Advertisement

ಬಂಟಕಲ್ಲು ಮಧ್ವ ವಾದಿರಾಜ ಕಾಲೇಜು; ವರ್ಣೋತ್ಸವಕ್ಕೆ ಚಾಲನೆ

12:30 AM Mar 08, 2019 | |

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ತುಳುನಾಡ ಪರಂಪರೆ’ ಶೀರ್ಷಿಕೆಯೊಂದಿಗೆ ಆಯೋಜಿಸಲಾಗಿರುವ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ಎರಡು ದಿನಗಳ ವರ್ಣೋ ತ್ಸವವನ್ನು ಉಡುಪಿ ಶ್ರೀ  ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಗುರುವಾರ ಉದ್ಘಾಟಿಸಿದರು.

Advertisement

ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಮೈಸೂರು ಶಶಿ ಎಕ್ಸ್‌ಪೋರ್ಟ್‌ ಪ್ರೈ.ಲಿ.ನ ಹಿರಿಯ ಕೈಗಾರಿಕಾ ಎಂಜಿ ನಿಯರ್‌ ನಿಹಾಲ್‌ ಶೆಟ್ಟಿ, ಮತ್ತು ಬೆಂಗಳೂರು ಸ್ಯಾಪ್‌ ಲ್ಯಾಬ್ಸ್ ಇಂಡಿಯಾ ಪ್ರೈ. ಲಿ.ನ ಡೆವಲಪರ್‌ ಗಗನ್‌ ಪ್ರಭು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿ ರತ್ನ ಕುಮಾರ್‌ ಮಾತನಾಡಿದರು. ಕಾರ್ಯಕ್ರಮದ ಉಸ್ತುವಾರಿಗಳಾದ ಪ್ರೊ| ರವಿನಾರಾಯಣ ರಾವ್‌, ಪ್ರೊ| ಶರತ್‌ ಕುಮಾರ್‌, ಪ್ರೊ| ದೀಪಕ್‌ ರಾವ್‌, ಪ್ರೊ| ರೆನಿಟಾ ಮೋನಿಸ್‌, ಪ್ರೊ| ಅನಂತೇಶ್‌ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ವೈಷ್ಣವಿ ಪೈ ಮತ್ತು ಸ್ವಸ್ತಿ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಪ್ರೊ| ಅನುಜ್ಞಾರಾವ್‌ ಮತ್ತು ಪ್ರೊ| ರೋಹಿತ್‌ ಬಹುಮಾನಿತರ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಪ್ರೊ| ಡಾ| ತಿರುಮಲೇಶ್ವರ ಭಟ್‌ ಸ್ವಾಗತಿಸಿದರು. ಸೂರಜ್‌ ಶೆಟ್ಟಿ  ಮತ್ತು ರತ್ನಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ಕಾಮತ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next