Advertisement

ಮಾತೆಯ ಮಕ್ಕಳಾಗಿ ಜೀವಿಸುವ ಪ್ರಯತ್ನ ನಡೆಸೋಣ : ಫಾ|ಸಲ್ದಾನಾ

04:59 PM Feb 02, 2022 | Team Udayavani |

ಶಿರ್ವ : ದೇವರಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಭಕ್ತಿಯಿಂದ ಪ್ರಭು ಏಸುವಿನ ಸಮರ್ಪಣೆ ಮಾಡಿದಲ್ಲಿ ,ಪೀಡೆ, ಕಷ್ಟ ಕಾರ್ಪಣ್ಯಗಳು ದೂರವಾಗಿ ಜೀವನ ಪಾವನವಾಗುತ್ತದೆ. ಜೀವನದಲ್ಲಿ ಪವಿತ್ರರಾಗಲು ಮಾತೆ ಮೇರಿಯ ಆದರ್ಶಗಳನ್ನು ಪಾಲಿಸಿಕೊಂಡು ದೈನಂದಿನ ಬದುಕಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಮಾತೆಯ ಮಕ್ಕಳಾಗಿ ಜೀವಿಸುವ ಪ್ರಯತ್ನ ನಡೆಸೋಣ ಎಂದು ಮಂಗಳೂರು ಬಿಜೈ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ.ಡಾ| ಜೋನ್ ಬ್ಯಾಪ್ಟಿಸ್ಟ್‌ ಸಲ್ದಾನಾ ಹೇಳಿದರು.

Advertisement

ಅವರು ಬುಧವಾರ ಬೆಳಿಗ್ಗೆ ಶಿರ್ವ ಆರೋಗ್ಯ ಮಾತಾ (ಸಾವುದ್‌ ಅಮ್ಮನವರ)ದೇವಾಲಯದ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಶಿರ್ವ ಆರೋಗ್ಯ ಮಾತೆಯ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ|ಡೆನ್ನಿಸ್‌ಡೇಸಾ, ಸಹಾಯಕ ಧರ್ಮಗುರುಗಳಾದ ರೆ|ಫಾ| ರೋಲ್ವಿನ್
ಅರಾನ್ಹಾ ಮತ್ತು ರೆ|ಫಾ|ಸ್ಟೀವನ್ ನೆಲ್ಸನ್ ಪೆರಿಸ್‌, ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ 50ಕ್ಕೂ ಹೆಚ್ಚು ಧರ್ಮಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು.

ಕಾಪು ಶಾಸಕ ಲಾಲಾಜಿ.ಆರ್‌.ಮೆಂಡನ್, ಮಾಜಿ ಸಚಿವ ವಿನಯಕುಮಾರ್‌ ಸೊರಕೆ ,ಚರ್ಚ್‌ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೊ, ಸದಸ್ಯರಾದ ಮೆಲ್ವಿನ್ ಅರಾನ್ಹಾ, ಜೂಲಿಯಾನ್ ರೊಡ್ರಿಗಸ್‌,ನೋರ್ಬರ್ಟ್‌ ಮಚಾದೋ, ಮೆಲ್ವಿನ್ ಡಿ’ಸೋಜಾ,ಡಯಾನಾ ಸಲ್ದಾನಾ, ಪುಷ್ಪಾ ಫೆರ್ನಾಂಡಿಸ್, ವಿಲ್ಸನ್ ರೊಡ್ರಿಗಸ್‌, ಪ್ರೊ| ರೊನಾಲ್ಡ್‌ ಮೊರಾಸ್‌ ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ.

Advertisement

ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಭಕ್ತಾಧಿಗಳಿಗೆ ದೇವರ ಅಶೀರ್ವಾದ ಲಭಿಸಿ ಕೃತಾರ್ಥರಾಗಲೆಂದು ಕೋರುತ್ತೇನೆ. ಮಾತೆ ಮೇರಿಯ ಅನೇಕ ಪವಾಡಗಳು ಭಕ್ತರ ಕುಟುಂಬದಲ್ಲಿ ನಡೆದು ಭಕ್ತಾಧಿಗಳಿಗೆ ರಕ್ಷಣೆ ಸಿಗಲಿ.

– ರೆ|ಫಾ|ಡೆನ್ನಿಸ್‌ಡೇಸಾ, ಶಿರ್ವ ಚರ್ಚ್‌ ಧರ್ಮಗುರುಗಳು

Advertisement

Udayavani is now on Telegram. Click here to join our channel and stay updated with the latest news.

Next