Advertisement

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

12:32 AM Nov 26, 2024 | Team Udayavani |

ಬೀದರ್‌: ಮಹಾರಾಜರ ಕಾಲದಲ್ಲಿ ಜಮೀನು ದಾನ ಮಾಡುವಾಗ “ಕಣ್ಣಿಗೆ ಕಾಣುವವರೆಗೂ ನಿನ್ನದೇ, ಬರೆದುಕೋ’ ಎನ್ನುತ್ತಿದ್ದರು. ಈಗ ಕಂಡಿದ್ದೆಲ್ಲ ವಕ್ಫ್ ಆಸ್ತಿ ಆಗಿದೆ. ಬೀದರ್‌ ಕೋಟೆಯೂ ವಕ್ಫ್ ಆಗಿದೆ. ಇದು ಜನರ ಆಸ್ತಿ ಕಬಳಿಸುವ ಲ್ಯಾಂಡ್‌ ಜೆಹಾದ್‌. ಇದಕ್ಕೆ ಸಿದ್ದರಾಮಯ್ಯ ಸರಕಾರ ಬೆಂಬಲ ನೀಡಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

Advertisement

ವಕ್ಫ್ ವಿರುದ್ಧ ಹೋರಾಟದಲ್ಲಿ ಮಾತನಾಡಿದ ಅವರು, ಸಚಿವ ಜಮೀರ್‌ ವಕ್ಫ್ ಆಸ್ತಿಗೆ ಬೇಲಿ ಹಾಕಿ ಹಸುರು ಬಣ್ಣ ಹೊಡೆಯುವಂತೆ ಸೂಚಿಸಿದ್ದಾರೆ. ಅದು ರೈತರ ಹಸುರು ಬಣ್ಣವಲ್ಲ, ಒಂದು ಕೋಮಿನ ಬಣ್ಣವಾಗಿದೆ. ಇದರ ವಿರುದ್ಧ ಶಾಸಕ ಯತ್ನಾಳ್‌ ಜಾಗೃತಿ, ಹೋರಾಟ ಆರಂಭಿಸಿದ್ದಾರೆ. ನಮ್ಮ ಜತೆ ನಿಂತರೆ ನಾವು ನಿಮ್ಮ ಆಸ್ತಿ ಉಳಿಸಿಕೊಡುತ್ತೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next