Advertisement

ನುಡಿದಂತೆ 4 ವರ್ಷ ನಡೆದ ಸಿದ್ದು ಸರ್ಕಾರ

12:57 PM May 23, 2017 | |

ಎಚ್‌.ಡಿ.ಕೋಟೆ: ಕಳೆದ ಮೂರು ವರ್ಷದಿಂದ ಆವರಿಸಿದ್ದ ತೀವ್ರ ಬರಗಾಲದಿಂದ ರಾಜ್ಯ ಸಂಕಷ್ಟದಲ್ಲಿದ್ದರೂ ಅನ್ನ ಇಲ್ಲದೆ ಹಸಿವಿನಿಂದ ಯಾರೊಬ್ಬರು ಬಳಲು ಸರ್ಕಾರ ಬಿಟ್ಟಿಲ್ಲ, ಅನ್ನಭಾಗ್ಯದಿಂದ ಉದ್ಯೋಗ ಭರವಸೆಯಿಂದ ನೆರವಿಗೆ ಬಂದಿದೆ. ಇದು ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಲೋಕೋಪಯೋಗಿ ಸಚಿವ ಹೆಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ಪಟ್ಟಣ ಸಮೀಪದ ಯರಹಳ್ಳಿ ಹ್ಯಾಂಡ್‌ಪೋಸ್ಟ್‌ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗೋದಾಮುಗಳ, ಹರಾಜು ಮಾರುಕಟ್ಟೆ ಹಾಗೂ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದೇ ಹಗರಣವಿಲ್ಲದೆ ಒಳ ಮತ್ತು ಹೊರ ಜಗಳವಿಲ್ಲದೆ 4 ವರ್ಷ ಪೂರೈಸಿದ್ದು ಸ್ಥಿರ ಹಾಗೂ ಅಭಿವೃದ್ಧಿ ಪೂರಕ ಆಡಳಿತ ಕೊಟ್ಟಿದೆ, ಅಷ್ಟೇ ಅಲ್ಲದೆ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ 160 ಭರವಸೆಗಳಲ್ಲಿ ಈಗಾಗಲೇ 155 ಭರವಸೆ ಈಡೇರಿಸಿ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ರೈತರು ತಾವು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಎಪಿಎಂಸಿ ವರದಾನವಾಗಿದ್ದು, ರೈತರ ಬೆಳೆದ ಪದಾರ್ಥಗಳಿಗೆ ಉತ್ತಮ ಬೆಲೆ ಸಿಗುವ ಜೊತೆಗೆ ಮಧ್ಯವರ್ತಿ ಹಾವಳಿ ತಪ್ಪಸಲಿದೆ ಎಂದು ಹೇಳಿದರು.

ಸರ್ಕಾರ ಕಳೆದ ಲೋಕಸಭೆ ಚುನಾವಣೆ ಸಂದರ್ಭ ಹೇಳಿದಂತೆ ಹಲವು ವರ್ಷಗಳ ಬೇಡಿಕೆಯಾಗಿದ್ದ ಸರಗೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ, ತಾಲೂಕು ಕೇಂದ್ರವಾದ ಎಚ್‌.ಡಿ.ಕೋಟೆ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆರಿಸಿ ಪುರಸಭೆಯಾಗಿಸಿದ್ದು, ರೈತರಿಗೆ ನೀರಾವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಾರಕ ನಾಲಾ ಅಭಿವೃದ್ಧಿ ಸೇರಿದಂತೆ ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಸಿದ್ದರಾಮಯ್ಯರು ಮುಖ್ಯಮಂತ್ರಿಯಾದ ನಂತರ ಸಾಕಷ್ಟು ಅನುದಾನ ತಾಲೂಕಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಕ್ಷೇತ್ರದ ಶಾಸಕ ಎಸ್‌.ಚಿಕ್ಕಮಾದು ಮಾತನಾಡಿ, ಯರಹಳ್ಳಿ ಹ್ಯಾಂಡ್‌ಪೋಸ್ಟ್‌ನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಗೋದಾಮು ಸೇರಿದಂತೆ ಹರಾಜು ಮಾರುಕಟ್ಟೆ ಆಡಳಿತ ಕಚೇರಿ ಉದ್ಘಾಟನೆಯಾಗಿರುವುದು ಇಲ್ಲಿನ ರೈತರಿಗೆ ಬಹಳ ಉಪಯುಕ್ತವಾಗಿದ್ದು ರೈತರು ಸದುಪಯೋಗಪಡಿಸಿಕೊಳ್ಳಿ ಎಂದರು.

