Advertisement
ಜೆಡಿಎಸ್ ಶಾಸಕರೊಂದಿಗೆ ಬುಧವಾರ(ನ27) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ ”2018 ರಲ್ಲಿ ಇದೇ ಕಾಂಗ್ರೆಸ್ ಸರಕಾರ ಇತ್ತು. ಜಿ.ಟಿ.ದೇವೇಗೌಡರನ್ನು ಬಂಧಿಸಲು ಸಿದ್ಧತೆ ನಡೆಸಲಾಗಿತ್ತು. ನಮ್ಮ ಅಭಿಮಾನಿ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ ಹೇಳಿ,ಜಿ.ಟಿ.ದೇವೇಗೌಡರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ತಂಡ ಸಿದ್ಧವಾಗಿದೆ ಎಂದು ಮುನ್ಸೂಚನೆ ನೀಡಿದರು.ಜಿ.ಟಿ.ದೇವೇಗೌಡರೇನು ಲೂಟಿ ಹೊಡೆದಿದ್ದಾರಾ?. ಆಗ ಕುಮಾರಸ್ವಾಮಿ ಅವರು ಗುಟುರು ಹಾಕಿ ಎಲ್ಲರನ್ನೂ ಓಡಿಸಿದ್ದರು. ಯಾವ ಕೇಸು ಎಂದು ಈಗಿನ ಆಡಳಿತ ಪಕ್ಷವನ್ನು ಕೇಳಿ’ ಎಂದರು.
Related Articles
Advertisement
‘ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಈ ಪರಿಸ್ಥಿತಿ ಬಂತಲ್ಲ. ಯೋಗೇಶ್ವರ್ ಅವರ ಕಾಲು ಹಿಡಿದು ವಿಮಾನದಲ್ಲಿ ಕರೆದುಕೊಂಡು ಹೋಗಿ ರಾಜೀನಾಮೆ ಕೊಡಿಸಿ (ಪರಿಷತ್ ಸದಸ್ಯತ್ವ) ಶಾಸಕ ಮಾಡಿದರು. ಯೋಗೇಶ್ವರ್ ಅವರು ಒಳ್ಳೆಯ ಕೆಲಸ ಮಾಡಲಿ, ನಾವೂ ಅವರ ಹತ್ತಿರ ಕೆಲಸ ಮಾಡಿಸಿಕೊಳ್ಳುತ್ತೇವೆ’ ಎಂದರು.
‘2004 ರಲ್ಲಿ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಅವರ ಮಾತು ಕೇಳಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ನನ್ನ, ದೇವೇಗೌಡ್ರ ಮಾತು ಕೇಳಿ ಈ ಪರಿಸ್ಥಿತಿ ಬಂತು. ಮೋದಿ ಅವರ ಮಾತು ಕೇಳಿದರೆ ರಾಜಕೀಯವೇ ಬೇರೆ ದಿಕ್ಕಿಗೆ ಹೋಗುತ್ತಿತ್ತು. ನಮಗೆ ಜೆಡಿಎಸ್ ನಲ್ಲಿ ದೇವೇಗೌಡರು, ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕರು’ ಎಂದರು.
‘ಆವತ್ತು ಒಬ್ಬರು ನಾಯಕನ ಮನೆಯಲ್ಲಿ ಕುಳಿತಿದ್ದೆ, ಐವರನ್ನು ಕರೆದುಕೊಂಡು ಬರುತ್ತೇನೇ ನೀವು ಡಿಸಿಎಂ ಆಗುತ್ತೀರಿ ಎಂದಿದ್ದರು. ಕಾಲ ಬಂದಾಗ ಅವರ ಹೆಸರು ಹೇಳುತ್ತೇನೆ.ಯಾರು ಯಾರು ಲೂಟಿ ಮಾಡಿ ದ್ದಾರೆ ಎನ್ನುವುದನ್ನು ಬಹಿರಂಗಪಡಿಸುತ್ತೇನೆ. ಅಧಿಕಾರದ ಆಸೆ ಇದ್ದರೆ ನಾನು ಅಂದೇ ಡಿಸಿಎಂ ಆಗಬಹುದಿತ್ತು’ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಟಿಡಿ ಪುತ್ರಜೆಡಿಎಸ್ ನ ಮಹತ್ವದ ಸುದ್ದಿಗೋಷ್ಠಿಯಲ್ಲಿ, ಜೆಡಿಎಸ್ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿರುವ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಶಾಸಕ ಜಿ.ಟಿ.ಹರೀಶ್ ಅವರು ಉಪಸ್ಥಿತರಿದ್ದರು. ಎರಡೂ ಪಕ್ಷಗಳೂ ಒಟ್ಟಾಗಿ ಎಲ್ಲಾ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕರು ಹೇಳಿಕೆ ನೀಡಿದರು.