Advertisement
ಆತ್ಮನ ಅನುಭವದಲ್ಲಿ ಒಂದೇ ಇದ್ದದ್ದರಿಂದ ತನ್ನ ದೇಹದಲ್ಲಿ ಆದ ಮಾರ್ಪಾಡನ್ನು ಒಬ್ಬನೇ ಆಗಿ ಕಾಣುತ್ತಾನೆ. ಇಲ್ಲಿ ಆತ್ಮನೂ ಬೇರೆ ಬೇರೆಯಾಗಿ ಕಾಣಬೇಕಿತ್ತು. ಆತ್ಮನೇ ಬೇರೆ, ದೇಹವೇ ಬೇರೆ, ಆದ್ದರಿಂದ ಆತ್ಮನಿಗೆ ನಾಶವಿಲ್ಲ, ದೇಹವಿಲ್ಲವಾಗುತ್ತದೆ ವಿನಾ “ನಾನು’, “ಅವರು’ ಇಲ್ಲವಾಗುವುದಿಲ್ಲ ಎಂಬ ಉತ್ತರ ಶ್ರೀಕೃಷ್ಣನದು. ಸಂಬಂಧಗಳು ಹೋಗುತ್ತದೆ ಎನ್ನುವುದಾದರೆ ಅದು ಎಂದಾದರೂ ಹೋಗುವಂಥದ್ದೇ. ಕೌಮಾರ್ಯ, ಯೌವ್ವನ ಹೋದಾಗಲೂ ದುಃಖಬಂದಿತ್ತೇ? ವಾರ್ಧಕ್ಯದಲ್ಲಿ ದುಃಖವಾಗುತ್ತದೆ ಏಕೆಂದರೆ ಇದುವರೆಗೆ ಏನೂ ಸಾಧನೆ ಮಾಡಲಿಲ್ಲ. ಸಾಧನೆಯನ್ನು ಮುಂದೆ ಮಾಡೋಣ ಎಂದು ಮುಂದೂಡುತ್ತಿರುತ್ತಾರೆ. ಮುಂದೆ ಮಾಡಲಿಕ್ಕಾಗಲಿಲ್ಲ, ಇದುವರೆಗೆ ಮಾಡಲಿಲ್ಲವೆಂದು ವಾರ್ಧಕ್ಯದಲ್ಲಿ ಚಿಂತೆ ಮೂಡುತ್ತದೆ. ಇದರಿಂದ ದುಃಖ ಬರುವುದೆ ವಿನಾ ವಾರ್ಧಕ್ಯಕ್ಕಾಗಿಯಲ್ಲ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811