Advertisement

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

12:43 AM Nov 11, 2024 | Team Udayavani |

ಮಣಿಪಾಲ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆರೋಗ್ಯ ಸುಧಾರಣೆಗೂ ಆದ್ಯತೆ ನೀಡಬೇಕು. ದೈಹಿಕ ಆರೋಗ್ಯಕ್ಕೆ ನೀಡುವ ಆದ್ಯತೆಯ ಮೇಲೆ ನಮ್ಮ ಭವಿಷ್ಯ ಅವಲಂಬಿತವಾಗಿರುತ್ತದೆ ಎಂದು ಇಂಡಿಯನ್‌ ಕೌನ್ಸಿಲ್‌ ಆಫ್ ಮೆಡಿಕಲ್‌ ರಿಸರ್ಚ್‌ನ ಮಹಾನಿರ್ದೇಶಕ ರಾಜೀವ್‌ ಬಹ್ಲ ಹೇಳಿದರು.

Advertisement

ರವಿವಾರ ಕೆಎಂಸಿ ಗ್ರೀನ್ಸ್‌ ನಲ್ಲಿ ಮಾಹೆ ವಿಶ್ವವಿದ್ಯಾನಿಲಯದ 32ನೇ ಘಟಿಕೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಶಸ್ತಿಗಳು, ಸಾಧನೆ, ಮೈಲುಗಲ್ಲುಗಳ ಬಗ್ಗೆ ಮಾತ್ರ ಗಮನಹರಿಸದೆ ಯಾವುದು ಸಮರ್ಥ ವಿಚಾರವಾಗಿರುತ್ತದೆಯೋ ಅದರ ಬಗ್ಗೆ ಗಮನ ಹರಿಸಬೇಕು. ಆತ್ಮವಿಶ್ವಾಸದಿಂದ ಜೀವನದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಲಿದೆ.

ಸಮಯ, ಶಕ್ತಿ ಮತ್ತು ಯೋಗಕ್ಷೇಮವು ಅಮೂಲ್ಯ ಆಸ್ತಿಗಳಾಗಿವೆ. ಕೌಶಲ ಹಾಗೂ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಹೂಡಿಕೆಯ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಸಮತೋಲನ, ಆತ್ಮಗೌರವ ಮತ್ತು ಸಮರ್ಪಣೆ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವ ಅಗತ್ಯವಿದೆ ಎಂದರು.

ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಮಾತನಾಡಿ, ಮಾಹೆಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರತಿಭೆಯ ಜತೆಗೆ ಸಮಗ್ರತೆ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ತಿಳಿದುಕೊಳ್ಳುತ್ತಾರೆ. ಈ ಮೌಲ್ಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಸಮಾಜದಲ್ಲಿ ಮುನ್ನಡೆಯುವಂತಾಗಲಿ ಎಂದು ಹಾರೈಸಿದರು.

Advertisement

ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಲ್ಲಿ ಅವರ ಹೊಂದಾಣಿಕೆ ಮತ್ತು ನಿರಂತರ ಉತ್ಸಾಹವೂ ಕಾರಣವಾಗಿದೆ. ಮಾಹೆಯಲ್ಲಿ ಕುತೂಹಲ, ನಾವೀನ್ಯತೆ ಮತ್ತು ಸಮಗ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಬೇಕು ಎಂದರು.

ಸಾಧಕರಿಗೆ ಡಾ| ಟಿ.ಎಂ.ಎ. ಪೈ ಚಿನ್ನದ ಪದಕಅರ್ನವ್‌ ಅಗ್ರವಾಲ್‌ ಬಿ., ತ್ರಾಶಾ ಶೆಟ್ಟಿ, ಜಾನೆಟ್‌ ಕೆ. ಜಾಯ್‌, ರಾಹುಲ್‌ ನೆರ್ಲಿಕರ್‌ ಅವರಿಗೆ 2024ರ ಡಾ| ಟಿ.ಎಂ.ಎ. ಪೈ ಚಿನ್ನದ ಪದಕ ನೀಡಲಾಯಿತು.

ಮಾಹೆ ಟ್ರಸ್ಟಿ ವಸಂತಿ ಆರ್‌. ಪೈ, ಸಹಕುಲಪತಿಗಳಾದ ಡಾ| ನಾರಾಯಣ ಸಭಾಹಿತ್‌, ಡಾ| ದಿಲೀಪ್‌ ಜಿ. ನಾಯಕ್‌, ಕುಲಸಚಿವ ಡಾ| ಪಿ.ಗಿರಿಧರ್‌ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ| ವಿನೋದ್‌ ಥಾಮಸ್‌ ಸಹಿತ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಹಕುಲಪತಿ ಡಾ| ಶರತ್‌ ಕೆ. ರಾವ್‌ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಡಾ | ಅಂಕಿತಾ ಶೆಟ್ಟಿ ನಿರೂಪಿಸಿದರು. ಪಿ.ಎಸ್‌.ಪಿ.ಎಚ್‌. ನಿರ್ದೇಶಕ ಡಾ| ಚೆರಿಯನ್‌ ವರ್ಗಿಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next