Advertisement

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

09:48 PM Nov 12, 2024 | Team Udayavani |

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರ ಇರುವಾಗ ಸಿದ್ದರಾಮಯ್ಯ ಅವರ ಮೇಲಿನ ಆಕ್ರೋಶದಿಂದ ಪದೇಪದೆ ಸರ್ಕಾರ ತೆಗಿತೀನಿ, ಸರ್ಕಾರ ತೆಗಿತೀನಿ ಎಂದು ದೇವೇಗೌಡರು ಹೇಳ್ಳೋದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕಿಡಿಕಾರಿದರು.

Advertisement

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಜನವರಿಯಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ದೇವೇಗೌಡರು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದಲ್ಲಿ ಚುನಾಯಿತ 136 ಎಂಎಲ್ ಎಗಳು ಬಾಂಡೆಡ್‌ ಲೇಬರ್ಸ್‌ಗಳಾ?. ಅವರಿಗೇನು ಸ್ವಶಕ್ತಿ, ಸ್ವಬುದ್ಧಿ ಇರಲ್ವಾ? ಎಂದು ಹೇಳಿದರು.

ದೇವೇಗೌಡರ ಮಾತುಗಳು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂಥದ್ದಲ್ಲ, ಅವರ ಹಿರಿತನಕ್ಕೆ ಗೌರವ ಬರುವ ರೀತಿ ಮಾತುಗಳು ಬರಬೇಕು. ಅದು ನಮ್ಮ ಅಪೇಕ್ಷೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next