Advertisement
ಮೈಸೂರು ರಿಂಗ್ ರಸ್ತೆಯ ತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯ ತೆರವು ಮಾಡುವ ಸಂಬಂಧ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಸ್ವತ್ಛತೆಬಗ್ಗೆ ನಾವೆಲ್ಲರೂ ಗಮನ ಹರಿಸಲೇ ಬೇಕು. ಲೋಕೋಪಯೋಗಿ, ಆರ್‌ಡಿಪಿಆರ್, ರಾಜ್ಯ ಹೆದ್ದಾರಿ ಇಲಾಖೆ, ಕೆಆರ್‌ಐಡಿಎಲ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಮಹಾನಗರ ಪಾಲಿಕೆಗಳ ಕಾರ್ಯಪಾಲಕ, ಅಧೀಕ್ಷಕ ಅಭಿಯಂತ ರರು ಹಾಗೂ ಯೋಜನಾ ನಿರ್ದೇಶಕರನ್ನೊಳಗೊಂಡ ತಂಡ ರಚನೆ ಮಾಡಲು ಸೂಚನೆ ನೀಡಿದರು.
Related Articles
Advertisement
ಸ್ವತ್ಛತೆಯನ್ನು ಕಾರ್ಯನಿರ್ವಹಿಸುವ ತಂಡಗಳಿಗೆ ಹೊರವರ್ತುಲ ರಸ್ತೆಯ ಮೀಡಿಯನ್ ಅನ್ನು ಸ್ವತ್ಛಗೊಳಿಸುವುದು, ಹೊರವರ್ತುಲ ರಸ್ತೆ, ಸರ್ವಿಸ್ ರಸ್ತೆ ಹಾಗೂ ಪಾದಚಾರಿ ಮಾರ್ಗದಲ್ಲಿ ಶೇಖರಣೆ ಯಾಗಿರುವ ಡೆಬ್ರಿಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಸ್ವತ್ಛಗೊಳಿಸುವ ಜವಾಬ್ದಾರಿ ನೀಡಲಾಯಿತು.
ಸಭೆಯಲ್ಲಿ ಒಂದೊಂದು ಇಲಾಖೆಗೆ ಒಂದೊಂದು ವ್ಯಾಪ್ತಿಯ ಜವಾಬ್ದಾರಿ ವಹಿಸುವ ಬಗ್ಗೆ ಚರ್ಚೆಗಳು ನಡೆದವು. ಅಂತಿಮವಾಗಿ ಇನ್ನೊಂದು ಸುತ್ತಿನ ಮಾತುಕತೆ ಬಳಿಕ ಹೆಚ್ಚುವರಿ ಜವಾಬ್ದಾರಿಗಳಿದ್ದರೆ, ಇಲ್ಲವೇ ಈಗ ಮಾಡಿರುವ ಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ಪಿ ರಿಷ್ಯಂತ್, ಮುಡಾ ಆಯುಕ್ತ ನಟೇಶ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇತರರಿದ್ದರು.