ಬ್ರಿಸ್ಬೇನ್: ಐಪಿಎಲ್‌ಗೆ ಇನ್ನೂ 4 ತಿಂಗಳು ಬಾಕಿ ಇದೆ. ಅಷ್ಟರಲ್ಲೇ ಆರ್‌ಸಿಬಿ ಅಭಿಮಾನಿಗಳ “ಈ ಸಲ ಕಪ್ ನಮ್ದೇ ‘ ಘೋಷ ಮೊಳಗಲಿದೆ. ಅದೂ ದೂರದ ಬ್ರಿಸ್ಬೇನ್‌ನಲ್ಲಿ, ಭಾರತ-ಆಸ್ಟ್ರೇಲಿಯ ಟೆಸ್ಟ್ ವೇಳೆ!
“ನಾವು ಆರ್‌ಸಿಬಿ ಫ್ಯಾನ್ಸ್. ಕಳೆದ ವರ್ಷ ವನಿತೆಯರು ಚಾಂಪಿಯನ್ ಆದದ್ದು ಹೆಮ್ಮೆಯ ಸಂಗತಿ. 2025ರಲ್ಲಿ ಪುರುಷರ ತಂಡ ಕಪ್ ಎತ್ತುವುದನ್ನು ನಾವು ಕಾಣಬೇಕಿದೆ’ ಎಂದು ಕಳೆದ 26 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ವಾಸಿ ಸಿರುವ, ಕೆಎಸ್‌ಸಿಎಯ ಆಜೀವ ಸದಸ್ಯರೂ ಆಗಿರುವ ರಾಮ್‌ಪ್ರಸಾದ್ ಹೇಳಿದರು.
“ಇಲ್ಲಿ ಆಡಲಾಗುವ 3ನೇ ಟೆಸ್ಟ್ ವೇಳೆ ಆರ್‌ಸಿಬಿ ಅಭಿಮಾನಿಗಳ ದೊಡ್ಡ ದೊಂದು ದಂಡು ನೆರೆಯಲಿದೆ. ಇವರೆಲ್ಲ ಸೇರಿ ತಂಡದ ಮೇಲಿನ ಅಭಿ ಮಾನ ವ್ಯಕ್ತಪಡಿಸಲಿದ್ದಾರೆ’ ಎಂದರು.
“ಇಲ್ಲಿ ಭಾರತ ಆಡಿದ ಯಾವುದೇ ಪಂದ್ಯವನ್ನು ನಾನು ತಪ್ಪಿಸಿಕೊಂಡ ವನಲ್ಲ. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ವನ್ನೂ ವೀಕ್ಷಿಸಿದ್ದೇನೆ. ಗಬ್ಟಾ ದಲ್ಲಿ ಕೊಹ್ಲಿ ಸೆಂಚುರಿ ಹೊಡೆಯ ಬೇಕೆಂಬುದು ನಮ್ಮ ಬಯಕೆ’ ಎಂದು ರಾಮ್‌ಪ್ರಸಾದ್ ಹೇಳಿದರು.
“ಪಂದ್ಯದ ವೇಳೆ ನಾವೆಲ್ಲ ಆರ್‌ಸಿಬಿ ಜೆರ್ಸಿ ಧರಿಸಿ ಬರಲಿದ್ದೇವೆ. ಎಲ್ಲರಿಗೂ ಶಿಸ್ತಿನಿಂದ ಇರುವಂತೆ ಸೂಚಿಸಲಾಗಿದೆ. ಈವರೆಗೆ ಆರ್‌ಸಿಬಿ ಚಾಂಪಿಯನ್ ಆಗಿಲ್ಲ ನಿಜ, ಆದರೆ ಈ ಬಾರಿ ಖಂಡಿತ ಗೆಲ್ಲುತ್ತಾರೆ’ ಎಂಬುದು ಮತ್ತೋರ್ವ ಬ್ರಿಸ್ಬೇನ್ ನಿವಾಸಿ ಅಜಯ್ ಮೋಹನ್ ಪಠಾಣ್ ಅವರ ದೃಢ ನಂಬಿಕೆ.