿದೆ. ಆಗೊಮ್ಮೆ ಈಗೊಮ್ಮೆ ಯಂತ್ರ ದುರಸ್ತಿಯಾಗಿ ಕಾರ್ಯಾರಂಭಿ ಸಿದಾಗ ಕಪ್ಪಗಿನ ದಟ್ಟ ಹೊಗೆ ಬಿಡುಗಡೆ ಯಾಗುತ್ತಿದ್ದು ಆತಂಕ ಸೃಷ್ಟಿಸುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಪಯಸ್ವಿನಿ ನದಿ ಸೇರುವ ತ್ಯಾಜ್ಯ ಘಟಕದ ಪಕ್ಕದಲ್ಲಿ ಘನ ತ್ಯಾಜ್ಯದ ರಾಶಿ ಬಿದ್ದುಕೊಂಡಿದ್ದು ಮಳೆ ಜೋರಾಗಿ ಬರುತ್ತಿರುವಾಗ ಅವು ಪಕ್ಕದ ಚರಂಡಿ ಮೂಲಕ ಸಾಗಿ ಸುಳ್ಯ ನಗರಕ್ಕೆ ನೀರು ಪೂರೈಕೆ ಮಾಡುವ ಸುಳ್ಯದ ಜೀವ ನದಿ ಪಯಸ್ವಿನಿಯ ಒಡಲು ಸೇರುತ್ತಿದೆ.

ಯಂತ್ರ ದುರಸ್ತಿ ಪಡಿಸಲಾಗಿದೆ

ಬರ್ನಿಂಗ್‌ ಯಂತ್ರ ಕೆಟ್ಟು ಕೆಲವು ದಿನಗಳಿಂದ ಯಂತ್ರ ಕೆಲಸ ಮಾಡುತ್ತಿರಲಿಲ್ಲ. ಇದೀಗ ಯಂತ್ರವನ್ನು ದುರಸ್ತಿ ಪಡಿಸಲಾಗಿದೆ. ಹೆಚ್ಚುವರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತೇವೆ.
-ಸುಧಾಕರ, ನ.ಪಂ. ಮುಖ್ಯಾಧಿಕಾರಿ, ಸುಳ್ಯ.

ವಿಷಯುಕ್ತ ಹೊಗೆ

Advertisement

ತ್ಯಾಜ್ಯ ಬರ್ನ್ ಮಾಡುವ ಯಂತ್ರ ಸರಿಯಾಗಿ ಕೆಲಸಮಾಡುತ್ತಿಲ್ಲ. ಕಸದ ರಾಶಿ ಮೇಲ್ಛಾವಣಿ ಮುಟ್ಟಲು ತಯಾರಾಗಿದೆ. ಪರಿಸರ ಶುಚಿತ್ವ ಇಲ್ಲದೆ ರೋಗ ಹರಡುವ ಭೀತಿ ಎದುರಾಗಿದೆ. ವಿಷಯುಕ್ತ ಹೊಗೆ ಪರಿಸರದವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. -ಆಶೋಕ ಪೀಚೆ , ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next