Advertisement

MP ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

10:55 PM Nov 12, 2024 | Team Udayavani |

ಚಿಕ್ಕಬಳ್ಳಾಪುರ: ಇನ್ನು ಮುಂದೆ ಚಿಕ್ಕಬಳ್ಳಾಪುರ ಸಂಸದ ಡಾ| ಕೆ. ಸುಧಾಕರ್‌ ವಿರುದ್ಧ ಏನೂ ಮಾತನಾಡಬಾರದು ಎಂಬ ತೀರ್ಮಾನ ಮಾಡಿದ್ದೇನೆ. ಹಾಗಾಗಿ ಏನೂ ಮಾತನಾಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಅಚ್ಚರಿಯ ಹೇಳಿಕೆ ನೀಡಿದರು.

Advertisement

ಮಂಗಳವಾರ ಬೆಳಗ್ಗೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದ ಅಹವಾಲು ಆಲಿಸಿದ ಅನಂತರ ಸುಧಾಕರ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸುಧಾಕರ್‌ ವಿರುದ್ಧ ಏನೂ ಮಾತನಾಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದರು. ತಳಮಟ್ಟದಲ್ಲಿ ರಾಜಕಾರಣ ಮಾಡಬೇಕು. ಚುನಾವಣೆ ಸಮಯದಲ್ಲಿ ಮಾತ್ರ ಕಣ್ಣೀರು ಹಾಕಿದರೆ ಯಾರೂ ಮತ ಹಾಕುವುದಿಲ್ಲ. ನಾನು ತಳ ಮಟ್ಟದ ರಾಜಕಾರಣವನ್ನು ಅರ್ಥ ಮಾಡಿಕೊಂಡು 25 ದಿನದಲ್ಲಿ ದೊಡ್ಡ ತಲೆಯನ್ನು ಹೊಡೆದು ವಿಧಾನಸಭೆ ಪ್ರವೇಶಿಸಿದ್ದೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next