ಚಾಮರಾಜನಗರ ಜಿಪಂ ಸದಸ್ಯ ಎಂ.ರಾಮಚಂದ್ರ, ಸಂತೆ ಸರಗೂರು ಎಪಿಎಂಸಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಉಪಾಧ್ಯಕ್ಷ ಮಹೇಶ್‌, ನಿರ್ದೇಶಕರಾದ ಜವರನಾಯಕ, ಹೂ.ಕೆ.ಮಹೇಂದ್ರ, ಭಾಸ್ಕರ್‌, ರತ್ನಮ್ಮ, ಮೀನಾಕ್ಷಿ, ಸುಜಾತ, ಜಗದೀಶ್‌(ಅಯ್ಯು) ಮಂಜುನಾಥ್‌, ಕಾಟನ್‌ ಮಹದೇವು, ರಾಮಣ್ಣ ಕಾ¿ìದರ್ಶಿ  ಸೌಜನ್ಯ ತಾಪಂ ಸದಸ್ಯರಾದ ಶಂಬೇಗೌಡ, ಅಂಕಪ್ಪ, ರವಿಕುಮಾರ್‌, ಜನಪದ ಕಲಾವಿದ ಅಮ್ಮ ರಾಮಚಂದ್ರು, ಮುಖಂಡರಾದ ಚಾಮಲಾಪುರ ಗಿರೀಶ್‌, ಮಳಲಿ ಶಾಂತಕುಮಾರ್‌, ಹೆಚ್‌.ಎಲ್‌.ನಾಗೇಂದ್ರ ಅಧಿಕಾರಿಗಳಾದ ಬಿಇಒ ಉದಯಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್‌, ಎಇಇ ನಾಗರಾಜು ಸೇರಿದಂತೆ ಇನ್ನಿತರರು ಇದ್ದರು.

ಎಚ್‌.ಡಿ.ಕೋಟೆ ತಾಲೂಕು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ಜಿಲ್ಲೆಯಲ್ಲೇ ಅತಿ ದೊಡ್ಡ ತಾಲೂಕಾಗಿದ್ದು, ರಾಷ್ಟ್ರದ ಪ್ರಮುಖ ಸಂಪತ್ತುಗಳಾದ ಜಲ, ಅರಣ್ಯ, ವನ್ಯಜೀವಿಗಳ ಜೊತೆಗೆ ಫ‌ಲವತ್ತಾದ ಭೂ ಪ್ರದೇಶ ಹೊಂದಿದ್ದರೂ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಇಡೀ ಕ್ಷೇತ್ರದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದೆ.
-ಡಾ.ಹೆಚ್‌.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ

ಕುತೂಹಲ… ನಡೆ..!
ಚಾಮರಾಜನಗರ ಜಿಪಂ ಅಧ್ಯಕ್ಷ ಎಂ.ರಾಮಚಂದ್ರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತಾಲೂಕಿನ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಪಕ್ಷದ ವರಿಷ್ಠರಿಂದ ಸೂಚನೆ ಸಿಕ್ಕಿರುವುದರಿಂದಲೇ ತಾಲೂಕಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಂದಾಗುತ್ತಿದ್ದರೇ ಎಂದು ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next