Advertisement
ಪುರುಷರ ಡಬಲ್ಸ್ ಟೆನಿಸ್ ಸ್ಪರ್ಧೆಯ 2ನೇ ಸುತ್ತಿನ ಮುಖಾಮುಖೀಯಲ್ಲಿ ಕೆಳ ರ್ಯಾಂಕಿಂಗ್ನ ಉಜ್ಬೆಕಿಸ್ಥಾನದ ಜೋಡಿಯಾದ ಸರ್ಗೇಯಿ ಫೋಮಿನ್-ಖುಮೊಯುನ್ ಸುಲ್ತಾನೋವ್ ಭಾರತದ ಆಟಗಾರರರನ್ನು 2-6, 6-3, 10-6 ಅಂತರದಿಂದ ಮಣಿಸಿ ದೊಡ್ಡ ದೊಂದು ಏರುಪೇರಿನ ಫಲಿತಾಂಶ ದಾಖಲಿಸಿತು. ಸೂಪರ್ ಟೈ ಬ್ರೇಕರ್ನಲ್ಲಿ ಭಾರತಕ್ಕೆ ಭಾರೀ ಹಿನ್ನಡೆಯಾಯಿತು. ಆರಂಭದಲ್ಲೇ 3-0 ಮುನ್ನಡೆ ಸಾಧಿಸಿದ ಉಜ್ಬೆಕಿಸ್ಥಾನದ ಆಟಗಾರರು ಬಳಿಕ ಇದನ್ನು 5-1ಕ್ಕೆ ವಿಸ್ತರಿಸಿದರು.
ವನಿತಾ ಸಿಂಗಲ್ಸ್ನಲ್ಲಿ ಅಂಕಿತಾ ರೈನಾ ಮತ್ತು ಋತುಜಾ ಭೋಂಸ್ಲೆ ಗೆಲುವಿನ ಶುಭಾರಂಭ ಮಾಡಿದ್ದಾರೆ. ಅಂಕಿತಾ ರೈನಾ ಉಜ್ಬೆಕಿಸ್ಥಾನದ ಸಾಬ್ರಿನಾ ಒಲಿಮೊjನೋವಾ ಅವರಿಗೆ ಒಂದೂ ಅಂಕ ಬಿಟ್ಟುಕೊಡದೆ 6-0, 6-0 ಅಂತರದ ಸುಲಭ ಜಯ ಸಾಧಿಸಿದರು. ಇವರ ಮುಂದಿನ ಎದುರಾಳಿ ಹಾಂಕಾಂಗ್ನ ಆದಿತ್ಯ ಪಿ. ಕರುಣಾರತ್ನೆ. ಋತುಜಾ ಭೋಂಸ್ಲೆ ಕಜಕಸ್ಥಾನದ ಅರುಜಾನ್ ಸಗಂದಿಕೋವಾ ವಿರುದ್ಧ 7-6 (2), 6-2 ಅಂತರದ ಜಯ ಸಾಧಿಸಿದರು. ತಜಿಕಿಸ್ಥಾನದ ಎದುರಾಳಿ ಸುನಾತುಲ್ಲೊ ಇಸ್ರೋಯಿಲೋವ್ ಹಿಂದೆ ಸರಿದ ಕಾರಣ ರಾಮ್ಕುಮಾರ್ ರಾಮನಾಥನ್ ಅವರಿಗೆ ವಾಕ್ಓವರ್ ಲಭಿಸಿತು.