ವೇದವನ್ನು ಅಪ್ರಮಾಣ ಎಂದು ಹೇಳುವ ಪ್ರವರ್ತಕರೂ ಇದ್ದಾರೆ ಎಂಬ ಪ್ರಶ್ನೆ ಬರುತ್ತದೆ. ವೇದ ಅಪೌರುಷೇಯವಾದ ಕಾರಣ ಅಲ್ಲಿ ಪುರುಷದೋಷಗಳಿಲ್ಲ ಎಂಬ ಕಾರಣಕ್ಕೆ ಪ್ರಾಮಾಣ್ಯ ಸಿದ್ಧವಾಗುತ್ತದೆ. ಒಂದು ಜಾಗವಿದೆ ಎಂದಿಟ್ಟುಕೊಳ್ಳಿ. ಆ ಭೂಮಿಯನ್ನು ನಿನ್ನದಲ್ಲ ಎಂದು ಯಾರೋ ಹೇಳಿದರೆ ಆಗುತ್ತದೋ? ಆ ಕುಟುಂಬದ ಹಕ್ಕುದಾರರೇ ಬಂದು ಸಾಕ್ಷಿ ಒದಗಿಸಬೇಕಲ್ಲ? ಎಲ್ಲ ಪ್ರವರ್ತಕರೂ ಪೌರುಷೇಯರಾದದ್ದರಿಂದ ಅಪೌರುಷೇಯಕ್ಕೆ ಇನ್ನೊಂದು ಅಪೌರುಷೇಯವೇ ಬರಬೇಕಲ್ಲ? ಪುರುಷಪ್ರಯುಕ್ತವಾದ ದೋಷವಿಲ್ಲ ಎಂದಾದರೆ ಜ್ಞಾನಾದಿಗಳೂ ಇಲ್ಲವೆಂದು ಹೇಳಿದಂತಾಗುವುದಿಲ್ಲವೆ? ವೇದ= ವೇದಯತೀತಿ ವೇದಃ. ವೇದವನ್ನು ಓದಿದರೆ ಅರ್ಥವಾಗಬೇಕು. ಅರ್ಥವಾಗುವುದಾದರೆ ಪ್ರಾಮಾಣ್ಯವನ್ನು ಒಪ್ಪಿಕೊಳ್ಳಬೇಕು. ಅರ್ಥ ಮಾಡಿಕೊಳ್ಳಲು ಗುಣಗಳು ಬೇಡ, ವೇದತಣ್ತೀ ಸಾಕು. ಓದಿದಾಗ ಅರ್ಥವಾದರೆ ಅದು ಪ್ರಮಾಣವೆಂದರೆ ನೀರಿನ ಮೇಲೆ ಇರುವೆ ಹೋದಾಗ ಅಕ್ಷರ ಬರೆದಂತೆ (ಪಿಪೀಲಿಕಾ ಪಂಕ್ತಿ ನ್ಯಾಯ) ಕಾಣುತ್ತದೆ. ಅದನ್ನು ಪ್ರಮಾಣವೆನ್ನುತ್ತೀರಾ? ಎಂದು ಪ್ರಶ್ನೆ ಬರುತ್ತದೆ. ಇಂದ್ರಿಯಗಳಲ್ಲಿಯೂ ಜ್ಞಾನ ಬರುತ್ತದೆ. ಅದನೆೆ°ಲ್ಲ ಪ್ರಾಮಾಣ್ಯವೆನ್ನುತ್ತೇವಾ? ಒಮ್ಮೊಮ್ಮೆ ಕಣ್ಣು ಪ್ರತ್ಯಕ್ಷದಲ್ಲಿದ್ದರೂ ಸತ್ಯವನ್ನು ಹೇಳುವುದಿಲ್ಲ. ಹಾಗೆಂದು ಅದರ ಪ್ರಾಮಾಣ್ಯ ಹೋಗುವುದಿಲ್ಲ. ಕೆಲವು ಬಾರಿ ಕಣ್ಣು ದೋಷಯುತವಾಗಿರುತ್ತದೆ. ಆಗ ಕನ್ನಡಕ ಹಾಕಬೇಕಾಗುತ್ತದೆ ವಿನಾ ಕಣ್ಣನ್ನು ಅಲ್ಲಗಳೆಯುವುದಿಲ್ಲ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811