Advertisement

Mumbai ಹಾಫ್ ಮ್ಯಾರಥಾನ್‌: 20 ಸಾವಿರ ಸ್ಪರ್ಧಿಗಳು ಭಾಗಿ

12:11 AM Aug 24, 2024 | Team Udayavani |

ಮುಂಬಯಿ: ಮುಂದಿನ ರವಿವಾರ ನಡೆಯುವ “ಮುಂಬೈ ಹಾಫ್ ಮ್ಯಾರಥಾನ್‌’ ಸ್ಪರ್ಧೆಯಲ್ಲಿ 20 ಸಾವಿರದಷ್ಟು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 6 ಸಾವಿರ ಮಂದಿ ವನಿತೆಯರು. ಹಿಂದಿನ ಮ್ಯಾರಥಾನ್‌ಗೆ ಹೋಲಿಸಿದರೆ ವನಿತೆಯರ ಸಂಖ್ಯೆ ಶೇ. 31ರಷ್ಟು ಹೆಚ್ಚಿದೆ ಎಂಬುದಾಗಿ ಸಂಘಟಕರು ತಿಳಿಸಿದ್ದಾರೆ.

Advertisement

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಬೆಳಗ್ಗೆ 5 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಫ್ಲ್ಯಾಗ್‌ ಆಫ್ ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ಮಾಡಲಿದ್ದಾರೆ.

10ಕೆ ರೇಸ್‌ನಲ್ಲಿ ಗರಿಷ್ಠ 8 ಸಾವಿರ, 21ಕೆ ಹಾಫ್ ಮ್ಯಾರಥಾನ್‌ನಲ್ಲಿ 4 ಸಾವಿರ ಓಟಗಾರರು ಭಾಗವಹಿಸಲಿದ್ದಾರೆ. 5ಕೆ ವಿಭಾಗದಲ್ಲಿ 5 ಸಾವಿರ, 3ಕೆ ರೇಸ್‌ನಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ನೌಕಾಪಡೆಯ ಒಂದೂವರೆ ಸಾವಿರ ಮಂದಿ ಈ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.